ಮೃಗಾಲಯ ಇಂದಿನಿಂದ ಪುನಾರಂಭ

Published : Feb 03, 2017, 02:43 PM ISTUpdated : Apr 11, 2018, 12:39 PM IST
ಮೃಗಾಲಯ ಇಂದಿನಿಂದ ಪುನಾರಂಭ

ಸಾರಾಂಶ

ಅದಲ್ಲದೆ ಕಳೆದ ವರ್ಷದ ಡಿಸೆಂಬರ್ 28ರಂದು ಮೃಗಾಲಯದ 6 ಪಕ್ಷಿಗಳು ಸಾವನಪ್ಪಿದ್ದವು.

ಮೈಸೂರು(ಫೆ.03): ಹಕ್ಕಿ ಜ್ವರ ಕಂಡುಬಂದ ಕಾರಣದಿಂದ ಕಳೆದ  ಒಂದು ತಿಂಗಳಿನಿಂದ ಸಾಂಸ್ಕೃತಿಕ ನಗರಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯ  ಇಂದಿನಿಂದ ಮತ್ತೆ ಆರಂಭವಾಗಿದೆ. ಪಕ್ಷಿಗಳಿಗೆ  ಮಾರಕ ಹೆಚ್ 5, ಎನ್ 8 ವೈರಾಣು ಮೃಗಾಲಯದಲ್ಲಿರುವ ಹಕ್ಕಿಗಳಲ್ಲಿ ಕಾಣಿಸಿಕೊಂಡಿತ್ತು. ಅದಲ್ಲದೆ ಕಳೆದ ವರ್ಷದ ಡಿಸೆಂಬರ್ 28ರಂದು ಮೃಗಾಲಯದ 6 ಪಕ್ಷಿಗಳು ಸಾವನಪ್ಪಿದ್ದವು. ಕೇಂದ್ರ ಮೃಗಾಲಯ ಪ್ರಾಧಿಕಾರದ  ಆದೇಶದ ಮೇರೆಗೆ ಒಂದು ತಿಂಗಳು ಪ್ರವಾಸಿಗರನ್ನು ನಿಷೇಧಿಸಲಾಗಿತ್ತು.

ಹಕ್ಕಿಗಳ ರಕ್ತ ಮತ್ತು ಮಲದ ಮಾದರಿಗಳನ್ನು ಭೋಪಾಲ್'ನಲ್ಲಿರುವ  ಪ್ರಯೋಗಲಾಯಕ್ಕೆ ಕಳುಹಿಸಿ ಪರೀಕ್ಷಿಸಲಾಗಿತ್ತು. ಕಳುಹಿಸಿದ  ಎರಡೂ ಮಾದರಿಗಳು ನೆಗೆಟಿವ್ ಆಗಿದ್ದ ಕಾರಣ ಇಂದಿನಿಂದ ಮೃಗಾಲಯಕ್ಕೆ ಪ್ರವಾಸಿಗರನ್ನು  ತೆರಳಲು ಅನುಮತಿ ನೀಡಲಾಗಿದ್ದು, ಬರುವ ಪ್ರವಾಸಿಗರಿಗೆ ಸಿಹಿ ವಿತರಿಸಲಾಗುತ್ತಿದೆ.ಚಾಮರಾಜೇಂದ್ರ ಮೃಗಾಲಯದಲ್ಲಿ 836 ಪಕ್ಷಿಗಳು ಹಾಗೂ 1470 ಪ್ರಾಣಿಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!