ಅಂಬಿ ನಡೆ ಇನ್ನೂ ನಿಗೂಢ : ಪತ್ನಿ ಸುಮಲತಾಗೆ ಟಿಕೆಟ್‌ ಕೇಳ್ತಾರಾ?

Published : Apr 03, 2018, 07:03 AM ISTUpdated : Apr 14, 2018, 01:13 PM IST
ಅಂಬಿ ನಡೆ ಇನ್ನೂ ನಿಗೂಢ : ಪತ್ನಿ ಸುಮಲತಾಗೆ ಟಿಕೆಟ್‌ ಕೇಳ್ತಾರಾ?

ಸಾರಾಂಶ

ಮಾಜಿ ಸಚಿವ ಹಾಗೂ ರೆಬೆಲ್‌ಸ್ಟಾರ್‌ ಅಂಬ​ರೀಶ್‌ ಅವರ ಮುಂದಿನ ನಡೆ ಏನು ಎಂಬ ಬಗೆ​ಗಿನ ಗೊಂದ​ಲ​ಗ​ಳನ್ನು ಪರಿ​ಹ​ರಿ​ಸಿ​ಕೊ​ಳ್ಳಲು ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರೇ ಖುದ್ದು ಅಖಾ​ಡಕ್ಕೆ ಇಳಿ​ದಿದ್ದು, ನೇರ ಭೇಟಿಯ ನಂತರ ಅಂಬ​ರೀಶ್‌ ಟಿಕೆಟ್‌ ಕುರಿತು ಅಂತಿಮ ನಿರ್ಧಾ​ರ​ ಕೈಗೊ​ಳ್ಳ​ಲಿ​ದ್ದಾ​ರೆ.

ಬೆಂಗ​ಳೂರು : ಮಾಜಿ ಸಚಿವ ಹಾಗೂ ರೆಬೆಲ್‌ಸ್ಟಾರ್‌ ಅಂಬ​ರೀಶ್‌ ಅವರ ಮುಂದಿನ ನಡೆ ಏನು ಎಂಬ ಬಗೆ​ಗಿನ ಗೊಂದ​ಲ​ಗ​ಳನ್ನು ಪರಿ​ಹ​ರಿ​ಸಿ​ಕೊ​ಳ್ಳಲು ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರೇ ಖುದ್ದು ಅಖಾ​ಡಕ್ಕೆ ಇಳಿ​ದಿದ್ದು, ನೇರ ಭೇಟಿಯ ನಂತರ ಅಂಬ​ರೀಶ್‌ ಟಿಕೆಟ್‌ ಕುರಿತು ಅಂತಿಮ ನಿರ್ಧಾ​ರ​ ಕೈಗೊ​ಳ್ಳ​ಲಿ​ದ್ದಾ​ರೆ.

ಅಂಬ​ರೀಶ್‌ ಅವರು ಸ್ಪರ್ಧಿ​ಸ​ಬ​ಯ​ಸಿ​ದರೆ ಅವ​ರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡು​ವುದು ಖಚಿತ. ಆದರೆ, ಸ್ಪರ್ಧೆ ಬಗ್ಗೆ ಅಂಬ​ರೀಶ್‌ ಅವರ ನಡೆ ಏನು ಎಂಬುದೇ ಕಾಂಗ್ರೆಸ್‌ ನಾಯ​ಕ​ತ್ವಕ್ಕೆ ಬಗೆಹ​ರಿ​ದಿಲ್ಲ. ಅಂಬ​ರೀಶ್‌ ಅವ​ರಿಗೆ ತಮ್ಮನ್ನು ಪಕ್ಷ ಕಡೆ​ಗ​ಣಿ​ಸಿದೆ ಎಂಬ ಬೇಸ​ರ​ವಿದೆ. ವಿಶೇ​ಷ​ವಾಗಿ ಮಂಡ್ಯ ಜಿಲ್ಲೆಯ ನಿರ್ಧಾ​ರ​ಗಳ ವಿಚಾ​ರ​ದಲ್ಲಿ ಅಂಬ​ರೀಶ್‌ ಅವ​ರನ್ನು ಪಕ್ಷದ ನಾಯ​ಕತ್ವ ವಿಶ್ವಾ​ಸಕ್ಕೆ ತೆಗೆ​ದು​ಕೊ​ಳ್ಳು​ತ್ತಿಲ್ಲ ಎಂಬ ಭಾವನೆ ಹೊಂದಿ​ದ್ದಾರೆ. ಹೀಗಾ​ಗಿ ಮಂಡ್ಯ ಕ್ಷೇತ್ರದ ಟಿಕೆಟ್‌ಗಾಗಿಯೂ ಅವರು ಅರ್ಜಿ ಸಲ್ಲಿ​ಸಿಲ್ಲ ಹಾಗೂ ಈ ಬಗ್ಗೆ ಯಾವ ನಾಯ​ಕ​ರೊಂದಿಗೂ ಮಾತು​ಕತೆ ನಡೆ​ಸಿಲ್ಲ. ಇದು ಗೊಂದಲ ಸೃಷ್ಟಿ​ಸಿದೆ. ಹೀಗಾಗಿ, ಅಂಬ​ರೀಶ್‌ ಮನ​ಸ್ಸಿ​ನ​ಲ್ಲಿದೆ ಏನಿದೆ ಎಂಬು​ದನ್ನು ತಿಳಿದು ಅವ​ರಿಗೆ ಟಿಕೆಟ್‌ ನೀಡುವ ಅಥವಾ ಅವರ ಬದ​ಲಾಗಿ ಮಂಡ್ಯ ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುವ ಹೊಣೆ​ಯನ್ನು ಕಾಂಗ್ರೆಸ್‌ ನಾಯ​ಕತ್ವ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವ​ರಿಗೆ ಬಿಟ್ಟಿದೆ.

ಈ ಹಿನ್ನೆ​ಲೆ​ಯಲ್ಲಿ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಅವರು ಇತ್ತೀ​ಚೆಗೆ ಅಂಬ​ರೀಶ್‌ ಅವ​ರನ್ನು ದೂರ​ವಾ​ಣಿ​ಯಲ್ಲಿ ಸಂಪ​ರ್ಕಿಸಿ ನಿರ್ಧಾ​ರ​ವೇನು ಎಂದು ಪ್ರಶ್ನಿ​ಸಿದ್ದು, ಅದಕ್ಕೆ ಅಂಬ​ರೀಶ್‌ ಮನೆಗೆ ಊಟಕ್ಕೆ ಬನ್ನಿ ಅಲ್ಲೇ ಮಾತ​ನಾ​ಡೋಣ ಎಂದಿ​ದ್ದಾರೆ ಎನ್ನ​ಲಾ​ಗಿದೆ. ಈ ಹಿನ್ನೆ​ಲೆ​ಯಲ್ಲಿ ಸೋಮ​ವಾರ ರಾತ್ರಿ ಸಿಎಂ ಅವರು ಅಂಬ​ರೀಶ್‌ ಮನೆಗೆ ಊಟಕ್ಕೆ ಹೋಗ​ಬೇ​ಕಿತ್ತು. ಆದರೆ, ಮೈಸೂ​ರಿ​ನಲ್ಲಿ ಅವರ ಕಾರ್ಯ​ಕ್ರಮ ತಡ​ವಾದ ಹಿನ್ನೆ​ಲೆ​ಯಲ್ಲಿ ತೆರ​ಳ​ಲಿಲ್ಲ.

ಹೀಗಾಗಿ ಅಂಬ​ರೀಶ್‌ ಹಾಗೂ ಸಿಎಂ ಭೇಟಿ ಮುಂದಕ್ಕೆ ಹೋಗಿದೆ. ವಾಸ್ತ​ವ​ವಾಗಿ ಮಂಗ​ಳವಾರ ಅಂಬ​ರೀಶ್‌ ಅವ​ರನ್ನು ಭೇಟಿ ಮಾಡುವ ಉದ್ದೇ​ಶ​ವಿ​ದ್ದರೂ ರಾಹುಲ್‌ ಗಾಂಧಿ ಅವರ ಕಾರ್ಯ​ಕ್ರಮವಿರುವ ಹಿನ್ನೆ​ಲೆ​ಯಲ್ಲಿ ಇದು ಖಚಿ​ತ​ವಾ​ಗಿಲ್ಲ. ಮಂಗ​ಳ​ವಾರ ಬೆಳಗ್ಗೆ ಕಾಲಾ​ವ​ಕಾಶ ದೊರೆ​ತರೆ ಉಪ​ಹಾ​ರದ ವೇಳೆ ಅಂಬ​ರೀಶ್‌ ಭೇಟಿ​ಯಾ​ಗ​ಬ​ಹುದು. ಇಲ್ಲ​ದಿ​ದ್ದರೆ, ಈ ಭೇಟಿ ರಾಹುಲ್‌ ಅವರ ಎರಡು ದಿನ​ಗಳ ಜನಾ​ಶೀ​ರ್ವಾದ ಯಾತ್ರೆಯ ಮುಗಿದ ನಂತರ ನಡೆ​ಯ​ಬ​ಹುದು ಎಂದು ಸಿಎಂ ಆಪ್ತ ಮೂಲ​ಗಳು ತಿಳಿ​ಸಿ​ವೆ. ಒಟ್ಟಾರೆ, ಸಿಎಂ ಅವರು ಅಂಬ​ರೀಶ್‌ ಭೇಟಿಯ ನಂತ​ರವೇ ಅವರ ಸ್ಪರ್ಧೆ ವಿಚಾರದಲ್ಲಿ ಸ್ಪಷ್ಟತೆ ಬರ​ಲಿದೆ ಎನ್ನು​ತ್ತವೆ ಮೂಲ​ಗ​ಳು.

ಮೂಲ​ಗಳ ಪ್ರಕಾರ ಅಂಬ​ರೀಶ್‌ ಅವರು ಈ ಬಾರಿ ಸ್ಪರ್ಧಿ​ಸಲು ಹಿಂಜ​ರಿ​ದರೆ ಅವರ ಪತ್ನಿ ಸುಮ​ಲತಾ ಅವ​ರನ್ನು ಕಣಕ್ಕೆ ಇಳಿ​ಸಲು ಕಾಂಗ್ರೆಸ್‌ ಸಿದ್ಧ​ವಿದೆ. ಇದಾಗದ ಪಕ್ಷ​ದಲ್ಲಿ ಬೇರೆ ಅರ್ಹ ವ್ಯಕ್ತಿ​ಯನ್ನು ಹುಡು​ಕ​ಬೇ​ಕಾ​ಗು​ತ್ತದೆ. ಆದರೆ, ಪಕ್ಷ ಅಂಬ​ರೀಶ್‌ ಬಯ​ಸಿ​ದಂತೆ ಪ್ರಾಮು​ಖ್ಯತೆ ನೀಡಿ​ದರೆ ಅವರು ಬೇಸರ ಬಿಟ್ಟು ಮತ್ತೆ ಸ್ಪರ್ಧೆಗೂ ಮುಂದಾ​ಗುವ ಸಾಧ್ಯ​ತೆ​ಯಿದೆ ಎನ್ನ​ಲಾ​ಗಿದೆ. ಈ ಎಲ್ಲಾ ಕಾರ​ಣ​ಗಳ ಹಿನ್ನೆ​ಲೆ​ಯಲ್ಲಿ ಅಂಬ​ರೀಶ್‌ ಮನ​ಸ್ಸಿ​ನಲ್ಲಿ ಏನಿದೆ ಎಂಬು​ದನ್ನು ತಿಳಿ​ಯಲು ಸಿದ್ದ​ರಾ​ಮಯ್ಯ ಮುಂದಾ​ಗಿ​ದ್ದಾರೆ ಎನ್ನ​ಲಾ​ಗಿ​ದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉಡುಪಿಯಲ್ಲಿ ಮಿನಿ ಕುಂಭ.. ಶ್ರೀಲ ಪ್ರಭುಪಾದರಿಗೆ 'ವಿಶ್ವಗುರು' ಗೌರವ: ಪುತ್ತಿಗೆ ಮಠದಲ್ಲಿ ಐತಿಹಾಸಿಕ ಕ್ಷಣ
ಸಿಎಂ ಕುರ್ಚಿ ಗೊಂದಲದಿಂದಾಗಿ ರಾಜ್ಯದಲ್ಲಿ ಅಸ್ತಿರತೆ ಸೃಷ್ಟಿ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ