ಇನ್ನಷ್ಟು ನಗರಗಳಿಗೆ ಅಂಬಾರಿ ಡ್ರೀಮ್ ಕ್ಲಾಸ್ ಬಸ್

By Web DeskFirst Published Jul 9, 2019, 8:55 AM IST
Highlights

KSRTC ನೂತನವಾಗಿ ಆರಂಭಿಸಿರುವ ಅಂತರ್ ರಾಜ್ಯ ‘ಅಂಬಾರಿ ಡ್ರೀಮ್ ಕ್ಲಾಸ್’ ಬಸ್ ಸೇವೆಯನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸಲಾಗುತ್ತದೆ. 

ಬೆಂಗಳೂರು [ಜು.09] : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ನೂತನವಾಗಿ ಆರಂಭಿಸಿರುವ ಅಂತರ್ ರಾಜ್ಯ ‘ಅಂಬಾರಿ ಡ್ರೀಮ್ ಕ್ಲಾಸ್’ ಬಸ್ ಸೇವೆಯಿಂದ ನಿಗಮದ ಬೊಕ್ಕಸಕ್ಕೆ ಉತ್ತಮ ಆದಾಯ ಹರಿದು ಬರುತ್ತಿರುವುದರಿಂದ ಶೀಘ್ರದಲ್ಲೇ ಈ ಸೇವೆಯನ್ನು ಇನ್ನಷ್ಟು ನಗರಗಳಿಗೆ ವಿಸ್ತರಿಸಲು ತೀರ್ಮಾನಿಸಿದೆ. 

ಬೆಂಗಳೂರಿನಿಂದ ಚಿದಂಬರಂ, ಹೈದರಾಬಾದ್, ಮುಂಬೈ, ಶಿರಡಿ ಮೊದಲಾದ ನಗರಗಳಿಗೆ ಶೀಘ್ರದಲ್ಲೇ ಈ ಬಸ್ ಸೇವೆ ವಿಸ್ತರಿಸಲು ಕೆಎಸ್ಸಾರ್ಟಿಸಿ ನಿರ್ಧರಿಸಿದೆ. ಮೂರು ತಿಂಗಳ ಹಿಂದೆ ಅಂಬಾರಿ ಡ್ರೀಮ್ ಕ್ಲಾಸ್ ಬ್ರ್ಯಾಂಡ್ ಹೆಸರಿನಲ್ಲಿ ಬೆಂಗಳೂರು ನಗರದಿಂದ ನೆರೆ ರಾಜ್ಯಗಳ ಎರ್ನಾಕುಲಂ, ಸಿಕಂದರಾಬಾದ್, ಪುಣೆ ಹಾಗೂ ವಿಜಯವಾಡ ನಗರಗಳಿಗೆ ಎಂಟು ಐಷಾರಾಮಿ ಸ್ಲೀಪರ್ ಬಸ್‌ಗಳ ಕಾರ್ಯಾಚರಣೆ ಆರಂಭಿಸಿತ್ತು. ಇದೀಗ ನಾಲ್ಕು ಮಾರ್ಗಗಳಲ್ಲಿ ಈ ಬಸ್ ಸೇವೆಗೆ ಪ್ರಯಾಣಿಕರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಗುತ್ತಿದೆ. 

ನಿಗಮಕ್ಕೆ ಉತ್ತಮ ಆದಾಯ ಬರುತ್ತಿರುವುದರಿಂದ ಮತ್ತಷ್ಟು ನಗರಗಳಿಗೆ ಈ ಸೇವೆ ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು. ನಿಗಮವು ಬೆಂಗಳೂರು ನಗರದಿಂದ ನೆರೆಯ ರಾಜ್ಯಗಳಿಗೆ ಐಷಾರಾಮಿ ಬಸ್‌ಗಳನ್ನು ಕಾರ್ಯಚರಣೆಗೊಳಿಸುವ ಉದ್ದೇಶದಿಂದ 20 ಬಸ್ ಖರೀದಿಸಿದೆ ಎಂದು ಹೇಳಿದರು.

click me!