ಅಮೇಜಾನ್‌ ಕಾಡು ಕಡಿದು ಜಾಗತಿಕ ಪರಿಸರ ಸಮ್ಮೇಳನ!

Published : Mar 14, 2025, 09:46 AM ISTUpdated : Mar 14, 2025, 09:57 AM IST
ಅಮೇಜಾನ್‌ ಕಾಡು ಕಡಿದು ಜಾಗತಿಕ ಪರಿಸರ ಸಮ್ಮೇಳನ!

ಸಾರಾಂಶ

ಬ್ರೆಜಿಲ್‌ನಲ್ಲಿ ಪರಿಸರ ಸಮ್ಮೇಳನಕ್ಕಾಗಿ ಅಮೆಜಾನ್ ಮಳೆಕಾಡಿನಲ್ಲಿ ರಸ್ತೆ ನಿರ್ಮಾಣಕ್ಕೆ ಅರಣ್ಯ ನಾಶ ಮಾಡಲಾಗಿದೆ. ಇದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ, ಏಕೆಂದರೆ ಇದು ಜೀವವೈವಿಧ್ಯತೆಗೆ ಹಾನಿ ಮತ್ತು ಕಾರ್ಬನ್ ಹೆಚ್ಚಳಕ್ಕೆ ಕಾರಣವಾಗುತ್ತದೆ.

ಬ್ರೆಸಿಲಿಯಾ (ಮಾ.14): ಬ್ರೆಜಿಲ್‌ನಲ್ಲಿ ಇದೇ ವರ್ಷ ನವೆಂಬರ್‌ಗೆ ನಿಗದಿಯಾಗಿರುವ ಪರಿಸರ ಸಮ್ಮೇಳನ (ಕಾಪ್‌)ಕ್ಕಾಗಿ ರಸ್ತೆ ನಿರ್ಮಿಸಲು ಅಲ್ಲಿನ ಸರ್ಕಾರವು ಅಮೆಜಾನ್‌ ಮಳೆಕಾಡಿನಲ್ಲಿ 13 ಕಿ.ಮೀ.ಗಳಷ್ಟು ದಟ್ಟಾರಣ್ಯವನ್ನು ನಾಶ ಮಾಡಿದೆ. ಇದು ಭಾರಿ ವಿವಾದಕ್ಕೆ ಕಾರಣವಾಗಿದೆ. ಬ್ರೆಜಿಲ್‌ನ ಈಶಾನ್ಯ ಭಾಗದಲ್ಲಿನ ಬೆಲೆಂ ನಗರದಲ್ಲಿ ಸಮ್ಮೇಳನಕ್ಕಾಗಿ ವಿದೇಶಿ ಗಣ್ಯರು ಸೇರಿ 50,000 ಅತಿಥಿಗಳು ಸೇರಲಿದ್ದಾರೆ. ಇದರಿಂದಾಗಿ ನಗರದಲ್ಲಿ ವಾಹನ ದಟ್ಟಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಚತುಷ್ಪತ ಹೆದ್ದಾರಿ ನಿರ್ಮಿಸಲು ಬ್ರೆಜಿಲ್‌ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಸರ್ಕಾರ ಆಯ್ಕೆ ಮಾಡಿಕೊಂಡ ಮಾರ್ಗವೇ ಅರಣ್ಯ. ಈ ಕಾಡು ಅತಿ ಸೂಕ್ಷ್ಮ ಜೀವಿಗಳಿಗೆ ಮನೆಯಾಗಿದ್ದು, ಕಾಡು ನಾಶದಿಂದ ಇವುಗಳು ಅಳಿದುಹೋಗುತ್ತವೆ. ಜೊತೆಗೆ ಅಮೆಜಾನ್‌ ಅತಿ ಹೆಚ್ಚು ಕಾರ್ಬನ್‌ ಗುಣವನ್ನು ಸೆಳೆದುಕೊಳ್ಳುತ್ತಿದ್ದು, ಇದರಿಂದಾಗಿ ಕಾರ್ಬನ್‌ ಪ್ರಮಾಣ ಹೆಚ್ಚಲಿದೆ ಎಂದು ಪರಿಸರವಾದಿಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಸರ್ಕಾರ ಮಾತ್ರ ಈ ವಿಧಾನವನ್ನು ‘ಸುಸ್ಥಿರ’ ಹೇಳಿದೆ.

ಅಮೇಜಾನ್‌ ಮಳೆಕಾಡಿನಲ್ಲಿ ಪತ್ತೆಯಾದ ಕೆಲವೇ ವಾರಗಳಲ್ಲಿ ಸಾವು ಕಂಡ ವಿಶ್ವದ ದೈತ್ಯ ಹಾವು!

ಬಿಬಿಸಿ ಪ್ರಕಾರ, ನಾಲ್ಕು ಪಥದ ಹೆದ್ದಾರಿಯು ನಗರಕ್ಕೆ ಸಂಚಾರವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ, ಇದು ನವೆಂಬರ್‌ನಲ್ಲಿ ನಡೆಯುವ ಸಮ್ಮೇಳನದಲ್ಲಿ ವಿಶ್ವ ನಾಯಕರು ಸೇರಿದಂತೆ 50,000 ಕ್ಕೂ ಹೆಚ್ಚು ಜನರಿಗೆ ಆತಿಥ್ಯ ವಹಿಸಲಿದೆ. ರಾಜ್ಯ ಸರ್ಕಾರವು ಹೆದ್ದಾರಿಯ "ಸುಸ್ಥಿರ" ಅರ್ಹತೆಯನ್ನು ಪ್ರಚಾರ ಮಾಡುತ್ತದೆ, ಆದರೆ ಕೆಲವು ಸ್ಥಳೀಯರು ಮತ್ತು ಸಂರಕ್ಷಣಾವಾದಿಗಳು ಪರಿಸರದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೆಜಾನ್ ಕಾಡು ಜಗತ್ತಿಗೆ ಇಂಗಾಲವನ್ನು ಹೀರಿಕೊಳ್ಳುವಲ್ಲಿ ಮತ್ತು ಜೀವವೈವಿಧ್ಯತೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಈ ಅರಣ್ಯನಾಶವು ಹವಾಮಾನ ಶೃಂಗಸಭೆಯ ಉದ್ದೇಶಕ್ಕೆ ವಿರುದ್ಧವಾಗಿದೆ ಎಂದು ಹಲವರು ಹೇಳುತ್ತಾರೆ.

ಅಮೆಜಾನ್ ದಟ್ಟಾರಣ್ಯದಲ್ಲಿ 3,000 ವರ್ಷ ಹಳೇ ನಗರ ಪತ್ತೆ,

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು