ಡಿಸಿಸಿ ಬ್ಯಾಂಕ್, ಅಂಚೆ ಕಚೇರಿ ಮೂಲಕ ನಗದು ವಿತರಿಸಿ : ಆರ್ಬಿಐ ಸೂಚನೆ

By Suvarna Web DeskFirst Published Jan 3, 2017, 7:00 PM IST
Highlights

ವಿಶೇಷವಾಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ವಾಣಿಜ್ಯ ಬ್ಯಾಂಕ್‌ಗಳು, ವೈಟ್ ಲೇಬಲ್ ಎಟಿಎಂ (ಖಾಸಗಿ ಎಟಿಎಂಗಳು), ಅಂಚೆ ಕಚೇರಿಗಳ ಮೂಲಕ ಹೊಸ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಪೂರೈಸಲು ಕ್ರಮ ಕೈಗೊಳ್ಳಲು ಆರ್‌ಬಿಐ ಸೂಚಿಸಿದೆ

ಮುಂಬೈ(ಜ.4): ನೋಟುಗಳ ಅಮಾನ್ಯ ಮಾಡಿದ ಬಳಿಕ ಗ್ರಾಮೀಣ ಪ್ರದೇಶದಲ್ಲಿ ಉಂಟಾಗಿರುವ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಶೇ.40ರಷ್ಟು ಪ್ರಮಾಣದಲ್ಲಿ ಕರೆನ್ಸಿ ಪೂರೈಕೆ ಮಾಡಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ. ವಿಶೇಷವಾಗಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್, ವಾಣಿಜ್ಯ ಬ್ಯಾಂಕ್‌ಗಳು, ವೈಟ್ ಲೇಬಲ್ ಎಟಿಎಂ (ಖಾಸಗಿ ಎಟಿಎಂಗಳು), ಅಂಚೆ ಕಚೇರಿಗಳ ಮೂಲಕ ಹೊಸ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಪೂರೈಸಲು ಕ್ರಮ ಕೈಗೊಳ್ಳಲು ಆರ್‌ಬಿಐ ಸೂಚಿಸಿದೆ. ಇದರ ಜತೆಗೆ 100ಕ್ಕಿಂತ ಮುಖಬೆಲೆಯ ನೋಟುಗಳನ್ನು ಅಗತ್ಯಕ್ಕೆ ತಕ್ಕಂತೆ ಒದಗಿಸಲೂ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.

ಹೊಸ ವರ್ಷದ ಮುನ್ನಾ ದಿನ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ನಗದು ಪೂರೈಕೆಯಲ್ಲಿ ಕೊರತೆ ಉಂಟಾಗಿರುವ ಗ್ರಾಮೀಣ ಪ್ರದೇಶಗಳಿಗೆ ಅದನ್ನು ತುಂಬಲು ಕ್ರಮ ಕೈಗೊಳ್ಳಬೇಕೆಂದು ಬ್ಯಾಂಕ್‌ಗಳಿಗೆ ಸೂಚಿಸಿದ್ದರು. ಅದಕ್ಕೆ ಪೂರಕವಾಗಿ ಆರ್‌ಬಿಐನಿಂದ ಈ ಸೂಚನೆ ನೀಡಲಾಗಿದೆ. ಆಯಾ ಜಿಲ್ಲೆಯಲ್ಲಿರುವ ಗ್ರಾಮೀಣ ಪ್ರದೇಶದ ಅಗತ್ಯಕ್ಕೆ ತಕ್ಕಂತೆ ನೋಟುಗಳ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ. ಹೀಗಾಗಿ, ಎಲ್ಲ ಜಿಲ್ಲೆಗಳಲ್ಲಿ ನೋಟುಗಳನ್ನು ನೀಡುವ ಹೊಣೆ ಹೊಂದಿರುವ ಸಂಸ್ಥೆ (ಕರೆನ್ಸಿ ಚೆಸ್ಟ್) ಅವುಗಳನ್ನು ಬೇರೆ ಬೇರೆ ಕಡೆ ವಿತರಿಸುವ ವ್ಯವಸ್ಥೆಗೆ ವರ್ಗಾಯಿಸಬೇಕು. ವಿತರಣೆ

ಕರೆನ್ಸಿ ಚೆಸ್ಟ್‌ಗಳು 500 ಮುಖಬೆಲೆಯ ಕೆಳಗಿನ ನೋಟುಗಳನ್ನು ಅಂದರೆ 100, 50 ಮತ್ತು ಇತರ ಮುಖಬೆಲೆಯ ನೋಟುಗಳನ್ನು ನೀಡಲಿವೆ. ಆಯಾ ಬ್ಯಾಂಕ್‌ಗಳ ಎಟಿಎಂ ಮತ್ತು ವೈಟ್ ಲೇಬಲ್ (ಖಾಸಗಿ ಎಟಿಎಂ)ಗಳಲ್ಲಿ 500 ಮತ್ತು 100 ನೋಟುಗಳನ್ನು ವಿತರಿಸಲಿವೆ.

click me!