ಮಹಾಲಕ್ಷ್ಮೀ ಎಕ್ಸಪ್ರೆಸ್ ರೈಲಿನ ಪ್ರಯಾಣಿಕರು ಸುರಕ್ಷಿತ: ಥ್ಯಾಂಕ್ಯೂ NDRF!

By Web DeskFirst Published Jul 27, 2019, 8:06 PM IST
Highlights

ಮಹಾರಾಷ್ಟ್ರದಲ್ಲಿ ಸಂಚಕಾರ ತಂದಿಟ್ಟ ಧಾರಾಕಾರ ಮಳೆ|  ಮುಂಬೈ-ಕೋಲ್ಹಾಪುರ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಸ್ಥಗಿತ| ರೈಲಿನಲ್ಲಿದ್ದ ಎಲ್ಲ 700 ಪ್ರಯಾಣಿಕರನ್ನು ಸ್ಥಳಾಂತರಿಸಿದ NDRF ತಂಡ| ಎಲ್ಲ 700 ಪ್ರಯಾಣಿಕರು ಸುರಕ್ಷಿತ ಎಂದು ಮಾಹಿತಿ ನೀಡಿದ ಮಧ್ಯ ರೈಲ್ವೇ|  ಎನ್‌ಡಿಆರ್‌ಎಫ್‌, ಸೇನೆ, ಭಾರತೀಯ ನೌಕಾಪಡೆ, ಪೊಲೀಸರ ಸತತ ಕಾರ್ಯಾಚರಣೆ| ರಕ್ಷಣಾ ಕಾರ್ಯಾಚರಣೆಗೆ ಸಿಎಂ ದೇವೇಂದ್ರ ಫಡ್ನವೀಸ್, ಕೇಂದ್ರ ಗೃಹ ಸಿವ ಅಮಿತ್ ಶಾ ಮೆಚ್ಚುಗೆ|

ಮುಂಬೈ(ಜು.27): ಮಹಾಮಳೆಯಿಂದಾಗಿ ಸಂಚಾರ ಸ್ಥಗಿತಗೊಂಡ ಮುಂಬಯಿ-ಕೊಲ್ಹಾಪುರ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ ರೈಲಿನ ಎಲ್ಲ 700 ಪ್ರಯಾಣಿಕರನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ.

ಅಲ್ಲದೇ ಪ್ರಯಾಣಿಕರನ್ನು 19 ಕೋಚ್‌ಗಳ ವಿಶೇಷ ರೈಲಿನ ಮೂಲಕ ಕಲ್ಯಾಣದಿಂದ ಕೊಲ್ಹಾಪುರಕ್ಕೆ ಕರೆತರಲಾಗಿದೆ ಎಂದು ಮಧ್ಯ ರೈಲ್ವೇ ಖಚಿತಪಡಿಸಿದೆ.

Happy to inform that all the passengers stranded in have been evacuated safely.
Congratulations & Thank you to , Army, , Airforce, Police, Indian Railways, Local administration and entire team for this coordinated & great efforts! pic.twitter.com/31oN5c9aFa

— Devendra Fadnavis (@Dev_Fadnavis)

ಮುಂಬೈ-ಕೊಲ್ಹಾಪುರ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್‌ ರೈಲು, ಮುಂಬೈನಿಂದ 100 ಕಿ.ಮೀ ದೂರದ ವಂಗಾನಿ ಮತ್ತು ಬದ್ಲಾಪುರ್ ನಿಲ್ದಾಣಗಳ ನಡುವೆ ಸಿಲುಕಿಕೊಂಡಿತ್ತು. ರೈಲಿನಲ್ಲಿದ್ದ ಪ್ರಯಾಣಿಕರನ್ನು ndrf ತಂಡ ಹಾಗೂ ಎರಡು ಸೇನಾ ಹೆಲಿಕಾಪ್ಟರ್’ಗಳು ಸುರಕ್ಷಿತವಾಗಿ ರೈಲಿನಿಂದ ಹೊರತರುವಲ್ಲಿ ಯಶಸ್ವಿಯಾಗಿದೆ.

A special train has been arranged for all the passengers of from Kalyan to Kolhapur.

— Devendra Fadnavis (@Dev_Fadnavis)

ಪ್ರಯಾಣಿಕರ ರಕ್ಷಣೆಗೆ ಎನ್‌ಡಿಆರ್‌ಎಫ್‌, ಸೇನೆ, ಭಾರತೀಯ ನೌಕಾಪಡೆ, ಪೊಲೀಸರು, ಮತ್ತು ಇತರ ಸಿಬ್ಬಂದಿ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ಲಾಘಿಸಿದ್ದಾರೆ.

click me!