Fact Check| ಅತ್ಯಾಚಾರಿ ಗುರ್ಮಿತ್ ಬಳಸಿದ್ದ ಹೆಲಿಕಾಪ್ಟರ ಬಳಸಿದ ಮೋದಿ?

Published : Jul 27, 2019, 06:52 PM IST
Fact Check| ಅತ್ಯಾಚಾರಿ ಗುರ್ಮಿತ್ ಬಳಸಿದ್ದ ಹೆಲಿಕಾಪ್ಟರ ಬಳಸಿದ ಮೋದಿ?

ಸಾರಾಂಶ

ಅತ್ಯಾಚಾರಿ ಗುರ್ಮಿತ್ ಬಳಸಿದ್ದ ಹೆಲಿಕಾಪ್ಟರ್’ನಲ್ಲಿ ಮೋದಿ ಸವಾರಿ? ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದೇ ನಂಬರ್’ನ ಹೆಲಿಕಾಪ್ಟರ್ ಫೋಟೋ| ಪ್ರಧಾನಿ ಮೋದಿ ಅವರ ‘ಬೇಟಿ ಬಚಾವೋ, ಬೇಟಿ ಪಡಾವೋ’ ಘೋಷಣೆಗೆ ಕಿಡಿ| ಪ್ರಧಾನಿ ಮೋದಿ ಅತ್ಯಾಚಾರಿ ಗುರ್ಮಿತ್ ಬಳಸಿದ್ದ ಹೆಲಿಕಾಪ್ಟರ್ ಬಳಸಿದ್ದು ನಿಜವಾ?| AW139 ಹೆಸರಿನ ಹೆಲಿಕಾಪ್ಟರ್ ಅಸಲಿ ಕತೆ ಏನು ಗೊತ್ತಾ?

ಬೆಂಗಳೂರು(ಜು.27): ಅತ್ಯಾಚಾರ ಆರೋಪದಲ್ಲಿ ಜೈಲುಪಾಲಾಗಿರುವ ಸ್ವಯಂಘೋಷಿತ ದೇವಮಾನವ, ಗುರ್ಮಿತ್ ರಾಮ್ ರಹೀಮ್ ಸಿಂಗ್ ಬಳಸುತ್ತಿದ್ದ ಹೆಲಿಕಾಪ್ಟರ್ ಅನ್ನೇ ಪ್ರಧಾನಿ ಮೋದಿಯೂ ಬಳಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

2014ರ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ, ಗುರ್ಮಿತ್ ಬಳಸುತ್ತಿದ್ದ ಹೆಲಿಕಾಪ್ಟರ್ ಅನ್ನೇ ಬಳಿಸಿದ್ದಾರೆ ಎಂಬ ಸುದ್ದಿ ಫೇಸ್’ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅತ್ಯಾಚಾರಿ ಬಳಸಿದ್ದ ಹೆಲಿಕಾಪ್ಟರ್ ಬಳಸಿರುವ ಮೋದಿ ‘ಬೇಟಿ ಬಚಾವೋ’ ಬೇಟಿ ಪಡಾವೋ’ ಕುರಿತು ಮಾತನಾಡುವುದು ಹಾಸ್ಯಾಸ್ಪದ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಆದರೆ ಈ ಕುರಿತಾದ ಸತ್ಯಾಸತ್ಯತೆ ಬೇರೆ ಇದ್ದು, ಅಸಲಿಗೆ ರಾಮ್ ರಹೀಮ್ ವಿಚಾರಣೆ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದ ಪರಿಣಾಮ, ಹರಿಯಾಣ ಸರ್ಕಾರ ಆತನಿಗಾಗಿ ಖಾಸಗಿ ಸಂಸ್ಥೆಯೊಂದರಿಂದ AW139 ಹೆಸರಿನ ಹೆಲಿಕಾಪ್ಟರ್ ಬಾಡಿಗೆ ಪಡೆದಿತ್ತು.

ಅದರಂತೆ ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಕೂಡ ಬೇರೊಂದು ಖಾಸಗಿ ಸಂಸ್ಥೆಯಿಂದ AW139 ಹೆಸರಿನ ಹೆಲಿಕಾಫ್ಟರ್ ಬಾಡಿಗೆ ಪಡೆದಿತ್ತು. AW139 ನಿರ್ದಿಷ್ಟ ಹೆಲಿಕಾಪ್ಟರ್’ನ ನೋಂದಣಿ ಸಂಖ್ಯೆಯಾಗಿರದೇ, ಹೆಲಿಕಾಪ್ಟರ್ ಮಾಡೆಲ್ ಹೆಸರಾಗಿದೆ ಎಂದು ಎರಡೂ ಕಂಪನಿಗಳು ಸ್ಪಷ್ಟಪಡಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ವಯಸ್ಸಾಗದಿದ್ರೂ ವಯಸ್ಕರು ಲಿವ್‌ ಇನ್‌ನಲ್ಲಿ ಇರಬಹುದು: ಕೋರ್ಟ್‌
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ