ಮುಂಬೈ(ಜು.27): ಭಾರೀ ಮಳೆಯಿಂದಾಗಿ ಮುಂಬೈ-ಕೋಲ್ಹಾಪುರ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಸ್ಥಗಿತಗೊಂಡ ಪರಿಣಾಮ, ಸುಮಾರು 700ಕ್ಕೂ ಅಧಿಕ ಪ್ರಯಾಣಿಕರನ್ನು ರಕ್ಷಿಸಲು ಕಾರ್ಯಾಚರಣೆ ಆರಂಭವಾಗಿದೆ.

ಇಲ್ಲಿನ ಬದ್ಲಾಪುರ್ ಮತ್ತು ವಾಂಘಾನಿ ಬಳಿ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ರೈಲು ಹಳಿಗಳ ಮಧ್ಯೆ ಸಿಲುಕಿಕೊಂಡಿದ್ದು, NDRF ತಂಡ ಮತ್ತು ಎರಡು ಸೇನಾ ಹೆಲಿಕಾಪ್ಟರ್’ಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ.

"

ಈ ವೇಳೆ ಪ್ರಯಾಣಿಕರನ್ನು ವಿಮಾನದಲ್ಲಿ ಏರ್’ಲಿಫ್ಟ್ ಮಾಡಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಂತೆ, ಮಹಾರಾಷ್ಟ್ರ ಸರ್ಕಾರ ರಕ್ಷಣಾ ಇಲಾಖೆಗೆ ಮನವಿ ಮಾಡಿಕೊಂಡಿದೆ.

ಈ ಕುರಿತು ಮಾಹಿತಿ ನೀಡಿರುವ ಮಹಾರಾಷ್ಟ್ರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಹಾ ನಿರ್ದೇಶಕ ಬ್ರಿಜೇಶ್ ಸಿಂಗ್, ಎರಡು ಸೇನಾ ಹೆಲಿಕಾಪ್ಟರ್’ಗಳು ಮತ್ತು NDRF ತಂಡದ ಬೋಟ್’ಗಳು ಸತತ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಎಂದು ತಿಳಿಸಿದ್ದಾರೆ.