ಕಾವೇರಿ ಕಾವು: ಸುಮಲತಾ ನಡೆ ಹೇಗಿರಬಹುದು?

By Web Desk  |  First Published Jul 2, 2019, 10:45 AM IST

ಸಂಸತ್‌ ಅಧಿವೇಶನದ ಮೊದಲನೇ ದಿನದಿಂದಲೇ ಸುಮಲತಾ ಫುಲ್ ಆ್ಯಕ್ಟೀವ್ | ಮೋದಿ ಭೇಟಿಗಾಗಿ ಕಾಯುತ್ತಿದ್ದಾರೆ ಸುಮಲತಾ | ಕಾವೇರಿ ವಿಚಾರದಲ್ಲಿ ಸುಮಲತಾ ನಿಲುವೇನು? 


ಅಂಬರೀಶ್‌ ಲೋಕಸಭೆಗೆ ಆಯ್ಕೆಯಾಗಿ ಬಂದರೂ, ಎಂದಿಗೂ ಹಮ್ಮುಬಿಮ್ಮು ಬಿಟ್ಟು ಮನವಿ ಪತ್ರ ತೆಗೆದುಕೊಂಡು ಯಾರ ಬಳಿಯೂ ಹೋದವರಲ್ಲ. ಆದರೆ ಸುಮಲತಾ ಸಂಸತ್‌ ಅಧಿವೇಶನದ ಮೊದಲನೇ ದಿನದಿಂದಲೇ ಫುಲ್ ಆಕ್ಟಿವ್‌ ಆಗಿದ್ದಾರೆ.

‘ಕೈ’ ಶಾಸಕರ ರಾಜೀನಾಮೆ: ದೇವೇಗೌಡ್ರ ಲೆಕ್ಕಾಚಾರವೇ ಬೇರೆ!

Tap to resize

Latest Videos

undefined

ಪಿಯೂಷ್‌ ಗೋಯಲ್, ನಿರ್ಮಲಾ ಸೀತಾರಾಮನ್‌, ರಾಜನಾಥ್‌ ಸಿಂಗ್‌, ಸದಾನಂದ ಗೌಡರನ್ನು ಪ್ರತ್ಯೇಕವಾಗಿ ಭೇಟಿಯಾಗಿರುವ ಸುಮಲತಾ, ಲೋಕಸಭೆಯಲ್ಲಿ ಬಿಜೆಪಿ ಸಂಸದರೊಂದಿಗೆ ಜಾಸ್ತಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಸುಮಲತಾ ಬಿಜೆಪಿ ಸೇರುವ ಆಲೋಚನೆ ಹೊಂದಿರುವುದು ಇನ್ನೂ ಊಹಾಪೋಹವಷ್ಟೆ.

ಅಶೋಕ ಹೋಟೆಲ್ನಲ್ಲಿ ಪ್ರಧಾನಿ ಕೊಟ್ಟ ಡಿನ್ನರ್‌ ಮೀಟಿಂಗ್‌ನಲ್ಲಿ ಸುಮಲತಾ ಹೋಗಿ ನಮಸ್ಕಾರ ಹೇಳಿದಾಗ, ಮೋದಿ ಸಾಹೇಬರು ಪ್ರತಿ ನಮಸ್ಕಾರ ಹೇಳಿದರಾದರೂ, ಹೊರಗಡೆ ಸುದ್ದಿ ಆದಂತೆ ಅಲ್ಲಿ ಯಾವುದೇ ಮಾತುಕತೆ ನಡೆದಿಲ್ಲ.

ಮೂಲಗಳ ಪ್ರಕಾರ ಸುಮಲತಾ, ಪ್ರಧಾನಿ ಮೋದಿ ಅವರ ಒನ್‌ ಟು ಒನ್‌ ಭೇಟಿಗಾಗಿ ಪ್ರಯತ್ನ ಪಡುತ್ತಿದ್ದಾರೆ. ಒಂದು ವೇಳೆ ಆಗಸ್ಟ್‌ನಲ್ಲಿ ಕಾವೇರಿ ಕಾವು ಏರಿದರೆ ಸುಮಲತಾ ಪಾತ್ರ ಮಹತ್ವದ್ದು. ಆಗ ಸುಮಲತಾ ಏನು ಮಾಡುತ್ತಾರೆ ಎನ್ನುವುದು ಮಂಡ್ಯ ಪಾಲಿಟಿಕ್ಸ್‌ ದೃಷ್ಟಿಯಿಂದ ಮುಖ್ಯ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ಪ್ರತಿನಿಧಿ 

ರಾಜಕಾರಣದ ಸುದ್ಧಿಗಾಗಿ   ಕ್ಲಿಕ್ ಮಾಡಿ 

click me!