
ಮೈಸೂರು [ಜು.3]: ‘ಸಾಹಸಸಿಂಹ’ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾಮಗಾರಿಗೆ ಕೊನೆಗೂ ಚಾಲನೆ ದೊರೆತಿದ್ದು, ವಿಷ್ಣುವರ್ಧನ್ ಅವರ ಪತ್ನಿ ನಟಿ ಭಾರತಿ ವಿಷ್ಣುವರ್ಧನ್ ಸಾಕ್ಷಿಯಾದರು.
ಒಮ್ಮೆ ಸರ್ಕಾರದಿಂದ ಆಯೋಜಿಸಿದ್ದ ಕಾರ್ಯಕ್ರಮ ಅನಿವಾರ್ಯ ಕಾರಣದಿಂದ ರದ್ದಾಗಿತ್ತು. ಬಳಿಕ ಹೆಚ್ಚಿನ ಪರಿಹಾರಕ್ಕೆ ಆಗ್ರಹಿಸಿ ರೈತರು ತಡೆಯೊಡ್ಡಿದ್ದರು. ಇತ್ತೀಚೆಗೆ ಜಮೀನಿನ ಮಾಲೀಕರು ವಿಷ್ಣು ಸ್ಮಾರಕ ನಿರ್ಮಾಣ ಕಾಮಗಾರಿ ಆರಂಭಿಸಲು ಬಂದಿದ್ದವರನ್ನು ತಡೆದಿದ್ದರು. ಕೊನೆಗೂ ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅರಿತ ಮೈಸೂರು ಜಿಲ್ಲಾಡಳಿತವು ತಹಸೀಲ್ದಾರ್ ಹಾಗೂ ಪೊಲೀಸ್ ಬಂದೋಬಸ್ತ್ ನಲ್ಲಿ ಸೋಮವಾರ ಕಾಮಗಾರಿ ಆರಂಭಿಸಿದೆ.
ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕುರಿತು ಉದ್ಭವಿಸಿದ್ದ ವಿವಾದಕ್ಕೆ ಹೈಕೋರ್ಟ್ ತೆರೆ ಎಳೆದಿದ್ದು, ಮೈಸೂರು- ಎಚ್.ಡಿ. ಕೋಟೆ ಮುಖ್ಯ ರಸ್ತೆಯಲ್ಲಿರುವ ಹಾಲಾಳು ಗ್ರಾಮದಲ್ಲಿ ಸ್ಮಾರಕ ನಿರ್ಮಾಣವಾಗುತ್ತಿದೆ. ಸ್ಮಾರಕ್ಕೆ ನಿರ್ಮಾಣಕ್ಕೆ ನಿಗದಿಗೊಳಿಸಿರುವ 5 ಎಕರೆ ಜಮೀನನ್ನು ಜೆಸಿಬಿ ಬಳಸಿ ಸ್ವಚ್ಛಗೊಳಿಸಲಾಗುತ್ತಿದೆ.
ವಿಷ್ಣುವರ್ಧನ್ ಸ್ಮಾರಕ ಅಭಿಮಾನಿಗಳ ಹಾಗೂ ಸಾರ್ವಜನಿಕರ ಸ್ವತ್ತು. ಸುಮಾರು 11 ಕೋಟಿ ರು. ವೆಚ್ಚದಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ಫಿಲ್ಮ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಕೂಡ ಬರಲಿದೆ. ಈ ಸ್ಮಾರಕವನ್ನು ವಿಷ್ಣುವರ್ಧನ್ ಅಭಿಮಾನಿಗಳು ಹಾಗೂ ವಿಷ್ಣುಗೆ ಅರ್ಪಣೆ ಮಾಡಲಾಗುವುದು.
- ಭಾರತಿ ವಿಷ್ಣುವರ್ಧನ್ ನಟಿ
2 ವರ್ಷಗಳ ಹಿಂದೆಯೇ ಡಾ.ವಿಷ್ಣುವರ್ಧನ್ ಪ್ರತಿಷ್ಠಾನಕ್ಕೆ ಜಮೀನನ್ನು ಅಧಿಕೃತವಾಗಿ ಹಸ್ತಾಂತರವಾಗಿತ್ತು. ಮೈಸೂರು ಗ್ರಾಮಾಂತರ ವೃತ್ತ ನಿರೀಕ್ಷಕ ಕರೀಂ ರಾವುತರ್ ನೇತೃತ್ವದಲ್ಲಿ ಮೂವರು ಎಸ್‌ಐಗಳು, 50ಕ್ಕೂ ಹೆಚ್ಚು ಮಂದಿ ಪೊಲೀಸರು, ಆರ್‌ಐ, ವಿಎ ಸೇರಿದಂತೆ ಅನೇಕ ಅಧಿಕಾರಿಗಳು ಹಾಗೂ ವಿಷ್ಣುವರ್ಧನ್ ಅಳಿಯ ಅನಿರುದ್‌್ಧ ಇದ್ದರು.
ಅಭಿಮಾನಿಗಳ ಸ್ವತ್ತು: ಭಾರತಿ
ವಿಷ್ಣುವರ್ಧನ್ ಸ್ಮಾರಕ ಅಭಿಮಾನಿಗಳ ಹಾಗೂ ಸಾರ್ವಜನಿಕರ ಸ್ವತ್ತು. ಸುಮಾರು .11 ಕೋಟಿ ವೆಚ್ಚದಲ್ಲಿ ಸ್ಮಾರಕ ಹಾಗೂ ಮ್ಯೂಸಿಯಂ ನಿರ್ಮಾಣವಾಗುತ್ತಿದೆ. ಸರ್ಕಾರದಿಂದ ಹಂತ ಹಂತವಾಗಿ ಅನುದಾನ ಬಿಡುಗಡೆ ಆಗಲಿದೆ. ನಾವು ಈ ಜಮೀನಿನವರಿಗೆ ಮಾನವೀಯತೆಯಿಂದ ಹಣ ಕೊಡುವುದಾಗಿ ಹೇಳಿದ್ದೇವು. ಆದರೆ, ಅವರು ಹೋರಾಟ ಮಾಡಿದರು. ಈಗ ಇದು ಸರ್ಕಾರದ ಜಾಗ. ಹಾಗಾಗಿ ಅವರಿಗೆ ಹಣ ಕೊಡುವ ಅಗತ್ಯ ಇಲ್ಲ. ನಾವಾಗಲಿ, ಸರ್ಕಾರವಾಗಲಿ ಹಣ ಕೊಡುವುದಿಲ್ಲ ಎಂದು ಭಾರತಿ ವಿಷ್ಣುವರ್ಧನ್ ಹೇಳಿದರು.
ಫಿಲ್ಮ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಕೂಡ ಬರಲಿದೆ. ಈ ಸ್ಮಾರಕ ವಿಷ್ಣುವರ್ಧನ್ ಅಭಿಮಾನಿಗಳು ಹಾಗೂ ವಿಷ್ಣುಗೆ ಅರ್ಪಣೆ ಮಾಡಲಾಗುವುದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.