ಮುಸ್ಲಿಂ ಕಿರಕುಳ ಖಂಡಿಸಿ 9 ಸಚಿವರಿಂದ ರಾಜೀನಾಮೆ

By Web DeskFirst Published Jun 5, 2019, 9:49 AM IST
Highlights

ಮುಸ್ಲಿಮರಿಗೆ ನೀಡುವ ಕಿರಕುಳ ಖಂಡಿಸಿ 9 ಸಚಿವರು ರಾಜೀನಾಮೆ ನೀಡಿದ್ದಾರೆ.

ಕೊಲಂಬೋ: 250ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದ್ದ ಇತ್ತೀಚಿನ ಉಗ್ರರ ದಾಳಿಯ ಬಳಿಕ ದೇಶಾದ್ಯಂತ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಲೇ ಬಂದಿರುವುದನ್ನು ಖಂಡಿಸಿ ಶ್ರೀಲಂಕಾ ಸರ್ಕಾರದ 9 ಸಚಿವರು ಹಾಗೂ ಇಬ್ಬರು ರಾಜ್ಯಪಾಲರು ರಾಜೀನಾಮೆ ನೀಡಿದ್ದಾರೆ. 

ವಿನಾಕಾರಣ ಮುಸ್ಲಿಂ ಸಮುದಾಯದ ವಿರುದ್ಧವೇ ಆರೋಪ ಮಾಡಿ, ಎಲ್ಲರನ್ನೂ ಒಂದೇ ದೃಷ್ಟಿಕೋನದಲ್ಲಿ ನೋಡುವುದು ಸರಿಯಲ್ಲ. ಮುಸ್ಲಿಂ ಸಮುದಾಯದ ರಾಜಕಾರಣಿಗಳು ಉಗ್ರರ ದಾಳಿಯ ಹಿಂದಿದ್ದಾರೆ ಎಂಬರ್ಥದಲ್ಲಿ ಟೀಕಿಸುವವರಿಗೆ ಇದು ಪಾಠವಾಗಬೇಕು ಎಂದು ಶ್ರೀಲಂಕಾ ಮುಸ್ಲಿಂ ಕಾಂಗ್ರೆಸ್‌(ಎಸ್‌ಎಲ್‌ಎಂಸಿ) ಮುಖಂಡ ರೌಫ್‌ ಹಕೀನ್‌ ಹೇಳಿದ್ದಾರೆ.

 ಇದೇ ವೇಳೆ ದಾಳಿಯಲ್ಲಿ ನಮ್ಮ ಕೈವಾಡ ಇದ್ದರೆ ಅದನ್ನು ಸಾಬೀತುಪಡಿಸಿ ಎಂದು ಸಚಿವರು ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

click me!