ಇಟಲಿಯಲ್ಲಿ ತಯಾರಾದ ಗೊಂಬೆಗಳು ಭಾರತದಲ್ಲಿ ಏಲಿಯನ್‌ ಆದವು!

By Suvarna Web DeskFirst Published Apr 6, 2018, 11:12 AM IST
Highlights

ಕೇರಳದ ಪಾಲ್‌ಘಾಟ್‌ನಲ್ಲಿ ವಿಚಿತ್ರ ಮಾನವ ಜೀವಿಯು ಪತ್ತೆಯಾಗಿದೆ ಎಂಬಂತಹ ಪೋಟೋಗಳು ಹಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಒಂದೆಡೆ ಕೇರಳದ ಮಲಂಪುಳ ಡ್ಯಾಂನಲ್ಲಿ ಮೀನುಗಾರರ ಕಣ್ಣಿಗೆ ಬಿದ್ದ ವಿಚಿತ್ರ ಜೀವಿ ಎಂಬ ಒಕ್ಕಣೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರ ಹರಿದಾಡುತ್ತಿವೆ.

ಇನ್ನೊಂದು ಕಡೆ ‘ಇವು ಉತ್ತರ ಪ್ರದೇಶದಲ್ಲಿ ಪತ್ತೆಯಾದ ಏಲಿಯನ್‌ಗಳು. ಈ ಜೀವಿಗಳು ಸಾವಿರ ವರ್ಷದ ಹಿಂದೆ ಅಸ್ತಿತ್ವದಲ್ಲಿದ್ದವು. ಈ ಏಲಿಯನ್‌ಗಳ ಜೀವಕೋಶಗಳು, ಮಾನವನ ಜೀವಕೋಶಗಳೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಏಲಿಯನ್ಸ್‌ಗಳ ಆಹಾರಕ್ಕೂ ಮಾನವನ ಆಹಾರಕ್ಕೂ ವ್ಯತ್ಯಾಸವಿದೆ.

ಇವು ಮಾನವನ ಆಹಾರವನ್ನು ಸೇವಿಸುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ’ ಎಂದು ಸಂದೇಶ ಪಸರಿಸಲಾಗುತ್ತಿದೆ. ಇವು ನೋಡಲು ವಿಚಿತ್ರ ಮಾನವ ಜೀವಿ ಎನಿಸುವಂತಿದ್ದು, ದೊಡ್ಡ ಕಿವಿ, ಬೊಕ್ಕ ತಲೆ, ನೋಡಲು ವಯಸ್ಸಾದ ಜೀವಿಯಂತೆ ಗೋಚರಿಸುತ್ತವೆ. ಹಾಗಾದರೆ ಈ ಜೀವಿಯು ಏಲಿಯನ್ನೇ ಅಥವಾ ವಿಚಿತ್ರ ಮಾನವ ಜೀವಿಯೇ ಎಂದು ಹುಡುಕ ಹೊರಟಾಗ ಈ ಫೋಟೋಗಳ ಹಿಂದಿನ ಅಸಲಿ ಕತೆ ಬಯಲಾಗಿದೆ.

ಏಕೆಂದರೆ ಫೋಟೋದಲ್ಲಿ ಕಾಣುವ ಜೀವಿ ಏಲಿಯನ್‌ ಅಥವಾ ವಿಚಿತ್ರ ಮಾನವ ಜೀವಿ ಎರಡೂ ಅಲ್ಲ. ಇವು ಇಟಲಿಯ ಲೈರಾ ಮಗಾನ್ಯೂಕೋ ಎಂಬುವರು ಸಿಲಿಕಾನ್‌ ರಬ್ಬರ್‌ ಅನ್ನು ಬಳಸಿ ತಯಾರಿಸಿದ ಗೊಂಬೆಗಳು. ಇವರು ಈ ರೀತಿಯ ಹಲವು ಗೊಂಬೆಗಳನ್ನು ತಯಾರಿಸಿದ್ದಾರೆ. ಇವರು ತಯಾರಿಸಿದ ಗೊಂಬೆಗಳು ಈ ಹಿಂದೆ ಕೂಡ ವಿಚಿತ್ರ ಜೀವಿ ಎಂದು ವೈರಲ್‌ ಆಗಿದ್ದವು.

click me!