ಉತ್ತರ ಪ್ರದೇಶ: ಪ್ರಧಾನಿ ಮೋದಿ, ಅಖಿಲೇಶ್ ನಡುವೆ ‘ವಿದ್ಯುತ್ ಸಮರ’

By Suvarna Web DeskFirst Published Feb 27, 2017, 8:54 AM IST
Highlights

ಗೋರಕ್’ಪುರದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿಯನ್ನು ‘ಬಾಬಾ’ ಎಂದು ಕರೆದ ಅಖಿಲೇಶ್, ಉತ್ತರ ಪ್ರದೇಶದಲ್ಲಿ ದಿನದ 22-24 ಗಂಟೆ ವಿದ್ಯುತ್ ಇದ್ದರೂ, ವಿದ್ಯುತ್ ಇಲ್ಲವೆಂದು ಬಾಬಾ ಹೇಳುತ್ತಾರೆ, ಅದನ್ನು ಖಾತ್ರಿ ಪಡಿಸಬೇಕಾದರೆ,  ಅವರು ಯಾವುದೇ ತಂತಿಯನ್ನು ಹಿಡಿದು ಖಾತ್ರಿ ಪಡಿಸಬಹುದು, ಎಂದಿದ್ದಾರೆ.

ಗೋರಕ್’ಪುರ (ಫೆ. 27):  ಉತ್ತರ ಪ್ರದೇಶದ ಜನರು ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂಬ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿರುವ ಅಖಿಲೇಶ್ ಯಾದವ್, ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇದೆಯೋ ಇಲ್ಲವೋ ಎಂದು ಮೋದಿಯವರು ರಾಜ್ಯದ ಯಾವುದೇ ವಿದ್ಯುತ್ ತಂತಿಯನ್ನು ಮುಟ್ಟಿ ಖಚಿತಪಡಿಸಿಕೊಳ್ಳಬಹುದೆಂದಿದ್ದಾರೆ.

ಗೋರಕ್’ಪುರದಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಪ್ರಧಾನಿ ಮೋದಿಯನ್ನು ‘ಬಾಬಾ’ ಎಂದು ಕರೆದ ಅಖಿಲೇಶ್, ಉತ್ತರ ಪ್ರದೇಶದಲ್ಲಿ ದಿನದ 22-24 ಗಂಟೆ ವಿದ್ಯುತ್ ಇದ್ದರೂ, ವಿದ್ಯುತ್ ಇಲ್ಲವೆಂದು ಬಾಬಾ ಹೇಳುತ್ತಾರೆ, ಅದನ್ನು ಖಾತ್ರಿ ಪಡಿಸಬೇಕಾದರೆ,  ಅವರು ಯಾವುದೇ ತಂತಿಯನ್ನು ಹಿಡಿದು ಖಾತ್ರಿ ಪಡಿಸಬಹುದು, ಎಂದಿದ್ದಾರೆ.

ಮುಂದುವರಿದು, ಗೋರಕ್’ಪುರದ ಯಾವುದೇ ಸ್ಥಳಕ್ಕೂ ಹೋದರೂ ಅವರಿಗೆ ನಮ್ಮ ಸರ್ಕಾರವು ಒದಗಿಸಿರುವ ಲಾಪ್ ಟಾಪ್ ಕೂಡಾ ಕಂಡುಬರುವುದೆಂದು ಅಖಿಲೇಶ್ ಹೇಳಿದ್ದಾರೆ.

ಸರ್ಕಾರಿ ಯೋಜನೆ ಅನುಷ್ಠಾನದಲ್ಲಿ ಸಮಾಜವಾದಿ ಸರ್ಕಾರವು ಪಕ್ಷಪಾತ ನಡೆಸುತ್ತದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸದ ಅಖಿಲೇಶ್, ಗೋರಕ್’ಪುರದಲ್ಲೇ ನಾವು ಯಾವುದೇ ಭೇದಭಾವವಿಲ್ಲದೇ 1 ಲಕ್ಷ ಬಡ ಮಹಿಳೆಯರಿಗೆ ಪಿಂಚಣಿ ನೀಡಿದ್ದೇವೆ ಎಂದು ಹೇಳಿದರು.

ಚುನಾವಣಾ ರ್ಯಾಲಿಯನ್ನುದ್ದೇಶಿ ಮಾತನಾಡುತ್ತಾ ಪ್ರಧಾನಿ, ಉತ್ತರ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆಯಿದೆಯೆಂದು  ಸಮಾಜವಾದಿ ಪಕ್ಷದ ವಿರುದ್ಧ ಹರಿಹಾಯ್ದಿದ್ದರು.

click me!