
ಬೆಂಗಳೂರು (ಆ.22): ರಾಮಚಂದ್ರಪುರ ಮಠ ಆಯೋಜಿಸಿದ್ದ ಕನ್ಯಾ ಸಂಸ್ಕಾರಕ್ಕೆ ಅಖಿಲ ಹವ್ಯಕ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.
ಹವ್ಯಕ ಒಕ್ಕೂಟದ ಸದಸ್ಯ ಗಣೇಶ್ ಭಟ್, ರಾಮಚಂದ್ರಪುರ ಮಠದಲ್ಲಿ ಆಯೋಜಿಸಿದ್ದ ಕನ್ಯಾ ಸಂಸ್ಕಾರ ಶಂಕರಚಾರ್ಯ ಮಠ ಪರಂಪರೆಗೆ ವಿರುದ್ಧವಾಗಿದೆ. ರಾಮಚಂದ್ರಪುರದಲ್ಲಿ ಮಠಾಧಿಶರಾಗಿದ್ದ ಯಾವ ಸ್ವಾಮೀಜಿಯೂ ಕನ್ಯಾ ಸಂಸ್ಕಾರದಂತಹ ಪದ್ಧತಿ ಅನುಸರಿಸಿಲ್ಲ. ಆದರೆ ರಾಘವೇಶ್ವರ ಸ್ವಾಮೀಜಿಗಳು ಹೊಸ ಪರಂಪರೆಯನ್ನು ಹುಟ್ಟಿ ಹಾಕಿದ್ದಾರೆ. ಅದರಲ್ಲೂ ಚಾರ್ತುಮಾಸದಲ್ಲಿ ಕನ್ಯೆಯರಿಂದ ದೂರವಿರಬೇಕಾದ ಸ್ವಾಮೀಜಿಗಳು, ಕನ್ಯಾ ಸಂಸ್ಕಾರ ನೀಡುವ ಮೂಲಕ ಮಠದ ಪರಂಪರೆ ಉಲ್ಲಂಘಿಸಿದ್ದಾರೆ. ರಾಘವೇಶ್ವರ ಸ್ವಾಮೀಜಿಗಳ ಮೇಲೆ ಅತ್ಯಾಚಾರ ಆರೋಪವಿರುವಾಗ ಇಂತಹ ಕಾರ್ಯಕ್ರಮ ಆಯೋಜಿಸುವ ಅಗತ್ಯವಿರಲಿಲ್ಲ. ಇದಕ್ಕೂ ಮುನ್ನ ಏಕಾಂತದಲ್ಲಿ ಕನ್ಯಾ ಸಂಸ್ಕಾರ ನೀಡಿದ್ದಾರೆ ಎಂಬ ಅನುಮಾನಗಳಿದ್ದವು. ಆದರೆ ಎಲ್ಲರಿಗೂ ಗೊತ್ತಾಗುವ ಹಾಗೆ ಕನ್ಯಾ ಸಂಸ್ಕಾರ ನೀಡುವ ಮೂಲಕ ಸಮಾಜವನ್ನು ಹಾಳು ಮಾಡಲು ಹೊರಟಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.