ಇದು ಬಂಪರ್'ನಲ್ಲೇ ಬಂಪರ್: ಏರ್'ಟೆಲ್'ನಿಂದ 1000 ಜಿಬಿ ಬೋನಸ್ ಡಾಟಾ !

Published : May 27, 2017, 07:25 PM ISTUpdated : Apr 11, 2018, 12:45 PM IST
ಇದು ಬಂಪರ್'ನಲ್ಲೇ ಬಂಪರ್: ಏರ್'ಟೆಲ್'ನಿಂದ 1000 ಜಿಬಿ ಬೋನಸ್ ಡಾಟಾ !

ಸಾರಾಂಶ

'ಎಕ್ಸ್ಕ್ಲೂಸೀವ್ ವೆಬ್ ಆಫರ್' ಹೆಸರಿನಲ್ಲಿ ಈ ಆಫರ್'ಅನ್ನು ಪ್ರಕಟಿಸಲಾಗಿದೆ

ಮುಂಬೈ(ಮೇ.27):ಏರ್'ಟೆಲ್ ಜಿಯೋಗೆ ಕೌಂಟರ್ ಕೊಡುವ ಸಲುವಾಗಿ ಬಂಪರ್'ನಲ್ಲೇ ಬಂಪರ್ ಆಫರ್ ಪ್ರಕಟಿಸಿದೆ. 'ಎಕ್ಸ್ಕ್ಲೂಸೀವ್ ವೆಬ್ ಆಫರ್' ಹೆಸರಿನಲ್ಲಿ ಈ ಆಫರ್'ಅನ್ನು ಪ್ರಕಟಿಸಿದ್ದು ಬ್ರಾಡ್'ಬ್ಯಾಂಡ್ ಬಳಕೆದಾರರಿಗೆ ಮಾತ್ರ ಪ್ರಸ್ತುತ ಯೋಜನೆ ಅನ್ವಯವಾಗಲಿದೆ.

750 ಹಾಗೂ 1000 ಜಿಬಿ ಬೋನಸ್ ಡಾಟಾ ಯೋಜನೆಯು ಒಂದು ವರ್ಷದ ಆಫರ್'ಆಗಿದ್ದು, ಬ್ರಾಡ್'ಬ್ಯಾಂಡ್ ಯೋಜನೆಗಳನ್ನುಆನ್'ಲೈನ್'ನಲ್ಲಿ ಯಾರು ಪಡೆದುಕೊಳ್ಳುತ್ತಾರೋ ಅವರಿಗೆ ಇದು ಲಭ್ಯವಾಗಲಿದೆ. 899 ರೂ.ಗಳಿಂದ ಈ ಯೋಜನೆಗಳು ಆರಂಭವಾಗಲಿವೆ. ತಿಂಗಳ ಈ ಯೋಜನೆಯಲ್ಲಿ ಅನಿಯಮಿತ ಎಸ್'ಟಿಡಿ ಕರೆಗಳು ಉಚಿತವಾಗಿತ್ತವೆ. ಜೊತೆಗೆ 16 ಎಂಬಿಪಿಎಸ್ ವೇಗದೊಂದಿಗೆ 60 ಜಿಬಿ ಡಾಟಾ ದೊರೆಯಲಿದೆ. ಇದರೊಂದಿಗೆ ತಿಂಗಳಿಗೆ 65 ಜಿಬಿಯೊಂದಿಗೆ ವರ್ಷಕ್ಕೆ 750 ಜಿಬಿ ಬೋನಸ್ ಡಾಟಾ ದೊರೆಯಲಿದೆ.

1000 ಜಿಬಿ ಬೋನಸ್ ಡಾಟಾ ಯೋಜನೆಯನ್ನು ಪಡೆದುಕೊಳ್ಳಬೇಕಾದರೆ, 40 ಎಂಬಿಪಿಎಸ್ ವೇಗದ 90 ಜಿಬಿ ಡಾಟಾ ಹೊಂದಿರುವ ರೂ. 1099, 100 ಎಂಬಿಪಿಎಸ್ ವೇಗದ 125 ಜಿಬಿ ಡಾಟಾ ಯೋಜನೆಯ ರೂ.1299 ಹಾಗೂ ಅಷ್ಟೇ ವೇಗ ಹೊಂದಿರುವ 160 ಜಿಬಿಯ 1499, 220 ಜಿಬಿಯ ರೂ.1799 ಯೋಜನೆಯನ್ನು ಅಳವಡಿಸಿಕೊಳ್ಳಬೇಕು. ಆಗ 30 ದಿನಗಳವರೆಗೆ 100 ಜಿಬಿ ಡಾಟಾ ಸಿಗಲಿದೆ.

ಪ್ರಸ್ತುತ ಯೋಜನೆಯು ದೆಹಲಿ ವೃತ್ತಕ್ಕೆ ಅನ್ವಯವಾಗಲಿದ್ದು, ಶೀಘ್ರದಲ್ಲಿಯೇ ಬೆಂಗಳೂರು ಒಳಗೊಂಡಂತೆ ಎಲ್ಲ ನಗರಗಳಿಗೂ ವಿಸ್ತರಿಸಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ