
ನವದೆಹಲಿ(ಮೇ.29): ಅಂತರರಾಷ್ಟ್ರೀಯ ಹಾರಾಟ ಪರವಾನಗಿಯನ್ನು ಪಡೆಯುವ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಏರ್ ಏಷ್ಯಾ ಸಮೂಹ ಸಂಸ್ಥೆಯ ಸಿಇಒ ಟೋನಿ ಫೆರ್ನಾಂಡಿಸ್ ಸೇರಿದಂತೆ 6 ಮಂದಿಯನ್ನು ಸಿಬಿಐ ಬಂಧಿಸಿದೆ.
ಕಂಪನಿ ನಿರ್ದೇಶಕರು ಅಂತರರಾಷ್ಟ್ರೀಯ ಕಾರ್ಯಾಚರಣೆಗಳಿಗೆ ಪರವಾನಗಿ ಪಡೆಯಲು ನಿಯಮ ಉಲ್ಲಂಘನೆ ಹಾಗೂ ವಿದೇಶಿ ಹೂಡಿಕೆ ಪ್ರಚಾರ ಮಂಡಳಿಯ ಉಲ್ಲಂಘನೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಏರ್ ಏಷ್ಯಾ ಪರವಾನಗಿ ಪಡೆಯಲು 5 ವರ್ಷಗಳ ಅನುಭವ ಹಾಗೂ 20 ವಿಮಾನಗಳನ್ನು ಹೊಂದಿರಬೇಕಾಗಿರುತ್ತದೆ. ಇದು 5/20 ರ ನಿಯಮವಾಗಿದೆ. ಪರವಾನಗಿಗಾಗಿ ಯಾವುದೇ ನಿಯಮಗಳನ್ನು ಪಾಲಿಸಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಏರ್ ಏಷ್ಯಾ ಸಂಸ್ಥೆಯು ದೆಹಲಿ, ಮುಂಬೈ ಹಾಗೂ ಬೆಂಗಳೂರಿನಲ್ಲಿ 6 ಕೇಂದ್ರಗಳನ್ನು ಹೊಂದಿದೆ. ಸಿಇಒ ಟೋನಿ ಫೆರ್ನಾಂಡಿಸ್ ಸರ್ಕಾರಿ ಅಧಿಕಾರಿಗಳೊಂದಿಗೆ ಲಾಬಿ ನಡೆಸಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.