ಬಯಲಾಯ್ತು ಮೋದಿ ವಿದೇಶ ಪ್ರವಾಸದ ಖರ್ಚು: ಸಿಂಗ್ ಇಸ್ KING!

By Web DeskFirst Published Apr 7, 2019, 10:39 AM IST
Highlights

ಪ್ರಧಾನಿ ಮೋದಿ ಅವರ 5  ವರ್ಷದ ವಿದೇಶ ಪ್ರವಾಸ ಖರ್ಚು ಎಷ್ಟು?| ಮೋದಿ ವಿದೇಶ ಪ್ರವಾಸದ ವಿಮಾನಯಾನ ಸೇವೆಯ ಬಿಲ್ ಕಳುಹಿಸಿದ ಏರ್ ಇಂಡಿಯಾ| ಪ್ರಧಾನಿ ಕಚೇರಿ ತಲುಪಿದ ವಿಮಾನ ಸೇವೆಯ ಬಿಲ್| ಮೋದಿ 5 ವರ್ಷದ ವಿದೇಶ ಪ್ರವಾಸದ ಖರ್ಚು 443.4 ಕೋಟಿ ರೂ.| ಮೋದಿ ಅವರಿಗಿಂತ ಹೆಚ್ಚು ಖರ್ಚು ಮಾಡಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್| ಸಿಂಗ್ ವಿದೇಶ ಪ್ರವಾಸದ ಖರ್ಚು ಬರೋಬ್ಬರಿ 493.2 ಕೋಟಿ ರೂ.|

ನವದೆಹಲಿ(ಏ.07): ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ಕುರಿತು ಪರ-ವಿರೋಧದ ಚರ್ಚೆ ನಡೆಯುತ್ತಲೇ ಇದೆ. ಈ ಮಧ್ಯೆ ಏರ್ ಇಂಡಿಯಾ ಪ್ರಧಾನಿ ವಿದೇಶಿ ಪ್ರವಾಸದ ಶುಲ್ಕ ಕೇಳಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.

ಏರ್ ಇಂಡಿಯಾ ನೀಡಿರುವ ಮಾಹಿತಿ ಪ್ರಕಾರ ಕಳೆದ 5 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸದ ವಿಮಾನಯಾನ ಸೇವೆಯ ವೆಚ್ಛ 443.4 ಕೋಟಿ ರೂ. ಆಗಿದೆ.

ಪ್ರಧಾನಿ ಮೋದಿ ಅವರ ಐದು ಸಾಗರೋತ್ತರ ಪ್ರವಾಸಗಳ ಖರ್ಚನ್ನು ಹೊರತುಪಡಿಸಿ, ಇತರ ವಿದೇಶ ಪ್ರವಾಸಗಳ ಶುಲ್ಕ ಭರಿಸುವಂತೆ  ವೈಮಾನಿಕ ಸಂಸ್ಥೆ   ಮನವಿ ಮಾಡಿದೆ .

ಪ್ರಧಾನ ಮಂತ್ರಿಗಳ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, ಮೋದಿ ಒಟ್ಟು 44 ಬಾರಿ ವಿದೇಶ ಪ್ರವಾಸ ಮಾಡಿದ್ದು, ಈ ಎಲ್ಲಾ ಪ್ರವಾಸಗಳಿಗೆ ವೈಮಾನಿಕ ಸಂಸ್ಥೆ ಪ್ರಧಾನಿ ಕಚೇರಿಗೆ ಬಿಲ್ ಕಳುಹಿಸಿದೆ.

ಇನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿದೇಶ ಪ್ರವಾಸಕ್ಕಿಂತ ಪ್ರಧಾನಿ ಮೋದಿ ಅವರ ವಿದೇಶ ಪ್ರವಾಸದ ಖರ್ಚು ಕಡಿಮೆಯಾಗಿದ್ದು, ಸಿಂಗ್ ಅವರ ವಿದೇಶ ಪ್ರವಾಸಕ್ಕಿಂತ ಮೋದಿ ಅವರ ವಿದೇಶ ಪ್ರವಾಸದಲ್ಲಿ 50 ಕೋಟಿ ರೂ. ಕಡಿಮೆ ಖರ್ಚಾಗಿದೆ. 2009-14ರ ಅವಧಿಯಲ್ಲಿ ಸಿಂಗ್ ಅವರ ವಿದೇಶ ಪ್ರವಾಸಕ್ಕಾಗಿ ಒಟ್ಟು 493.2 ಕೋಟಿ ರೂ. ವೆಚ್ಚವಾಗಿತ್ತು.

ಪ್ರಧಾನಿ ಮೋದಿ ಏಕಕಾಲದಲ್ಲಿ ಹಲವು ವಿದೇಶಗಳಿಗೆ ಭೇಟಿ ನೀಡುತ್ತಿರುವುದೇ, ಸಿಂಗ್ ಅವರಿಗಿಂತ ಅವರ ವಿದೇಶ ಪ್ರವಾಸದ ಖರ್ಚು ಕಡಿಮೆಯಾಗಲು ಪ್ರಮುಖ ಕಾರಣ ಎನ್ನಲಾಗಿದೆ. 
 ಅಲ್ಲದೇ ಸಿಂಗ್ ವಿದೇಶ ಪ್ರವಾಸಕ್ಕೆ ಪ್ರತಿ ಬಾರಿಯೂ ಏರ್ ಇಂಡಿಯಾ ವಿಮಾನವನ್ನೇ ಬಳಸಿದ್ದರೆ, ಮೋದಿ ಸಮೀಪದ ರಾಷ್ಟ್ರಗಳ ಭೇಟಿಗೆ ವಾಯುಪಡೆಯ ವಿಮಾನ ಬಳಸಿ ಖರ್ಚನ್ನು ತಗ್ಗಿಸಿದ್ದಾರೆ ಎನ್ನಲಾಗಿದೆ.

click me!