ಬಿಡ್ಬಿಡಿ ಪಬ್ ಜೀ: ವಾಯುಸೇನೆಯ ಗೇಮ್ ಸೂಪರ್ ಹೈ ಜೀ!

Published : Aug 01, 2019, 03:10 PM IST
ಬಿಡ್ಬಿಡಿ ಪಬ್ ಜೀ: ವಾಯುಸೇನೆಯ ಗೇಮ್ ಸೂಪರ್ ಹೈ ಜೀ!

ಸಾರಾಂಶ

ಭಾರತೀಯ ವಾಯುಸೇನೆಯಿಂದ ವಿನೂತನ ಗೇಮ್| 'Indian Air Force: A Cut Above'  ಎಂಬ ಹೆಸರಿನ ವಿನೂತನ ಗೇಮ್| ನವದೆಹಲಿಯಲ್ಲಿ ಗೇಮ್ ಬಿಡುಗಡೆ ಮಾಡಿದ ವಾಯುಪಡೆಯ ಮುಖ್ಯಸ್ಥ ಬಿಎಸ್ ಧನೋವಾ| ಸಿಂಗಲ್ ಮತ್ತು ಮಲ್ಟಿ ಪ್ಲೇಯರ್ ಆಪ್ಶನ್ ಇರುವ 3D ಏರ್ ಕಾಂಬ್ಯಾಟ್ ಗೇಮ್|  ಆಂಡ್ರಾಯ್ಡ್ ಮತ್ತು ಐಓಎಸ್'ಗಳಲ್ಲಿ 'Indian Air Force: A Cut Above' ಗೇಮ್ ಲಭ್ಯ| ವಾಯುಪಡೆಯ ವಿವಿಧ ಯುದ್ಧ ವಿಮಾನಗಳ ಪರಿಚಯ| ಗೇಮ್’ನಲ್ಲಿದೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಪಾತ್ರ| 

ನವದೆಹಲಿ(ಆ.01): ಪಬ್ ಜೀ, ಬ್ಲೂವೇಲ್ ಗೇಮ್’ಗಳಲ್ಲಿ ಮುಳುಗಿರುವ ಯುವ ಸಮುದಾಯವನ್ನು ತನ್ನತ್ತ ಸೇಳೆಯಲು ಭಾರತೀಯ ವಾಯುಸೇನೆ ವಿನೂತನ ಗೇಮ್’ವೊಂದನ್ನು ಪರಿಚಯಿಸಿದೆ.

'Indian Air Force: A Cut Above'  ಎಂಬ ಹೆಸರಿನ ವಿನೂತನ ಗೇಮ್ ಅನ್ನು ನವದೆಹಲಿಯಲ್ಲಿ ನಡೆದ ವಿಶೇಷ ಕರ್ಯಕ್ರಮದಲ್ಲಿ ವಾಯುಪಡೆಯ ಮುಖ್ಯಸ್ಥ ಬಿಎಸ್ ಧನೋವಾ ಬಿಡುಗಡೆ ಮಾಡಿದರು. ಪ್ರಸ್ತುತ ಬಿಡುಗಡೆಯಾಗಿರುವ

ಗೇಮ್ ಆನ್‌’ಲೈನ್‌’ನಲ್ಲಿ ಸಿಂಗಲ್ ಪ್ಲೇಯರ್ ಆಪ್ಶನ್ ಇದ್ದು, ವಾಯುಪಡೆ ದಿನಾಚಾರಣೆಯಂದು ಬಿಡುಗಡೆಯಾಗಲಿರುವ ಎರಡನೇ ಹಂತದಲ್ಲಿ  ಮಲ್ಟಿ ಪ್ಲೇಯರ್ ಆಪ್ಶನ್ ಇರುವ 3D ಏರ್ ಕಾಂಬ್ಯಾಟ್ ಗೇಮ್’ನ್ನು ಬಿಡುಗಡೆ ಮಾಡಲಾಗುವುದು.

ಈ ಗೇಮ್ ಆಂಡ್ರಾಯ್ಡ್ ಮತ್ತು ಐಓಎಸ್'ಗಳಲ್ಲಿ ಲಭ್ಯವಿದ್ದು, ಪ್ಲೇಸ್ಟೋರ್’ನಲ್ಲಿ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೇಮ್’ನ ಮೂಲಕ ಭಾರತೀಯ ವಾಯುಪಡೆಯ ಕುರಿತು ಮಾಹಿತಿಯನ್ನು ಯುವಜನತೆಯೊಂದಿಗೆ ಹಂಚಿಕೊಳ್ಳುವುದು ವಾಯುಪಡೆಯ ಉದ್ದೇಶವಾಗಿದೆ.

ವಾಯುಪಡೆಯ ಫೈಟರ್ ಜೆಟ್’ಗಳು, ಹೆಲಿಕಾಪ್ಟರ್, ಏರ್ ಡಿಫೆನ್ಸ್ ಮತ್ತು ಟ್ರಾನ್ಸಪೋರ್ಟ್ ಏರ್’ಕ್ರಾಫ್ಟ್‌ಗಳೊಂದಿಗೆ, ಭವಿಷ್ಯದಲ್ಲಿ ವಾಯುಪಡೆಯನ್ನು ಸೇರಲಿರುವ ಕಾಂಬಾಟ್ ಏರ್’ಕ್ರಾಫ್ಟ್’ಗಳನ್ನೂ ಸಹ ಗೇಮ್’ನಲ್ಲಿ ಕಾಣಬಹುದಾಗಿದೆ. 

ಬಾಲಾಕೋಟ್ ವಾಯುದಾಳಿಯಲ್ಲಿ ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಭಾರತೀಯ ವಾಯುಸೇನೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಪಾತ್ರವನ್ನೂ ಈ ಗೇಮ್;ನಲ್ಲಿ ಕಾಣಬಹುದು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೀನ್ ಕಾರ್ಡ್ ಸಂದರ್ಶನದ ವೇಳೆ 30 ವರ್ಷಗಳಿಂದ ಅಮೆರಿಕಾದಲ್ಲಿ ವಾಸವಿದ್ದ ಭಾರತೀಯ ಮಹಿಳೆಯ ಬಂಧನ
ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?