ಏರ್‌ಡೆಕ್ಕನ್ ಡಿ.15ರಿಂದ ಮತ್ತೆ ಶುರು: ಗೋಪಿನಾಥ್ ಸಾರಥ್ಯ

Published : Nov 03, 2017, 06:14 PM ISTUpdated : Apr 11, 2018, 12:57 PM IST
ಏರ್‌ಡೆಕ್ಕನ್ ಡಿ.15ರಿಂದ ಮತ್ತೆ ಶುರು: ಗೋಪಿನಾಥ್ ಸಾರಥ್ಯ

ಸಾರಾಂಶ

ಅಗ್ಗದ ದರದ ಟಿಕೆಟ್ ಮೂಲಕ ವಿಮಾನಯಾನ ವಲಯದಲ್ಲಿ ಕ್ರಾಂತಿಗೆ ಕಾರಣವಾಗಿದ್ದ ಏರ್‌ಡೆಕ್ಕನ್ ಸಂಸ್ಥೆ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದೆ. ಸಣ್ಣ ನಗರಗಳಿಗೂ ಅಗ್ಗದ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸುವ ಕೇಂದ್ರ ಸರ್ಕಾರ ಉಡಾನ್ ಯೋಜನೆಯಡಿ ಸೇವೆ ನೀಡಲು ಕನ್ನಡಿಗ ಜಿ.ಆರ್.ಗೋಪಿನಾಥ್ ಒಡೆತನದ ಏರ್ ಡೆಕ್ಕನ್ ಸಂಸ್ಥೆ ಸಿದ್ಧವಾಗಿದೆ.

ನವದೆಹಲಿ: ಅಗ್ಗದ ದರದ ಟಿಕೆಟ್ ಮೂಲಕ ವಿಮಾನಯಾನ ವಲಯದಲ್ಲಿ ಕ್ರಾಂತಿಗೆ ಕಾರಣವಾಗಿದ್ದ ಏರ್‌ಡೆಕ್ಕನ್ ಸಂಸ್ಥೆ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದೆ. ಸಣ್ಣ ನಗರಗಳಿಗೂ ಅಗ್ಗದ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸುವ ಕೇಂದ್ರ ಸರ್ಕಾರ ಉಡಾನ್ ಯೋಜನೆಯಡಿ ಸೇವೆ ನೀಡಲು ಕನ್ನಡಿಗ ಜಿ.ಆರ್.ಗೋಪಿನಾಥ್ ಒಡೆತನದ ಏರ್ ಡೆಕ್ಕನ್ ಸಂಸ್ಥೆ ಸಿದ್ಧವಾಗಿದೆ.

ಈ ಹಿಂದೆ ಏರ್‌ಡೆಕ್ಕನ್ ಕಿಂಗ್‌ಫಿಶರ್ ಏರ್‌ಲೈನ್ಸ್‌ನಲ್ಲಿ ವಿಲೀನವಾಗಿತ್ತು. ಬಳಿಕ ಅದರ ಹೆಸರನ್ನು ಸಿಂಪ್ಲಿಫ್ಲೈ ಡೆಕ್ಕನ್ ಎಂದು ಬದಲಾಯಿಸಲಾಗಿತ್ತು. ನಂತರದಲ್ಲಿ ಕಿಂಗ್‌ಫಿಶರ್ ಕಂಪನಿಯೇ ಮುಚ್ಚಿಹೋಗಿತ್ತು. ಈ ಹಿನ್ನೆಲೆಯಲ್ಲಿ ಏರ್ ಡೆಕ್ಕನ ಹೆಸರಲ್ಲಿ ಮತ್ತೆ ವಿಮಾನಯಾನಕ್ಕೆ ಗೋಪಿನಾಥ್ ಮುಂದಾಗಿದ್ದಾರೆ.

ಇತ್ತೀಚೆಗೆ ಕೇಂದ್ರ ಸರ್ಕಾರ, ಒಟ್ಟು 128 ಮಾರ್ಗಗಳಲ್ಲಿ ಸಂಚಾರ ನಡೆಸಲು ಹಲವು ವಿಮಾನಯಾನ ಕಂಪನಿಗಳಿಗೆ ಅನುಮತಿ ನೀಡಿತ್ತು. ಈ ಪೈಕಿ ಏರ್ ಒಡಿಶಾ 50 ಮಾರ್ಗಗಳಿಗೆ ಅನುಮತಿ ಪಡೆದಿದ್ದರೆ, ಏರ್ ಡೆಕ್ಕನ್ 34 ಮಾರ್ಗಗಳಲ್ಲಿ ಸಂಚಾರಕ್ಕೆ ಅನುಮತಿ ಪಡೆದಿದೆ. ಈ ಎರಡೂ ಕಂಪನಿಗಳು ಡಿ.15ರಿಂದ ಸಂಚಾರ ಆರಂಭಿಸುವ ಸಾಧ್ಯತೆ ಇದೆ ಎಂದು ಕೇಂದ್ರ ವಿಮಾನಯಾನ ಸಚಿವಾಲಯ ತಿಳಿಸಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌