
ಬೆಂಗಳೂರು : ಎಲ್ಲೆಲ್ಲೂ ಮಾನ್ಸೂನ್ ಆಫರ್‌ಗಳು. ವಿಮಾನಯಾನ ಸಂಸ್ಥೆಗಳೂ ಪ್ರಯಾಣದರದಲ್ಲಿ ಆಫರ್ ಘೋಷಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ಮೂಲಕ ವಿಮಾನದಲ್ಲಿ ಒಮ್ಮೆಯಾದರೂ ಪ್ರಯಾಣಿಸಬೇಕೆಂಬ ಬಡವನ ಕನಸು ನನಸಾಗುವುದರಲ್ಲಿದೆ.
ಮಾನ್ಸೂನ್ ನೆವದಲ್ಲಿ ಲೇಟೆಸ್ಟ್ ಆಗಿ ರಿಯಾಯಿತಿ ಪ್ರಕಟಿಸಿದ್ದು ಏರ್ ಏಷ್ಯಾ. ಈ ಆಫರ್‌ನಡಿ ಡೊಮೆಸ್ಟಿಕ್ ವಿಮಾನಯಾನದ ಕನಿಷ್ಟ ದರ1399 ರು. ನಿಗದಿಯಾಗಿದೆ. 10 ಜೂನ್‌ವರೆಗೂ ಬುಕ್ಕಿಂಗ್‌ಗೆ ಅವಕಾಶವಿದೆ. ಬೆಂಗಳೂರು, ದೆಹಲಿ, ಕೋಲ್ಕತ್ತ ಸೇರಿದಂತೆ ಎಲ್ಲಾ ಮಹಾನಗರಗಳ ಯಾನಕ್ಕೂ ಈ ಆಫರ್ ಅನ್ವಯವಾಗಲಿದೆ.
4 ಜೂನ್‌ನಿಂದ 30 ನವೆಂಬರ್‌ವರೆಗಿನ ಸಂಚಾರಕ್ಕೆ ಈ ರಿಯಾಯಿತಿಯನ್ನು ಪ್ರಕಟಿಸಿದೆ. ಈ ಆಫರ್‌ನಂತೆ ಬೆಂಗಳೂರಿನಿಂದ ಹೈದರಾಬಾದ್‌ಗೆ 1399 ರು.ಗಳಲ್ಲಿ ಪ್ರಯಾಣಿಸಬಹುದು. ಅದೇ ರೀತಿ ಕೊಚ್ಚಿನ್‌ನಿಂದ ಬೆಂಗಳೂರು, ಕೊಚ್ಚಿಯಿಂದ ಬೆಂಗಳೂರಿಗೂ ಇದೇ ದರವಿದೆ. ಕೇವಲ ಅಂತರ್‌ದೇಶೀಯ ಪ್ರಯಾಣ ಮಾತ್ರವಲ್ಲ, ಅಂತಾರಾಷ್ಟ್ರೀಯ ಹಾರಾಟಕ್ಕೂ ಈ ರಿಯಾಯಿತಿ ಅನ್ವಯವಾಗುತ್ತೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಏಷ್ಯನ್ ರಾಷ್ಟ್ರಗಳಿಗೂ ಕಡಿಮೆ ಖರ್ಚಿನಲ್ಲಿ ಪ್ರಯಾಣಿಸಬಹುದು. ಏರ್ ಏಷ್ಯಾ ಅಂತಾರಾಷ್ಟ್ರೀಯ ಹಾರಾಟಕ್ಕೆ 3999 ರು. ಕನಿಷ್ಟ ದರ ಘೋಷಿಸಿದೆ.
ನೆನಪಿಡಿ: ಈ ರಿಯಾಯಿತಿ ನಾಳೆಯವರೆಗೆ ಅಂದರೆ ಜೂ.10ರ ಒಳಗಿನ ಬುಕ್ಕಿಂಗ್‌ಗೆ ಮಾತ್ರ. ಅಂದಹಾಗೆ ಈ ಕಂಪೆನಿ 2017 ರ ಆರ್ಥಿಕ ವರ್ಷದಲ್ಲಿ ಸುಮಾರು 140 ಕೋಟಿ ರು. ನಷ್ಟದಲ್ಲಿತ್ತು. ಹೆಚ್ಚೆಚ್ಚು ಪ್ರಯಾಣಿಕರನ್ನು ಸೆಳೆಯುವ ತಂತ್ರಗಳಿಂದ ಈ ಬಾರಿ ಆ ನಷ್ಟದಿಂದ ಹೊರಬರಲು ಪ್ರಯತ್ನಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.