
ಬೆಳಗಾವಿ: 2022ರ ವೇಳೆಗೆ ಕೃಷಿ ಬೆಳೆಗಳ ಉತ್ಪಾದನೆ ಮತ್ತು ಬೆಲೆ ದುಪ್ಪಟ್ಟಾಗಲಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯತತ್ಪರರಾಗಿದ್ದು, 21ನೇ ಶತಮಾನದಲ್ಲಿ ಕೃಷಿ ಕ್ಷೇತ್ರದಲ್ಲಿ ಉನ್ನತವಾದ ಆಶಯಗಳೊಂದಿಗೆ ದೇಶ ಪ್ರಗತಿಯತ್ತ ಸಾಗಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭರವಸೆ ನೀಡಿದರು.
ಇಲ್ಲಿಯ ಕೆಎಲ್‌ಇ ಜೀರಿಗೆ ಸಭಾಭವನದಲ್ಲಿ ಭಾರತೀಯ ಕೃಷಿಕ ಸಮಾಜದಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಪರಿಷದ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಕಾರ್ಯದಿಂದ ಜನ ಹತಾಶರಾದರೆ ಅದರಿಂದ ದೇಶಕ್ಕೆ ಭವಿಷ್ಯವಿಲ್ಲ.
ಈ ನಿಟ್ಟಿನಲ್ಲಿ ಕೃಷಿಯಲ್ಲಿ ಭವಿಷ್ಯ ನಿರ್ಮಾಣದ ದೃಷ್ಟಿಯಿಂದ ದೂರದೃಷ್ಟಿಯ ವಿಚಾರಗಳೊಂದಿಗೆ ಬದಲಾವಣೆಯತ್ತ ಸಾಗಬೇಕಿದೆ ಎಂದರು. ನಾನು ಇಂದಿಗೂ ಹಳ್ಳಿಯಲ್ಲೇ ನೆಲೆಸಿದ್ದೇನೆ. ನನ್ನ ತಂದೆ, ನಾನು ಕೃಷಿಯನ್ನೇ ಅವಲಂಬಿಸಿದ್ದು ನಾವೂ ರೈತರೇ ಆಗಿದ್ದೇವೆ. ನಮಗೂ ಕೃಷಿ ಸಮಸ್ಯೆಗಳ ಅರಿವಿದೆ.
ನಮ್ಮ ದೇಶದ ಶೇ.55ರಷ್ಟು ಜನರು ಇಂದಿಗೂ ಕೃಷಿಯನ್ನೇ ಅವಲಂಭಿಸಿದ್ದಾರೆ. ಲಾಭವಿಲ್ಲದಿದ್ದರೂ ಅದರಲ್ಲಿ ನಿರೀಕ್ಷೆ ಇಟ್ಟುಕೊಂಡು ಕೃಷಿ ನಡೆಸುತ್ತಿರುವ ಅವರನ್ನು ಬಹಾದ್ದೂರ್ ಎನ್ನಲೇಬೇಕೆಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.