
ಮುಂಬೈ(ಮಾ.29): ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ ಆಧಾರ್ ಕಾರ್ಡ್ ವಿವರಗಳನ್ನು ಏಜೆನ್ಸಿಯೊಂದು ಟ್ವಿಟರ್ನಲ್ಲಿ ಟ್ವೀಟ್ ಮಾಡಿತ್ತು. ಈ ಮೂಲಕ ಮಹಿಯ ಪತ್ನಿ ಸಾಕ್ಷಿಯ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಈ ಏಜೆನ್ಸಿಯನ್ನು 10 ವರ್ಷಗಳ ಕಾಲ ಬ್ಲ್ಯಾಕ್ ಲಿಸ್ಟ್'ಗೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಈ ಏಜೆನ್ಸಿ ನಾಗರಿಕರ ಆಧಾರ್ ಕಾರ್ಡ್ ಮಾಡುವಲ್ಲಿ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಧಿಕಾರಕ್ಕೆ ಸಹಾಯ ಮಾಡುತ್ತಿತ್ತು.
ಏಜೆನ್ಸಿ ಮಾಡಿದ ಟ್ವೀಟ್ ಧೋನಿಯ ಪತ್ನಿ ಸಾಕ್ಷಿಯವರ ಗಮನಕ್ಕೆ ಬಂದಿತ್ತು. ಅವರು ಅದನ್ನು ಕೇಂದ್ರ ಕಾನೂನು, ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್'ರವರಿಗೆ ಟ್ವೀಟ್ ಮಾಡುವ ಮೂಲಕ ಈ ಕುರಿತಾಗಿ ಮಾಹಿತಿ ನೀಡಿದ್ದಲ್ಲದೆ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ವಾಸ್ತವವಾಗಿ ಏಜೆನ್ಸಿಯ ಕಾಮನ್ ಸರ್ವಿಸ್ ಸೆಂಟರ್ ಒಂದು ಮಾರ್ಚ್ 27ಕ್ಕೆ 'ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿ ತನ್ನ ಕುಟುಂಬ ಸಮೇತರಾಗಿ ಆಗಮಿಸಿ ಆಧಾರ್ ಕಾರ್ಡ್ ಅಪ್'ಡೇಟ್ ಮಾಡಿದ್ದಾರೆ' ಎಂದು ಟ್ವೀಟ್ ಮಾಡಿತ್ತು.
ಈ ಟ್ವೀಟ್'ನ್ನು ಸಚಿವ ರವಿಶಂಕರ್ ಪ್ರಸಾದ್'ರವರಿಗೂ ಟ್ಯಾಗ್ ಮಾಡಿದ್ದಲ್ಲದೆ ಧೋನಿಯೊಂದಿಗೆ ತೆಗೆಸಿಕೊಂಡ ಫೋಟೋವನ್ನೂ ಶೇರ್ ಮಾಡಿದ್ದರು. ಇದರೊಂದಿಗೆ ಧೋನಿಯ ಕೆಲವೊಂದು ವೈಯುಕ್ತಿಕ ಮಾಹಿತಿಯನ್ನೂ ಹಾಕಿದ್ದು, ಬಳಿಕ ಇದನ್ನು ಡಿಲೀಟ್ ಮಾಡಲಾಗಿತ್ತು.
ಈ ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸಾಕ್ಷಿ, ಈ ಕುರಿತಾಗಿ ಟ್ವೀಟ್ ಮಾಡುತ್ತಾ 'ವೈಯುಕ್ತಿಕತೆ ಇನ್ನೂ ಜೀವಂತವಾಗಿದೆಯಾ? ಅರ್ಜಿ ಸಮೇತವಾಗಿ ಆಧಾರ್ ಕಾರ್ಡ್ ಮಾಹಿತಿಯನ್ನು ಇವರು ಸಾರ್ವಜನಿಕವಾಗಿಸಿದ್ದಾರೆ' ಎಂದು ಬರೆದುಕೊಂಡಿದ್ದರು. ಈ ಕುರಿತಾಗಿ ಮಾಹಿತಿ ನೀಡಿಕ್ಕಾಗಿ ಸಚಿವರು ಧನ್ಯವಾದ ತಿಳಿಸಿದ್ದಲ್ಲದೆ ಈ ಕುರಿತಾಗಿ ತನಿಖೆ ನಡೆಸುವುದಾಗಿಯೂ ಹೇಳಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.