ನಿಮ್ಮ ಮನೆಯ ಅಗರಬತ್ತಿ ಸಿಗರೇಟ್ ಗಿಂತ ಡೇಂಜರ್: ಕ್ಯಾನ್ಸರ್ ಬರುತ್ತಂತೆ

By Web DeskFirst Published Sep 20, 2018, 2:23 PM IST
Highlights

ಸಿಗರೇಟ್ ಗಿಂತ ಡೇಂಜರ್ ಅಂತೆ ಅಗರಬತ್ತಿ?! ಅಗರಬತ್ತಿ ಹೊಗೆಯಿಂದ ಕ್ಯಾನ್ಸರ್ ಬರುತ್ತಂತೆ! ಚೀನಾ ವಿವಿ ಸಂಶೋಧಕರ ವರದಿಯಲ್ಲೇನಿದೆ?! ಅಗರಬತ್ತಿ ಹೊಗೆಯಲ್ಲಿ 3 ತೆರನಾದ ವಿಷಾನಿಲ

ಬೆಂಗಳೂರು(ಸೆ.20): ಬೆಳಗಾದರೆ ಸಾಕು ಭಾರತೀಯರ ಮನೆ ಘಮ ಘಮ ವಾಸನೆ. ದೇವರ ಮನೆಯಿಂದ ಹೊರ ಬರುವ ಅಮ್ಮಂದಿರು ಜೊತೆಗೆ ಅಗರಬತ್ತಿಯ ಪರಿಮಳವನ್ನು ಇಡೀ ಮನೆ ತುಂಬ ಕೊಂಡೊಯ್ಯುತ್ತಾರೆ. ಅಗರಬತ್ತಿ ಇಲ್ಲದೇ ಭಾರತೀಯರಿಗೆ ಬೆಳಗಾವುದೇ ಇಲ್ಲ. ಅಗರಬತ್ತಿ ಭಾರತೀಯರ ಮನೆ, ಮನಗಳಲ್ಲಿ ಅಷ್ಟೊಂದು ಪ್ರಾಮುಖ್ಯತೆ ಪಡೆದಿದೆ.

ಆದರೆ ನಿಮಗೆ ಈಗ ಹೇಳಲು ಹೊರಟಿರುವ ಸುದ್ದಿ ಅಗರಬತ್ತಿಯ ಘಮ ಘಮ ಪರಿಮಳದ ಕುರಿತಲ್ಲ. ಅಗರಬತ್ತಿ ಹೊರಸೂಸುವ ಹೊಗೆಯ ಕುರಿತು. ಅಗರಬತ್ತಿಯ ಹೊಗೆ ಸಿಗರೇಟ್ ಹೊಗೆಗಿಂತ ಡೇಂಜರ್ ಎಂಬುದು ನೂತನ ಸಂಶೋಧನೆಯಿಂದ ಸಾಬೀತಾಗಿದೆ. ಅಗರಬತ್ತಿ ಹೊರಸೂಸುವ ಹೊಗೆಯಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಿವೆ ಎಂಬುದನ್ನು ಚೀನಾದ ವಿಶ್ವವಿದ್ಯಾಲಯವೊಂದರ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಅಗರಬತ್ತಿಯ ಹೊಗೆಯಲ್ಲಿ ಮೂರು ತೆರನಾದ ವಿಷಾನಿಲ ಇದ್ದು, ಮುಟಾಜೆನಿಕ್, ಜೆನೋಟಾಕ್ಸಿಕ್ ಮತ್ತು ಸೈಟೋಟಾಕ್ಸಿಕ್ ಎಂಬ ವಿಷಾನಿಲ ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಅಗರಬತ್ತಿಯ ಹೊಗೆ ಮನುಷ್ಯನ ಶ್ವಾಸಕೋಶದೊಳಗೆ ಹೊಕ್ಕು, ಅಲ್ಲಿ ರಾಸಾಯನಿಕ ಕ್ರಿಯೆಗೊಳಪಟ್ಟು ಕ್ಯಾನ್ಸರ್‌ ಬರಲು ಕಾರಣವಾಗಬಹುದು ಎಂದು ಸಂಶೋಧನೆ ತಿಳಿಸಿದೆ.

click me!