ಸ್ವಚ್ಛ ನಗರಿ ಮತ್ತೆ ಮೈಸೂರು ನಂ. 1

First Published May 17, 2018, 12:01 PM IST
Highlights

ಕರ್ನಾಟಕದ ಮೂರು ನಗರಗಳು ಸ್ವಚ್ಛತೆಗೆ ಹಾಗೂ ಘನ ತ್ಯಾಜ್ಯ ನಿರ್ವಹಣೆಗೆ ಉತ್ತಮ ನಗರಿಗಳು ಎಂಬ ಪ್ರಶಸ್ತಿಗೆ ಭಾಜನವಾಗಿವೆ.  3 ರಿಂದ 10 ಲಕ್ಷವರೆಗಿನ ನಗರಗಳ ಪೈಕಿ ಅತಿ ಸ್ವಚ್ಛ ನಗರಿ ಎಂಬ ಕೀರ್ತಿಯನ್ನು ಮೈಸೂರು ಗಿಟ್ಟಿಸಿಕೊಂಡಿದೆ. 

ನವದೆಹಲಿ(ಮೇ 17) : ಇಂದೋರ್ ಮತ್ತು ಭೋಪಾಲ್ ದೇಶದ ನಂ.1 ಹಾಗೂ ನಂ.2 ಸ್ವಚ್ಛ ನಗರಿಗಳು ಎಂಬ ಖ್ಯಾತಿಗೆ ಸತತ 2ನೇ ವರ್ಷವೂ ಪಾತ್ರವಾಗಿವೆ. ಇದೇ  ವೇಳೆ ಚಂಡೀಗಢ ದೇಶದ ನಂ.3 ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ಇದೇ ವೇಳೆ ಕರ್ನಾಟಕದ ಮೂರು ನಗರಗಳು ಸ್ವಚ್ಛತೆಗೆ ಹಾಗೂ ಘನ ತ್ಯಾಜ್ಯ ನಿರ್ವಹಣೆಗೆ ಉತ್ತಮ ನಗರಿಗಳು ಎಂಬ ಪ್ರಶಸ್ತಿಗೆ ಭಾಜನವಾಗಿವೆ.  3 ರಿಂದ 10 ಲಕ್ಷವರೆಗಿನ ನಗರಗಳ ಪೈಕಿ ಅತಿ ಸ್ವಚ್ಛ ನಗರಿ ಎಂಬ ಕೀರ್ತಿಯನ್ನು ಮೈಸೂರು ಗಿಟ್ಟಿಸಿಕೊಂಡಿದೆ. ಇನ್ನು ಮಂಗಳೂರು ನಗರವು (3ರಿಂದ 10 ಲಕ್ಷವರೆಗಿನ ಜನಸಂಖ್ಯೆ ವಿಭಾಗ) ಘನ ತ್ಯಾಜ್ಯ ನಿರ್ವಹಣೆಯಲ್ಲಿ ಉತ್ತಮ ನಗರ ಸ್ಥಾನ ಪಡೆದುಕೊಂಡಿದೆ. 

1 ಲಕ್ಷ ಜನಸಂಖ್ಯೆ ಹೊಂದಿದ ನಗರಗಳಲ್ಲಿನ ವಿಭಾಗದಲ್ಲಿ ಉತ್ತಮ ಘನತ್ಯಾಜ್ಯ ನಿರ್ವಹಣೆಗಾಗಿ ಮೈಸೂರು ಜಿಲ್ಲೆಯ ಹುಣಸೂರು ಪ್ರಶಸ್ತಿ ಗಿಟ್ಟಿಸಿದೆ. ಜಾರ್ಖಂಡ್, ಮಹಾರಾಷ್ಟ್ರ ಹಾಗೂ ಛತ್ತೀಸ್‌ಗಢ ಟಾಪ್ 3  ಸ್ವಚ್ಛ ರಾಜ್ಯಗಳು ಎನ್ನಿಸಿಕೊಂಡಿವೆ. 37.66 ಲಕ್ಷ ನಾಗರಿಕರನ್ನು ಸಂದರ್ಶಿಸಿ, 4203 ನಗರಾಡಳಿತ ಸಂಸ್ಥೆಗಳಲ್ಲಿ ಸಮೀಕ್ಷೆ ಸಿದ್ಧಪಡಿಸಲಾಗಿದೆ.

click me!