ಮಹಿಳಾ ರೈಲು ಪ್ರಯಾಣಿಕರ ನೆರವಿಗೆ ಪ್ಯಾನಿಕ್ ಬಟನ್ ಪ್ಲಾನ್

First Published May 17, 2018, 11:46 AM IST
Highlights

ಈಶಾನ್ಯ ರೈಲ್ವೆ ಮಾರ್ಗದ ಎಲ್ಲ ರೈಲುಗಳ ಬೋಗಿಗಳಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತು ಅವರ ರಕ್ಷಣೆಗೆ ವಿಶೇಷ ಸಂದೇಶ (ಪ್ಯಾನಿಕ್) ರವಾನೆ ಬಟನ್ ಅಳಪಡಿಕೆಗೆ ನಿರ್ಧರಿಸಲಾಗಿದೆ.

ಲಖನೌ(ಮೇ.17]: ವಿಶ್ವದ ಅತಿದೊಡ್ಡ ಸಂಪರ್ಕ ಜಾಲಗಳಲ್ಲಿ ಒಂದಾಗಿರುವ ಭಾರತೀಯ ರೈಲ್ವೆಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ವಿಶೇಷ ರಕ್ಷಣೆ ವ್ಯವಸ್ಥೆ ಲಭ್ಯ ವಾಗಲಿದೆ. ಹೌದು, ಈಶಾನ್ಯ ರೈಲ್ವೆ ಮಾರ್ಗದ ಎಲ್ಲ ರೈಲುಗಳ ಬೋಗಿಗಳಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಮತ್ತು ಅವರ ರಕ್ಷಣೆಗೆ ವಿಶೇಷ ಸಂದೇಶ (ಪ್ಯಾನಿಕ್) ರವಾನೆ ಬಟನ್ ಅಳಪಡಿಕೆಗೆ ನಿರ್ಧರಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಈಶಾನ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಜಯ್ ಯಾದವ್, ‘ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಈ ವರ್ಷ ಉಪ ನಗರ ರೈಲುಗಳಲ್ಲಿ ರಾತ್ರಿ ಹೊತ್ತಿನ ರೈಲುಗಳಲ್ಲಿ ಮಹಿಳೆಯರ ನೇಮಿಸಿಕೊಳ್ಳಲಾಗಿದೆ. 

ದೂರದ ಊರುಗಳಲ್ಲಿ ರೈಲುಗಳಲ್ಲಿ ಪ್ರಯಾಣ ಮಾಡುವ ವೇಳೆ ಮಹಿಳೆಯರ ಮೇಲೆ ಕೆಲ ದೌರ್ಜನ್ಯ ಘಟನೆಗಳು ವರದಿಯಾದ ಹಿನ್ನೆಲೆಯಲ್ಲಿ, ಇಂಥ ಘಟನೆಗಳಿಗೆ ಬ್ರೇಕ್ ಹಾಕಲು ರೈಲ್ವೆ ಬೋಗಿಯ ಗಾರ್ಡ್‌ಗೆ ಸಂಪರ್ಕ ಕಲ್ಪಿಸುವ ಪ್ಯಾನಿಕ್ ಬಟನ್(ಎಚ್ಚರಿಕೆ ಸಂದೇಶ ರವಾನಿಸುವ ಬಟನ್)ಗಳನ್ನು ಅಳವಡಿಸುವ ಪ್ರಸ್ತಾಪ ಸಲ್ಲಿಸಲಾಗಿದೆ,’ ಎಂದಿದ್ದಾರೆ. 

click me!