ಪ್ರವಾಹದಿಂದ ಚೇತರಿಸಿಕೊಳ್ಳುತ್ತಿರುವ ಕೊಡಗಲ್ಲಿ ಇದೀಗ ಮತ್ತೆ ಆತಂಕ ಸೃಷ್ಟಿಯಾಗಿದೆ. ಭೂಮಿಯೊಳಘೆ ಇಲ್ಲಿ ರಾತ್ರಿಪೂರ್ತಿ ಸದ್ದು ಕೇಳಿಸಿದೆ. ಕರಿಕೆ ಗ್ರಾಮದ ಚೆತ್ತುಕಾಯ ಪ್ರದೇಶದಲ್ಲಿ ಭೂಮಿಯೊಳಗೆ ಸೋಮವಾರ ಭಾರಿ ಶಬ್ದ ಕೇಳಿಸಿದ್ದು ಆತಂಕ ಮೂಡಿಸಿದೆ.
ಮಡಿಕೇರಿ: ಭಾರೀ ಪ್ರಾಕೃತಿಕ ವಿಕೋಪ, ಭೂಕುಸಿತದಿಂದ ಚೇತರಿಸಿಕೊಳ್ಳುತ್ತಿರುವ ಕೊಡಗಿನಲ್ಲಿ ಮತ್ತೆ ಭೂಮಿಯೊಳಗೆ ಕೇಳಿಬರುತ್ತಿರುವ ಸದ್ದಿನಿಂದಾಗಿ ಆತಂಕ ಮನೆಮಾಡಿದೆ. ತಾಲೂಕಿನ ಕರಿಕೆ ಗ್ರಾಮದ ಚೆತ್ತುಕಾಯ ಪ್ರದೇಶದಲ್ಲಿ ಭೂಮಿಯೊಳಗೆ ಸೋಮವಾರ ಭಾರಿ ಶಬ್ದ ಕೇಳಿಸಿದ್ದು, ಈ ಭಾಗದ ಜನರಲ್ಲಿ ಭೀತಿ ಸೃಷ್ಟಿಸಿದೆ.
ಕಳ್ಳಾರ್ ಕೇಶವ ನಾಯ್ಕ ಎಂಬವರ ಮನೆಯ ಹಿಂಭಾಗದಲ್ಲಿ ಭೂಮಿಯೊಳಗೆ ಈ ಶಬ್ದ ಕೇಳಿಸಿದೆ. ಭಾನುವಾರ ರಾತ್ರಿ ಹಾಗೂ ಸೋಮವಾರ ಬೆಳಗ್ಗೆ 11 ಗಂಟೆಯವರೆಗೆ ಈ ಶಬ್ದ ಕೇಳಿಬಂದಿದೆ. ಈ ಹಿಂದೆ ಕೊಡಗಿನಲ್ಲಿ ಭೂಮಿಯೊಳಗೆ ಇದೇ ರೀತಿಯ ಸದ್ದುಕೇಳಿಬಂದಿತ್ತು. ಆ ಬಳಿಕ ಭೂಕಂಪನದ ಅನುಭವ ಆಗಿತ್ತು. ಇದಾಗಿ ಕೆಲದಿನಗಳ ಬಳಿಕ ಸುರಿದ ಭಾರೀ ಮಳೆಯಿಂದಾಗಿ ಅಲ್ಲಲ್ಲಿ ಗುಡ್ಡಕುಸಿದು ಭಾರೀ ಅನಾಹುತ ಸೃಷ್ಟಿಯಾಗಿತ್ತು.