ಕೊಡಗಿನಲ್ಲಿ ಮತ್ತೆ ಮಳೆಯ ಅಬ್ಬರ

By Web DeskFirst Published Aug 28, 2018, 9:16 AM IST
Highlights

ಕೆಲ ದಿನಗಳ ಕಾಲ ಕೊಡಗಿನಲ್ಲಿ ಭಾರೀ ಅಬ್ಬರದಿಂದ ಸುರಿದು ಪ್ರವಾಹ ಸೃಷ್ಟಿಸಿ ತಣ್ಣಗಾಗಿದ್ದ ಮಳೆ ಮತ್ತೆ ಸುರಿಯುತ್ತಿದೆ. ಅನೇಕ ಕಡೆ ಅಲ್ಪ ಬಿಡುವು ಪಡೆದು ಜೋರಾಗಿದೆ.

ಮಡಿಕೇರಿ :  ಕೊಡಗು ಜಿಲ್ಲೆಯಲ್ಲಿ ಸೋಮವಾರ ಮತ್ತೆ ಮಳೆ ಶುರುವಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ ಸೇರಿ ವಿವಿಧೆಡೆ ಬೆಳಗ್ಗಿನಿಂದ ಮಳೆ ಜೋರಾಗಿತ್ತು. ಮಧ್ಯೆ ಮಧ್ಯೆ ಮಳೆ ಬಿಡುವು ನೀಡಿ ಆಗಾಗ್ಗೆ ಸುರಿಯುತ್ತಿತ್ತು.

ಆದರೆ ಜಿಲ್ಲೆಯಲ್ಲಿ ಎಲ್ಲೂ ಮಳೆ ಸಂಬಂಧಿ ಹಾನಿ ಇಲ್ಲವೇ ಗುಡ್ಡಕುಸಿತದಂಥ ಘಟನೆಗಳು ಸೋಮವಾರ ವರದಿಯಾಗಿಲ್ಲ. ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 10.33 ಮಿ.ಮೀ. ಮಳೆ ಬಿದ್ದಿದೆ. ಕಳೆದ ವರ್ಷ ಇದೇ ದಿನ 32.28 ಮಿ.ಮೀ. ಮಳೆಯಾಗಿತ್ತು.

Latest Videos

ಮಡಿಕೇರಿ ತಾಲೂಕಿನಲ್ಲಿ 18 ಮಿ.ಮೀ, ವಿರಾಜಪೇಟೆ ತಾಲೂಕಿನಲ್ಲಿ 4.43 ಮಿ.ಮೀ. ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 8.55 ಮಿ.ಮೀ. ಮಳೆಯಾಗಿದೆ. ಇನ್ನು ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 3638.43 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟಾರೆ 1617.57 ಮಿ.ಮೀ. ಮಳೆಯಾಗಿತ್ತು.

click me!