10 ದಿನದಲ್ಲಿ ಮತ್ತೆ ನನಗೆ ಶಾಸಕ ಸ್ಥಾನ: ಇದು ಅನರ್ಹಗೊಂಡ ಶಾಸಕನ ವಿಶ್ವಾಸ

Published : Aug 04, 2019, 08:22 PM IST
10 ದಿನದಲ್ಲಿ ಮತ್ತೆ ನನಗೆ ಶಾಸಕ ಸ್ಥಾನ: ಇದು ಅನರ್ಹಗೊಂಡ ಶಾಸಕನ ವಿಶ್ವಾಸ

ಸಾರಾಂಶ

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿದ್ದು, ಬಿ.ಎಸ್.ಡಿಯೂರಪ್ಪ ಸಿಎಂ ಆಗಿದ್ದಾರೆ. ಆದ್ರೆ ಈಗಿರುವ ಪ್ರಶ್ನೆ ಅಂದ್ರೆ ಅನರ್ಹಗೊಂಡಿರುವ ಶಾಸಕರ ಮುಂದಿನ ನಡೆ ಏನು..? ಎನ್ನುವ ಚರ್ಚೆಗಳು ನಡೆದಿವೆ. ಇದರ ಮಧ್ಯೆ ಕಾಂಗ್ರೆಸ್ ಅನರ್ಹ ಶಾಸಕರೊಬ್ಬರು ಇನ್ನು ಹತ್ತು ದಿನದಲ್ಲಿ ಮತ್ತೆ ನನಗೆ ಶಾಸಕ ಸ್ಥಾನ ಸಿಗುತ್ತದೆ ಎಂದು ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರು, [ಆ.04]: ಇನ್ನು 10 ದಿನದಲ್ಲಿ ಮತ್ತೆ ನನಗೆ ಶಾಸಕ ಸ್ಥಾನ ಸಿಗುತ್ತದೆ ಎಂದು ಅನರ್ಹಗೊಂಡ ಯಶವಂತಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್‌. ಟಿ. ಸೋಮಶೇಖರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಕೆಂಗೇರಿಯ ಬಂಡೇಮಠದಲ್ಲಿ ಇಂದು [ಭಾನುವಾರ] ನಡೆದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ನನಗೆ ಸ್ಪೀಕರ್ ಅವಕಾಶವೇ ನೀಡಲಿಲ್ಲ. ಇನ್ನು 10 ದಿನದಲ್ಲಿ ಮತ್ತೆ ನನಗೆ ಶಾಸಕ ಸ್ಥಾನ ಸಿಗುತ್ತದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

17 ಅನರ್ಹರ ಬಗ್ಗೆ ಶೆಟ್ಟರ್ ಕೊಟ್ಟ ಹೊಸ ನ್ಯೂಸ್, ದಂಗಾಗೋ ಸರದಿ ಯಾರದ್ದು!

ನಮ್ಮ ಖರ್ಚು ವೆಚ್ಚವನ್ನು ಸುಧಾಕರ್, ಬಸವರಾಜು, ಎಂಟಿಬಿ ನಾಗರಾಜ್ ವಹಿಸಿಕೊಂಡಿದ್ದಾರೆ. ಕೃಷ್ಣಾ ಬೈರೇಗೌಡರ ಹೇಳಿಕೆಗೆ ನೊಂದು ನಾನು ಮಾತನಾಡಿದ್ದೇನೆ. ಯಾರಿಗೂ ನೋವು ತರುವ ಪ್ರಯತ್ನ ಮಾಡಿಲ್ಲ. ನನಗೆ ಸ್ವಾಭಿಮಾನ ಮುಖ್ಯ ಎಂದರು. 

ನಾನು ಕಾಂಗ್ರೆಸ್‌ಗಾಗಿ ದುಡಿದಿದ್ದೇನೆ. ಇಡೀ ಭಾರತದಲ್ಲಿ 1 ಲಕ್ಷ 16 ಸಾವಿರ ಮೆಂಬರ್ ಶಿಪ್ ಮಾಡಿದ್ದೇನೆ. ಇಂದು ಇಲ್ಲೆ ಮುಗಿಯಬೇಕು, ನಾನು ಯಾರ ಮನೆಗೂ ಹೋಗಿ ಪಕ್ಷಕ್ಕೆ ಬರ್ತೀನಿ ಎಂದು ಕೇಳಿಲ್ಲ, ಯಾವ ಪಕ್ಷದ ನಾಯಕರು ನನ್ನನ್ನು ಕರೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುಂಬೈನಲ್ಲಿ ತಂಗಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಸೋಮಶೇಖರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹ ಮಾಡಬೇಕೆಂದು ಅಂದಿನ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್  ಅವರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಸ್ಪೀಕರ್ ಅವರು ಸೋಮಶೇಖರ್ ಅವರನ್ನು  ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದರು.

ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೇಟ್ಟಿಲೇರಿದ್ದು, ನ್ಯಾಯಾಲದಲ್ಲಿ ನ್ಯಾಯ ಸಿಗುವ ವಿಶ್ವಾಸದಲ್ಲಿದ್ದಾರೆ. ಇದ್ರಿಂದ ಮತ್ತೆ ನನಗೆ ಶಾಸಕ ಸ್ಥಾನ ಸಿಗುತ್ತೆ ಎನ್ನುವ ಮಾತುಗಳನ್ನಾಡಿರಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ರಕ್ಷಿಸಲು ಹೋದವನನ್ನೇ ಕೆಳಗೆ ತಳ್ಳಿದ ಮಾನಸಿಕ ಅಸ್ವಸ್ಥ: ಜೀವ ಉಳಿಸಲು ಹೋಗಿ ಕೈಕಾಲು ಮುರಿದುಕೊಂಡ ಯುವಕ