ಬೆಂಗಳೂರು: 1 ಕೆ.ಜಿ ಚಿನ್ನವನ್ನು ಗುದದ್ವಾರದಲ್ಲಿಟ್ಟುಕೊಂಡು ಸಾಗಿಸುತ್ತಿದ್ದವರ ಬಂಧನ

By Web Desk  |  First Published Aug 4, 2019, 6:53 PM IST

ಗುದದ್ವಾರದಲ್ಲಿ ಚಿನ್ನ ಇಟ್ಟುಕೊಂಡು ಅಕ್ರಮ ಸಾಗಾಟಕ್ಕೆ ಯತ್ನ| ಇಬ್ಬರು ಪ್ರಯಾಣಿಕರನ್ನು ಬಂಧಿಸಿದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು| ಆರೋಪಿಗಳಿಂದ   1.05 ಕೆ.ಜಿ  ಚಿನ್ನ ವಶಕ್ಕೆ.


ಬೆಂಗಳೂರು, [ಆ.04]: 1.05 ಕೆ.ಜಿ ಚಿನ್ನವನ್ನು ಗುದದ್ವಾರದಲ್ಲಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. 

ಆರೋಪಿಗಳಿಂದ 37.40 ಲಕ್ಷ ರು. ಮೌಲ್ಯದ 1.05 ಕೆ.ಜಿ ಚಿನ್ನವನ್ನು  ವಶಪಡಿಸಿಕೊಂಡಿದ್ದಾರೆ. [ಆ.02]ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Tap to resize

Latest Videos

ದುಬೈನಿಂದ ಗೋವಾ ಮಾರ್ಗವಾಗಿ ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಬಂದ ಏರ್‌ ಇಂಡಿಯಾ ವಿಮಾನದಲ್ಲಿ ಇಬ್ಬರು ಪ್ರಯಾಣಿಕರು ಆಗಮಿಸಿದ್ದರು. ಅನುಮಾನದ ಮೇಲೆ  ಏರ್‌ ಇಂಟಲಿಜನ್ಸ್‌ ಯುನಿಟ್‌ನ ಅಧಿಕಾರಿಗಳು, ಇಬ್ಬರು ಪ್ರಯಾಣಿಕರನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆರೋಪಿಗಳು ಚಿನ್ನವನ್ನು ಗುದದ್ವಾರದಲ್ಲಿ ಬಚ್ಚಿಟ್ಟಕೊಂಡಿರುವುದು ತಿಳಿದುಬಂದಿದೆ.. 

ಏಪ್ರಿಲ್ ನಲ್ಲಿ ಇಂತಹದ್ದೇ ಒಂದು ಕೇಸ್ ನಡೆದಿತ್ತು. ಮೂವರು ಪ್ರಯಾಣಿಕರು 29.30 ಲಕ್ಷ ರು. ಮೌಲ್ಯದ ಚಿನ್ನವನ್ನು ಪೇಸ್ಟ್‌ ರೂಪದಲ್ಲಿ ಕ್ಯಾಪ್ಸುಲ್‌  ಮೂಲಕ ತಮ್ಮ ಗುದದ್ವಾರದಲ್ಲಿಟ್ಟುಕೊಂಡು ಸಾಗಿಸಲು ಯತ್ನಸಿದ್ದವರನ್ನು ಅಧಿಕಾರಿಗಳು ಬಂದಿಸಿದ್ದರು.

ಇದೇ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ

click me!