ಸಿಎಂಗೆ ಎರಡೂವರೆ ತಾಸು ಕಾದು ವಾಪಸಾದ ಭಾರತಿ

Published : Aug 28, 2018, 09:05 AM ISTUpdated : Sep 09, 2018, 10:18 PM IST
ಸಿಎಂಗೆ ಎರಡೂವರೆ ತಾಸು ಕಾದು ವಾಪಸಾದ ಭಾರತಿ

ಸಾರಾಂಶ

ವಿಷ್ಣುವರ್ಧನ್‌ ಸ್ಮಾರಕ ಸ್ಥಳಾಂತರ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಭೇಟಿಗೆ ನಟಿ ಭಾರತಿ ವಿಷ್ಣುವರ್ಧನ್‌ ಮತ್ತು ಅಳಿಯ ಅನಿರುದ್ಧ ತಾಸುಗಟ್ಟಲೆ ಕಾದು ವಾಪಸ್‌ ಹಿಂತಿರುಗಿದ ಘಟನೆ ಜರುಗಿದೆ.

ಬೆಂಗಳೂರು :  ನಟ ದಿವಂಗತ ವಿಷ್ಣುವರ್ಧನ್‌ ಸ್ಮಾರಕ ಸ್ಥಳಾಂತರ ವಿಚಾರಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಭೇಟಿಗೆ ನಟಿ ಭಾರತಿ ವಿಷ್ಣುವರ್ಧನ್‌ ಮತ್ತು ಅಳಿಯ ಅನಿರುದ್ಧ ತಾಸುಗಟ್ಟಲೆ ಕಾದು ವಾಪಸ್‌ ಹಿಂತಿರುಗಿದ ಘಟನೆ ಜರುಗಿತು.

ಸೋಮವಾರ ಸಂಜೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದರು. ಭೇಟಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಭಾರತಿ ವಿಷ್ಣುವರ್ಧನ್‌ ಅವರಿಗೆ ಸಮಯವನ್ನು ಸಹ ನೀಡಿದ್ದರು. ಆದರೆ, ಮುಖ್ಯಮಂತ್ರಿಗಳು ಸಾಲು ಸಾಲು ಸಭೆಗಳಲ್ಲಿ ಭಾಗಿಯಾಗಿದ್ದರು. ಸುಮಾರು ಎರಡು ತಾಸುಗಳ ಕಾಲ ಕಾದು ಕುಳಿತರೂ ಅವರನ್ನು ಒಳಗೆ ಕರೆಯದ ಕಾರಣ ಭೇಟಿಯಾಗದೆ ಹಿಂತಿರುಗಿದರು.

ಮತ್ತೊಮ್ಮೆ ಮುಖ್ಯಮಂತ್ರಿಗಳ ಭೇಟಿಗೆ ಸಮಯ ಕೇಳಿ ವಿಷ್ಣುವರ್ಧನ್‌ ಸ್ಮಾರಕ ಸ್ಥಳಾಂತರ ಕುರಿತು ಚರ್ಚಿಸಲಾಗುವುದು ಎಂದು ನಂತರ ಅನಿರುದ್ಧ ಸುದ್ದಿಗಾರರಿಗೆ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

US Wars: ಕಾಲು ಶತಮಾನದಲ್ಲಿ 10 ದೇಶಗಳ ಮೇಲೆ ಅಮೆರಿಕ ದಾಳಿ; 47 ಲಕ್ಷ ಜನರ ಸಾವು, 8 ಲಕ್ಷ ಕೋಟಿ ಡಾಲರ್ ಖರ್ಚು!
Holi 2026: ಅರ್ಧ ಜಗತ್ತೇ ಯುದ್ಧದಲ್ಲಿ ರಕ್ತದೋಕುಳಿ ಆಡುತ್ತಿರುವಾಗ, ಅನಾಥಾಶ್ರಮದ ಮಕ್ಕಳೊಂದಿಗೆ ಭಾರತೀಯ ಸೈನಿಕರ ಸಂಭ್ರಮದ ಬಣ್ಣದಾಟ