ಇಂಗ್ಲೆಂಡಿನಲ್ಲಿರುವ ದಾವೂದ್ ಆಸ್ತಿ ಮುಟ್ಟುಗೋಲು

By Suvarna Web DeskFirst Published May 4, 2017, 3:34 PM IST
Highlights

ಈ ಮೊದಲು ಯುಎಇ'ನಲ್ಲಿರುವ ಆಸ್ತಿಯನ್ನು ಸಂಪೂರ್ಣ ವಶಕ್ಕೆ ಪಡೆಯಲಾಗಿತ್ತು. ಆಜ್'ತಕ್ ಪತ್ರಿಕೆ ವರದಿ ಮಾಡಿರುವಂತೆ ನರೇಂದ್ರ ಮೋದಿ ಸರ್ಕಾರದ ಮನವಿ ಮೇರೆಗೆ ಭೂಗತಪಾತಕಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕೇಂದ್ರೀಯ ಗೃಹ ಇಲಾಖೆ ನೀಡಿರುವ ಹೇಳಿಕೆಯಂತೆ ಭಾರತದ ಗುಪ್ತಚರ ಸಂಸ್ಥೆಗಳು ಕೆಲವು ದಿನಗಳಿಂದ ಇಂಗ್ಲೆಂಡ್ ಸರ್ಕಾರದಿಂದ ಮಾಹಿತಿ ಹಂಚಿಕೊಳ್ಳುತ್ತಿದೆ.

ನವದೆಹಲಿ(ಮೇ.04): ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ದಾವೂದ್ ಇಬ್ರಾಹಿಂ'ನ ಇಂಗ್ಲೆಂಡಿನ ಆಸ್ತಿಯನ್ನು ಅಲ್ಲಿನ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.

ಈ ಮೊದಲು ಯುಎಇ'ನಲ್ಲಿರುವ ಆಸ್ತಿಯನ್ನು ಸಂಪೂರ್ಣ ವಶಕ್ಕೆ ಪಡೆಯಲಾಗಿತ್ತು. ಆಜ್'ತಕ್ ಪತ್ರಿಕೆ ವರದಿ ಮಾಡಿರುವಂತೆ ನರೇಂದ್ರ ಮೋದಿ ಸರ್ಕಾರದ ಮನವಿ ಮೇರೆಗೆ ಭೂಗತಪಾತಕಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕೇಂದ್ರೀಯ ಗೃಹ ಇಲಾಖೆ ನೀಡಿರುವ ಹೇಳಿಕೆಯಂತೆ ಭಾರತದ ಗುಪ್ತಚರ ಸಂಸ್ಥೆಗಳು ಕೆಲವು ದಿನಗಳಿಂದ ಇಂಗ್ಲೆಂಡ್ ಸರ್ಕಾರದಿಂದ ಮಾಹಿತಿ ಹಂಚಿಕೊಳ್ಳುತ್ತಿದೆ.

ಕಳೆದ ಜನವರಿಯಲ್ಲಿ ಯುಎಇ ಸರ್ಕಾರ ದಾವುದ್ ಇಬ್ರಾಹಿಂ'ನ ಹೋಟೆಲ್,ಆಸ್ತಿ, ಕಂಪನಿಗಳು ಸೇರಿದಂತೆ 15 ಸಾವಿರ ಕೋಟಿ ರೂ.ಗೂ ಹೆಚ್ಚಿನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಭಾರತದ ಭದ್ರತಾ ಸಲಹೆಗಾರ ಅಜಿತ್ ದಾವೊಲ್ ಕಳೆದ ವರ್ಷ ಯುಎಇ'ಗೆ ಭೇಟಿ ನೀಡಿದ ನಂತರ ಆಸ್ತಿಯನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ದಾವುದ್'ನ ಆಸ್ತಿ ಮೊರಾಕೊ,ಸ್ಪೇನ್,ಯುಎಇ,ಸಿಂಗಾಪುರ್,ಥೈಲಾಂಡ್,ಸೈಪ್ರಸ್,ಟರ್ಕಿ,ಇಂಡಿಯಾ,ಪಾಕಿಸ್ತಾನ ಹಾಗೂ ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿದೆ.

ಈ ನಡುವೆ ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮೆಹರ್ಶಿ ಬ್ರಿಟನ್ ಸರ್ಕಾರದ ಶಾಶ್ವತ ಇಲಾಖಾ ಕಾರ್ಯದರ್ಶಿ ಪಸ್ಟಿ ವಿಲ್ಕಿನ್'ಸನ್ ಅವರೊಂದಿಗೆ  ಮಾತುಕತೆ ನಡೆಸಿದ್ದರು. ಭಾರತೀಯ ಬ್ಯಾಂಕ್'ಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ದೇಶದ್ರೋಹ ಆರೋಪ ಹೊತ್ತು ಇಂಗ್ಲೆಂಡ್'ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಹಸ್ತಾಂತರದ ಬಗ್ಗೆಯೂ ಮಾತುಕತೆ ನಡೆಸಲಾಗಿದೆ ಎನ್ನಲಾಗಿದೆ.

click me!