ಐಐಟಿ ಆವರಣದಲ್ಲಿ ಗೂಳಿಗಳ ದಾಳಿ: ಓರ್ವ ವಿದ್ಯಾರ್ಥಿ ಗಂಭೀರ!

Published : Jul 30, 2019, 04:47 PM IST
ಐಐಟಿ ಆವರಣದಲ್ಲಿ ಗೂಳಿಗಳ ದಾಳಿ: ಓರ್ವ ವಿದ್ಯಾರ್ಥಿ ಗಂಭೀರ!

ಸಾರಾಂಶ

ಐಐಟಿ ಮುಂಬೈ ಆವರಣದಲ್ಲಿ ಹೆಚ್ಚಾಯ್ತು ಹಸು, ಗೂಳಿಗಳ ಹಾವಳಿ| ಹಸು ಪರೀಕ್ಷಾ ಕೊಠಡಿ ತಲುಪಿದ ಬೆನ್ನಲ್ಲೇ, ಗೂಳಿಗಳ ವಿಡಿಯೋ ವೈರಲ್| ಗೂಳಿ ದಾಳಿಗೆ ಓರ್ವ ವಿದ್ಯಾರ್ಥಿ ಸ್ಥಿತಿ ಗಂಭೀರ

ಮುಂಬೈ[ಜು.30]: ಮುಂಬೈ ಐಐಟಿಯ ಪರೀಕ್ಷಾ ಕೊಠಡಿಗೆ ಹಸು ನುಗ್ಗಿದ್ದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ವಿಡಿಯೋ ಈಗ ಐಐಟಿ ಅವರಣಕ್ಕೆ ಗೂಳಿಗಳು ನುಗ್ಗಿ ರಂಪಾಟ ನಡೆಸಿರುವ ಸುದ್ದಿ ವರದಿಯಾಗಿದೆ. ಗೂಳಿಗಳ ರಂಪಾಟದಿಂದ ಓರ್ವ ವಿದ್ಯಾರ್ಥಿ ಗಮಭೀರವಾಗಿ ಗಾಯಗೊಂಡಿದ್ದಾನೆ.

ಹೌದು ಹಸುಗಳು ನುಗ್ಗಿದ್ದ ಪ್ರಕರಣಕ್ಕೂ ಮೊದಲೇ ಗೂಳಿ ನುಗ್ಗಿದ್ದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿಸಿಟಿವಿಯಲ್ಲಿ ಈ ಘಟನೆ ರೆಕಾರ್ಡ್ ಆಗಿದ್ದು, ಎರಡು ಗೂಳಿಗಳು ಪರಸ್ಪರ ಗುದ್ದಾಡುತ್ತಾ ಕಾಲೇಜು ಆವರಣ ಪ್ರವೇಶಿಸಿವೆ. ಈ ಸಂದರ್ಭದಲ್ಲಿ ಆವರಣದಲ್ಲಿ ನಿಂತಿದ್ದ ವಿದ್ಯಾರ್ಥಿ ಗೂಳಿಗಳ ಈ ಕಾದಾಟದ ನಡುವೆ ಸಿಲುಕಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ವಿದ್ಯರ್ಥಿಗೆ ಚಿಕಿತ್ಸೆ ಮುಂದುವರೆದಿದೆ.

ಮುಂಬೈ ಐಐಟಿ ಮೊದ​ಲ ಮಹಡಿ ಪರೀಕ್ಷಾ ಕೊಠ​ಡಿ​ಗೆ ಬಂತು ಬೀದಿ ಹಸು!

ಗಾಯಗೊಂಡ ವಿದ್ಯಾರ್ಥಿ ತಿರುವನಂತಪುರಂ ನಿವಾಸಿಯಾಗಿದ್ದು, ಅಕ್ಷಯ್ ಪ್ರಸನ್ನ ಲಾಠ್ ಎಂದು ಗುರುತಿಸಲಾಗಿದೆ. ಐಐಟಿ ಆವರಣದಲ್ಲಿ ಹಸು, ಗೂಳಿಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ದಾಳಿ ತಡೆಯಲು ಸದ್ಯ ಕಾಲೇಜಿನಲ್ಲಿ ಸಮಿತಿಯನ್ನು ರಚಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ಪ್ರದರ್ಶನದ ವೇಳೆ ಝೂನಲ್ಲಿ ಆರೈಕೆ ಮಾಡ್ತಿದ್ದವರ ಮೇಲೆಯೇ ಕರಡಿ ಅಟ್ಯಾಕ್: ವೀಡಿಯೋ