6 ರಿಂದ 60 - ಇದು ಮಂಗಳೂರು ವಿದ್ಯಾರ್ಥಿಗೆ ಮರು ಮೌಲ್ಯಮಾಪನದಲ್ಲಿ ಬಂದ ಅಂಕ

First Published May 30, 2018, 6:32 PM IST
Highlights

ಮೌಲ್ಯಮಾಪಕರ ಎಡವಟ್ಟಿನಿಂದ ಬಂಟ್ವಾಳ ವಿದ್ಯಾರ್ಥಿ ಮೊಹಮ್ಮದ್ ತಮೀಮ್‌ಗೆ ಎಸ್‌ಎಸ್‌ಎಲ್‌ಸಿ ಹಿಂದಿ ಪರೀಕ್ಷೆಯಲ್ಲಿ 60 ಅಂಕ ಬದಲು 6 ಅಂಕ ನೀಡಲಾಗಿತ್ತು.

ಮಂಗಳೂರು(ಮೇ.30) ಪರೀಕ್ಷಾ ಮೌಲ್ಯಮಾಪಕರು ಒಂದಲ್ಲ ಎರಡಲ್ಲ ಪದೇ ಪದೇ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನ ಪರೀಶಿಲಿಸುತ್ತಾರೆ. ಒಂದು ಸಣ್ಣ ತಪ್ಪು ಕೂಡ ವಿದ್ಯಾರ್ಥಿಯ ಭವಿಷ್ಯ ಮೇಲೆ ಪರಿಣಾಮ ಬೀರಲಿದೆ ಅನ್ನೋ ಅರಿವು ಮೌಲ್ಯಮಾಪಕರಿಗೆ ಇರುತ್ತೆ. ಇಷ್ಟಾದರೂ, ಮಂಗಳೂರಿನಲ್ಲಿ ಎಸ್‌ಎಸ್‌ಎಲ್‌ಸಿ ಮೌಲ್ಯಮಾಪಕರ ಎಡವಟ್ಟಿನಿಂದ 60 ಅಂಕಪಡೆದಿದ್ದ ಎಸ್‌ಎಲ್‌ಎನ್‌ಪಿ ಮೊಹಮ್ಮದ್ ತಮೀನ್ ಕೇವಲ 6 ಅಂಕ ನೀಡಿ ಅನುತ್ತೀರ್ಣಮಾಡಿದ್ದರು.  ಆದರೆ  ಗಾಬರಿಯಾದ ವಿದ್ಯಾರ್ಥಿ ತಮೀನ್ ಮರಮೌಲ್ಯ ಮಾಪನಕ್ಕೆ ಹಾಗು ಉತ್ತರ ಪತ್ರಿಕೆಯ ನಕಲು ಕಾಪಿ ನೀಡುವಂತೆ ಅರ್ಜಿ ಹಾಕಿದ್ದರು. ಉತ್ತರ ಪತ್ರಿಕೆಯ ಕಾಪಿ ನೋಡಿದಾಗಲೇ ಮೌಲ್ಯಮಾಪಕರ ಎಡವಟ್ಟು ಮನದಟ್ಟಾಯಿತು. ಮೌಲ್ಯ ಮಾಪಕ 60 ಅಂಕ ಬರೆಯೋ ಬದಲು ಕೇವಲ 6 ಅಂಕ ಬರೆದು ವಿದ್ಯಾರ್ಥಿಯನ್ನ ಅನುತ್ತೀರ್ಣ ಮಾಡಿದ್ದರು.

 
ಸತತ 7 ವರ್ಷಗಳಿಂದ ನಮ್ಮ ಶಾಲೆ ಶೇಕಡಾ 100 ಫಲಿತಾಂಶ ಕಂಡಿದೆ. ಅದರಲ್ಲೂ ತಮೀಮ್ ಹಿಂದಿ ಭಾಷೆಯ ಆಂತರಿಕ ಪರೀಕ್ಷೆಯಲ್ಲಿ 20 ರಲ್ಲಿ 18 ಅಂಕ ಪಡೆದಿದ್ದಾನೆ. ಆದರೆ ಅಂತಿಮ ಪರೀಕ್ಷೆಯಲ್ಲಿ ಕೇವಲ 6 ಅಂಕ ಪಡೆದಿದ್ದು ನಮಗೂ ಹಲವು ಅನುಮಾನ ಮೂಡಿಸಿತ್ತು. ಹೀಗಾಗಿ ಮರು ಮೌಲ್ಯಮಾಪನಕ್ಕೆ ಒತ್ತಾಯಿಸಿದ್ದೇವು ಎಂದು ಶಾಲಾ ಮುಖ್ಯೋಪಾಧ್ಯಾಯ ರಾಮಾ ಎಸ್ ಬಂಡಾರಿ ಹೇಳಿದ್ದಾರೆ. ಮರು ಮೌಲ್ಯಮಾಪನಕ್ಕೂ ಮೊದಲು 382 ಅಂಕ ಪಡೆದಿದ್ದ ತಮೀಮ್ ಬಳಿಕ 436 ಅಂಕ ಪಡೆದಿದ್ದಾರೆ. 

click me!