
ಬೆಂಗಳೂರು(ಮೇ.30): ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಐವರು ಅಭ್ಯರ್ಥಿಗಳನ್ನು ಫೈನಲ್'ಗೊಳಿಸಿದೆ.
ಎಸ್.ರುದ್ರೇಗೌಡ, ತೇಜಸ್ವಿನಿಗೌಡ, ರಘುನಾಥ್ ರಾವ್ ಮಲ್ಕಾಪುರೆ, ಕೆ.ಪಿ.ನಂಜುಂಡಿ, ಎನ್.ರವಿಕುಮಾರ್ ಹೆಸರನ್ನು ಬಿಜೆಪಿ ಸೂಚಿಸಿದೆ. ಐವರಲ್ಲಿ ರಘುನಾಥ್ ರಾವ್ ಮಲ್ಕಾಪುರೆ ಪುನರಾಯ್ಕೆ ಬಯಸಿದ್ದಾರೆ.
ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಸೋಮಣ್ಣ ಬೇವಿನಮದರ್, ಭಾನುಪ್ರಕಾಶ್ ಜೂನ್.17ರಂದು ನಿವೃತ್ತರಾಗುವ ಬಿಜೆಪಿ ಪರಿಷತ್ ಸದಸ್ಯರು. ಜೂನ್. 11ರಂದು ಚುನಾವಣೆ ನಡೆಯಲಿದ್ದು 11 ಸ್ಥಾನಗಳ ಪೈಕಿ 5 ಸ್ಥಾನಗಳನ್ನು ನಿರಾಯಾಸವಾಗಿ ಬಿಜೆಪಿ ಗೆಲ್ಲಲಿದೆ.
ಸಿ.ಎಂ.ಇಬ್ರಾಹಿಂ ಹಾಗೂ ಕೆ. ಗೋವಿಂದರಾಜು ಅವರಿಗೆ ಪುನಃ ಅವಕಾಶ ನೀಡಲಾಗಿದೆ. ಭೈರತಿ ಸುರೇಶ್ ಈಗಾಗಲೇ ಹೆಬ್ಬಾಳ ಕ್ಷೇತ್ರದಿಂದ ವಿಧಾನ ಸಭೆಗೆ ಆಯ್ಕೆಯಾಗಿದ್ದಾರೆ.
ಮೋಟಮ್ಮ ಹಾಗೂ ಎಂ.ಆರ್.ಸೀತಾರಾಂ ಕಾಂಗ್ರೆಸ್'ನಿಂದ ನಿವೃತ್ತರಾಗುವ ಇನ್ನುಳಿದ ಸದಸ್ಯರು. ಜೆಡಿಎಸ್‌ನಿಂದ ಸೈಯದ್ ಮುದೀರ್ ಆಗಾ ಅವರು ಸಹ ನಿವೃತ್ತಿರಾಗಲಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ 78, ಬಿಜೆಪಿ 104,ಜೆಡಿಎಸ್ 37 ಸದಸ್ಯರನ್ನು ಹೊಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.