ಹೋಟೆಲ್'ಗಳ ಮೇಲೆ ಕಣ್ಣಿಟ್ಟ ಮೋದಿ ಸರ್ಕಾರ

Published : Apr 11, 2017, 09:51 AM ISTUpdated : Apr 11, 2018, 12:59 PM IST
ಹೋಟೆಲ್'ಗಳ ಮೇಲೆ ಕಣ್ಣಿಟ್ಟ ಮೋದಿ ಸರ್ಕಾರ

ಸಾರಾಂಶ

ಆಹಾರದ ಗುಣಮಟ್ಟ, ಬಿಸಾಡುವುದು, ಹೆಚ್ಚಾಗಿ ಬಳಸುವುದು ಮುಂತಾದವುಗಳ ಮೇಲೆ ಸರ್ಕಾರ ನಿಗಾ ಇರಿಸಲು ಹೊರಟಿದೆ. ಹೋಟೆಲ್'ಗಳು ಹಾಗೂ ರಸ್ಟೋರೆಂಟ್'ಗಳು ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲಿಸುತ್ತಿಲ್ಲ. ಗ್ರಾಹಕರಿಂದ ಅಗತ್ಯಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದು, ಹೆಚ್ಚು ಆಹಾರವನ್ನು ಬಡಿಸುವುದು ತದ ನಂತರ ಬಿಸಾಡುವುದು, ಇವು ಎಲ್ಲಡೆ ಕಂಡು ಬರುತ್ತಿರುವ ಸಾಮಾನ್ಯ ವಿಷಯವಾಗಿದೆ.

ನವದೆಹಲಿ(ಏ.11): ಕಾಳಧನಿಕರು, ಭ್ರಷ್ಟಚಾರಿಗಳಿಗೆ ಈಗಾಗಲೆ ವಾಗ್ದಂಡನೆ ವಿಧಿಸುತ್ತಿರುವ ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ದೇಶದ ಜನತೆ  ಅತಿ ಮುಖ್ಯವಾಗಿ ಅವಲಂಬಿಸಿರುವ  ಹೋಟಲ್'ಗಳ ಮೇಲೆ ಕಣ್ಣಿಟ್ಟಿದೆ.

ಆಹಾರದ ಗುಣಮಟ್ಟ, ಬಿಸಾಡುವುದು, ಹೆಚ್ಚಾಗಿ ಬಳಸುವುದು ಮುಂತಾದವುಗಳ ಮೇಲೆ ಸರ್ಕಾರ ನಿಗಾ ಇರಿಸಲು ಹೊರಟಿದೆ. ಹೋಟೆಲ್'ಗಳು ಹಾಗೂ ರಸ್ಟೋರೆಂಟ್'ಗಳು ಸರ್ಕಾರ ವಿಧಿಸಿರುವ ನಿಯಮಗಳನ್ನು ಪಾಲಿಸುತ್ತಿಲ್ಲ. ಗ್ರಾಹಕರಿಂದ ನಿಗದಿ ಪಡಿಸಿದ್ದಕ್ಕಿಂ ಹೆಚ್ಚು ಹಣ ವಸೂಲಿ ಮಾಡುವುದು, ಹೆಚ್ಚು ಆಹಾರವನ್ನು ಬಡಿಸುವುದು ತದ ನಂತರ ಬಿಸಾಡುವುದು, ಇವು ಎಲ್ಲಡೆ ಕಂಡು ಬರುತ್ತಿರುವ ಸಾಮಾನ್ಯ ವಿಷಯವಾಗಿದೆ.

ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನಾವಳಿ ಸಿದ್ಧಪಡಿಸಿ ಹೋಟೆಲ್'ಗಳಿಗೆ ನೀಡಿ ಉತ್ತರವನ್ನು ಪಡೆಯಲು ಸರ್ಕಾರ ಯೋಜಿಸಿದೆ. ಅಲ್ಲದೆ ಆಹಾರ ತ್ಯಾಜ್ಯವಾಗುತ್ತಿರುವ ಬಗ್ಗೆ ಮಾರ್ಚ್ 26 ರ ಮನ್ ಕಿ ಬಾತ್ ಭಾಷಣದಲ್ಲಿ ಪ್ರಸ್ತಾಪಿಸಿ, ಆಹಾರವನ್ನು ಹಾಳು ಮಾಡುವುದು ಬಡವರಿಗೆ ಅನ್ಯಾಯ ಮಾಡಿದಂತೆ ಎಂದು ತಿಳಿಸಿದ್ದರು.

ಹೋಟೆಲ್'ಗಳ ಆಹಾರ'ಗಳ ಗುಣಮಟ್ಟ, ತ್ಯಾಜ್ಯವನ್ನಾಗುತ್ತಿರುವುದನ್ನು ನಿಯಂತ್ರಿಸುವುದುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಶೀಘ್ರ ಕಾನೂನನ್ನು ರೂಪಿಸುವುದಾಗಿ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಹಂಚಿಕೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಪ್ರಕಾರ ವಿಶ್ವದಲ್ಲಿ ಪ್ರತಿ ವರ್ಷ 1.3 ಬಿಲಿಯನ್ ಟನ್ ಆಹಾರ ತ್ಯಾಜ್ಯವಾಗುತ್ತಿದೆ. ಭಾರತ ಸಹ ಆಹಾರ ವೆಚ್ಚ ಮಾಡುವುದಲ್ಲಿ 7ನೇ ಸ್ಥಾನದಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!