ತಜ್ಞರ ಅಭಿಪ್ರಾಯ ಪಡೆದ ನಂತರ ರಾಜ್ಯಪಾಲರ ಅಂತಿಮ ನಿರ್ಧಾರ ಸಾಧ್ಯತೆ

Published : Feb 15, 2017, 12:25 PM ISTUpdated : Apr 11, 2018, 12:43 PM IST
ತಜ್ಞರ ಅಭಿಪ್ರಾಯ ಪಡೆದ ನಂತರ ರಾಜ್ಯಪಾಲರ ಅಂತಿಮ ನಿರ್ಧಾರ ಸಾಧ್ಯತೆ

ಸಾರಾಂಶ

ಚೆನ್ನೈ (ಫೆ.15): ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆಯ ವಿಷಯದಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆದ ನಂತರ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.  ಹಿರಿಯ ವಕೀಲ ಸೋಲಿ ಸೊರಾಬ್ಜಿ ಸೇರಿದಂತೆ ಇನ್ನೂ ಇಬ್ಬರು ಕಾನೂನು ತಜ್ಞರ ಅಭಿಪ್ರಾಯ ಪಡೆದ ನಂತರ ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಹೊಸ ಸರ್ಕಾರ ರಚನೆಗೆ ಯಾರಿಗೆ ಅವಕಾಶ ನೀಡುವುದರ ಬಗ್ಗೆ ತೀರ್ಮಾನಿಸಲಿದ್ದಾರೆ.

ಕೇಂದ್ರ ಸರ್ಕಾರಕ್ಕೆ ತಾವೇ ಪತ್ರದಲ್ಲಿ ತಿಳಿಸಿರುವಂತೆ ವಿದ್ಯಾಸಾಗರ್ ರಾವ್ ಫೆ.5 ರಂದು ತಮಿಳುನಾಡು ಸಿಎಂ ಹುದ್ದೆಗೆ ಪನ್ನೀರ್ ಸೆಲ್ವಂ ರಾಜೀನಾಮೆ ನೀಡಿದ ಬಳಿಕ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ, ಮಾಜಿ ಸಾಲಿಸಿಟರ್ ಜನರಲ್ ಮೋಹನ್ ಪರಾಶರನ್ ಹಾಗೂ ಸಾಂವಿಧಾನಿಕ ತಜ್ಞ ಸೊರಾಬ್ಜಿಯವರಿಂದ ಸಲಹೆ ಪಡೆಯುತ್ತಿರುವುದಾಗಿ ತಿಳಿಸಿದ್ದಾರೆ.  ಮೂವರು ತಜ್ಞರ ಪೈಕಿ ಇಬ್ಬರು ಹೊಸ ಸರ್ಕಾರ ರಚನೆಗೆ ಅವಕಾಶ ನೀಡಲು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವ ಮಾರ್ಗವನ್ನು ಸೂಚಿಸಿದ್ದರೆ. 1998 ರಲ್ಲಿ ಉತ್ತರ ಪ್ರದೇಶದಲ್ಲಿ ಸರ್ಕಾರ ರಚನೆಗೆ ಇಬ್ಬರು ಹಕ್ಕು ಮಂಡಿಸಿದ್ದ ವೇಳೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈಗ ಇದೇ ಮಾದರಿಯನ್ನು ತಮಿಳುನಾಡಿನಲ್ಲೂ ಅನುಸರಿಸಬಹುದಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕುಡಿದು ರಸ್ತೆಗೆ ಬಿದ್ದ ವ್ಯಕ್ತಿ ಬಸ್ ಚಕ್ರಕ್ಕೆ ಸಿಲುಕಿ ಸಾವು: ಸಾವಿಗೆ ಹೊಣೆ ಯಾರು? ಬಸ್ ಚಾಲಕನೇ? ಸರ್ಕಾರವೇ? ಬಾರ್ ಮಾಲೀಕರೇ?
ಕೇರಳದಲ್ಲಿ ಉತ್ತರ ಭಾರತದ ಕಾರ್ಮಿಕನ ಮೇಲೆ ಗುಂಪು ಹತ್ಯೆ, 'ಆತನ ದೇಹದ ಮೇಲೆ ಗಾಯವಾಗದ ಪಾರ್ಟ್‌ಗಳೇ ಇಲ್ಲ' ಎಂದ ವೈದ್ಯರು!