ಮದುವೆಯಾದ 3 ತಿಂಗಳ ಬಳಿಕ ಗೊತ್ತಾಯ್ತು ತಾನು ಪ್ರೀತಿಸಿ ಮದುವೆಯಾದ ವ್ಯಕ್ತಿ ತನ್ನ ಅಜ್ಜ ಎಂದು!

Published : Oct 09, 2016, 03:58 AM ISTUpdated : Apr 11, 2018, 12:49 PM IST
ಮದುವೆಯಾದ 3 ತಿಂಗಳ ಬಳಿಕ ಗೊತ್ತಾಯ್ತು ತಾನು ಪ್ರೀತಿಸಿ ಮದುವೆಯಾದ ವ್ಯಕ್ತಿ ತನ್ನ ಅಜ್ಜ ಎಂದು!

ಸಾರಾಂಶ

ಫ್ಲೋರಿಯುವತಿಯೊಬ್ಬಳಿಗೆ ತನ್ನ ಮದುವೆಯ 3 ತಿಂಗಳ ಬಳಿಕ ತಾನು ಪ್ರೀತಿಸಿ, ಮದುವೆಯಾದ ಪತಿ ವಾಸ್ತವವಾಗಿ ತನ್ನ ಅಜ್ಜ ಎಂದು ತಿಳಿದರೆ ಆಕೆಯ ಪರಿಸ್ಥಿತಿ ಹೇಗಿರಬೇಡ? ಈ ಸತ್ಯವನ್ನು ಅರಗಿಸಿಕೊಳ್ಳಲು ಆಕೆಗೆ ಸಾಧ್ಯವಾಗುವುದಿಲ್ಲವೇನೋ. ಸದ್ಯ ಅಮೆರಿಕಾದ 24ರ ಹರೆಯದ ಯುವತಿಗೂ ಇಂತಹುದೇ ಶಾಕ್ ತಗುಲಿದ್ದು, ವಾಸ್ತವತೆಯನ್ನು ಅರಿಯದೆ ತನ್ನದೇ ಅಜ್ಜನೊಂದಿಗೆ ಮದುವೆಯಾಗಿದ್ದಾಳೆ. ಮದುವೆಯಾದ 3 ತಿಂಗಳ ಬಳಿಕ ತನ್ನ ಪತಿಯೇ ತನ್ನ ತಂದೆಯ ಅಪ್ಪ ಎಂಬ ವಿಚಾರ ಗೊತ್ತಾಗಿದೆ. ಮದುವೆಯ ಬಳಿಕ ಒಂದು ದಿನ ತನ್ನ ಪತಿಯ ಹಳೆಯ ಫೋಟೋಗಳನ್ನು ನೋಡುತ್ತಿದ್ದಾಗ ಅವುಗಳಲ್ಲಿ ತನ್ನ ತಂದೆಯ ಫೋಟೋ ಇರುವುದನ್ನು ಯುವತಿ ನೋಡಿದ್ದಾಳೆ. ಈ ಫೋಟೋಗಳಲ್ಲಿ ಪತಿಯ(ಅಜ್ಜನ) ಮೊದಲ ಪತ್ನಿಯ ಮಕ್ಕಳ ಫೋಟೋ ಕೂಡಾ ಇದ್ದು, ಈ ಮಕ್ಕಳಲ್ಲಿ ಯುವತಿಯ ತಂದೆಯೂ ಒಬ್ಬರಾಗಿದ್ದರು.

ವಾಷಿಂಗ್ಟನ್(ಅ.09): ಯುವತಿಯೊಬ್ಬಳಿಗೆ ತನ್ನ ಮದುವೆಯ 3 ತಿಂಗಳ ಬಳಿಕ ತಾನು ಪ್ರೀತಿಸಿ, ಮದುವೆಯಾದ ಪತಿ ವಾಸ್ತವವಾಗಿ ತನ್ನ ಅಜ್ಜ ಎಂದು ತಿಳಿದರೆ ಆಕೆಯ ಪರಿಸ್ಥಿತಿ ಹೇಗಿರಬೇಡ? ಈ ಸತ್ಯವನ್ನು ಅರಗಿಸಿಕೊಳ್ಳಲು ಆಕೆಗೆ ಸಾಧ್ಯವಾಗುವುದಿಲ್ಲವೇನೋ. ಸದ್ಯ ಅಮೆರಿಕಾದ 24ರ ಹರೆಯದ ಯುವತಿಗೂ ಇಂತಹುದೇ ಶಾಕ್ ತಗುಲಿದ್ದು, ವಾಸ್ತವತೆಯನ್ನು ಅರಿಯದೆ ತನ್ನದೇ ಅಜ್ಜನೊಂದಿಗೆ ಮದುವೆಯಾಗಿದ್ದಾಳೆ.

ಫ್ಲೋರಿಡಾದ ಮಿಯಾಮಿಯ ಗೋಲ್ಡನ್ ಬೀಚ್ ಬಳಿಯ 24ರ ಹರೆಯದ ಯುವತಿಯೊಂದಿಗೆ ಇಂತಹ ಅಸಮಂಜಸ ಘಟನೆ ಸಂಭವಿಸಿದ್ದು, ಮದುವೆಯಾದ 3 ತಿಂಗಳ ಬಳಿಕ ತನ್ನ ಪತಿಯೇ ತನ್ನ ತಂದೆಯ ಅಪ್ಪ ಎಂಬ ವಿಚಾರ ಗೊತ್ತಾಗಿದೆ. ಮದುವೆಯ ಬಳಿಕ ಒಂದು ದಿನ ತನ್ನ ಪತಿಯ ಹಳೆಯ ಫೋಟೋಗಳನ್ನು ನೋಡುತ್ತಿದ್ದಾಗ ಅವುಗಳಲ್ಲಿ ತನ್ನ ತಂದೆಯ ಫೋಟೋ ಇರುವುದನ್ನು ಯುವತಿ ನೋಡಿದ್ದಾಳೆ. ಈ ಫೋಟೋಗಳಲ್ಲಿ ಪತಿಯ(ಅಜ್ಜನ) ಮೊದಲ ಪತ್ನಿಯ ಮಕ್ಕಳ ಫೋಟೋ ಕೂಡಾ ಇದ್ದು, ಈ ಮಕ್ಕಳಲ್ಲಿ ಯುವತಿಯ ತಂದೆಯೂ ಒಬ್ಬರಾಗಿದ್ದರು.

ಯುವತಿಯು ತನ್ನ ಪತಿ(ಅಜ್ಜ)ಯನ್ನು ಈ ಕುರಿತಾಗಿ ವಿಚಾರಿಸಿದಾಗ, 'ನನ್ನ ಮೊದಲ ಪತ್ನಿ ನನ್ನನ್ನು ಬಿಟ್ಟು ಯಾವುದೋ ಅಜ್ಞಾತ ಸ್ಥಳಕ್ಕೆ ತೆರಳಿದ್ದಳು. ಇಷ್ಟು ವರ್ಷಗಳಲ್ಲಿ ಅವರನ್ನು ಪತ್ತೆ ಹಚ್ಚಲು ನನ್ನಿಂದ ಸಾಧ್ಯವಾಗಿರಲಿಲ್ಲ. ಇದಕ್ಕಾಗಿ ನಾನು ಹಲವಾರು ಖಾಸಗಿ ಏಜೆಂಟ್'ಗಳ ಮೊರೆ ಹೋಗಿದ್ದೆ ಆದರೂ ಇದ್ಯಾವುದೂ ಉಪಯೋಗಕ್ಕೆ ಬೀಳಲಿಲ್ಲ' ಎಂದು ಉತ್ತರಿಸಿದ್ದಾನೆ.   

ಇದಾದ ಬಳಿಕ ಯುವತಿಯ ಪತಿ(ಅಜ್ಜ) ಮತ್ತೊಂದು ಮದುವೆಯಾಗಿದ್ದು, ಮಕ್ಕಳಾಗಿದ್ದರು ಆದರೆ ಈ ಸಂಬಂಧ ಕೂಡಾ ವಿಚ್ಛೇದನಲ್ಲಿ ಅಂತ್ಯಗೊಂಡಿತ್ತು. ಇದರಿಂದ ಆರ್ಥಿಕ ಸಮಸ್ಯೆಯನ್ನೂ ಎದುರಿಸಿದ್ದರಂತೆ. ಆದರೆ ಎರಡು ವರ್ಷದ ಬಳಿಕ ಮಿಲಿಯನ್ ಡಾಲರ್'ನ ಲಾಟ್ರಿ ಅವರಿಗೆ ಬಂದಿತ್ತಂತೆ.

2015ರಲ್ಲಿ ಇವರು ಮತ್ತೆ ಮದುವೆಯಾಗಲು ಯೋಚಿಸಿದ್ದು, ಇದಕ್ಕಾಗಿ ಉತ್ತಮ ಸಂಗಾತಿಗಾಗಿ ಸ್ಥಳೀಯ ಏಜೆಂನ್ಸಿಯಲ್ಲಿ ಹೆಸರನ್ನು ದಾಖಲಿಸಿದ್ದರು. ಏಜೆನ್ಸಿಯವರು ತೋರಿಸಿದ್ದ ವೆಬ್'ಸೈಟ್'ನಲ್ಲಿ ಬಹಳಷ್ಟು ಆಕರ್ಷಕ ಯುವತಿಯರ ಪ್ರೊಫೈಲ್'ಗಳಿದ್ದು, ಅವುಗಳಲ್ಲಿ ಒಂದು ಈ ಯುವತಿಯದ್ದಾಗಿತ್ತು. 'ಮೊದಲ ಬಾರಿ ಗಮನಿಸಿದಾಗ ಕೆಲವು ಹಳೆಯ ನೆನಪುಗಳು ತನ್ನನ್ನು ಕಾಡಿದ್ದವು, ಆದರೆ ಏನು? ಯಾಕೆ ಎಂದು ನನಗೆ ತಿಳಿಯಲಿಲ್ಲ. ಇನ್ನು ಮೊದಲ ಭೇಟಿಯಲ್ಲೇ ನನಗೆ ಆಕೆ ಇಷ್ಟವಾದಳು' ಎಂದು ಪತಿ(ಅಜ್ಜ) ತಿಳಿಸಿದ್ದಾರೆ.

ವಿಶೇಷವೆಂದರೆ 'ಯುವತಿ ಮದುವೆಗೂ ಮೊದಲೇ ಗರ್ಭವತಿಯಾಗಿದ್ದು, ಅವಳನ್ನು ಆಕೆಯ ತಂದೆ ಮನೆಯಿಂದ ಹೊರಗಟ್ಟಿದ್ದರು. ಹೀಗಾಗಿ ಭೇಟಿಯಾದ ಕೆಲವೇ ದಿನಗಳಲ್ಲಿ ಆಕೆ ನನ್ನೊಡನೆ ಬಂದು ನೆಲೆಸಿದ್ದಳು' ಎಂದೂ 68 ವರ್ಷದ ವ್ಯಕ್ತಿ(ಯುವತಿಯ ಪತಿ/ಅಜ್ಜ) ತಿಳಿಸಿದ್ದಾರೆ.

ವಾಸ್ತವತೆಯನ್ನು ಅರಿತ ಯುವತಿ 'ಈ ವಿಚಾರದಿಂದ ನಾನು ಬಹಳಷ್ಟು ಹತಾಶಳಾಗಿದ್ದೆ, ಆದರೆ ನಮ್ಮಿಬ್ಬರ ನಡುವಿನ ಸಂಬಂಧ ಬಹಳ ಗಟ್ಟಿಯಾಗಿದೆ. ಹೀಗಾಗಿ ಇದು ನಮ್ಮ ನಡುವೆ ಯಾವುದೇ ಒಡಕು ಮೂಡಿಸುವುದಿಲ್ಲ' ಎಂದಿದ್ದಾಳೆ.

ಕೃಪೆ: ND TV

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!