ಕೂಲಿ ಕೆಲಸ ಮಾಡುತ್ತಿದ್ದಾಳೆ ದೇಶ ಕಾಯುತ್ತಿದ್ದ ಯೋಧನ ಹೆಂಡತಿ

By Web DeskFirst Published Oct 9, 2016, 2:53 AM IST
Highlights

ಚಿತ್ರದುರ್ಗದ ಬೊಮ್ಮೇನಹಳ್ಳಿ ಗ್ರಾಮದ ಹುತಾತ್ಮ ಯೋಧ ಪಾಲಯ್ಯನ ಕುಟುಂಬವೇ ಈ ಪಾಡನ್ನು ಅನುಭವಿಸುತ್ತಿದೆ. ಬಡತನವನ್ನು ನೀಗಿಸುವ ಸಲುವಾಗಿ ಪಾಲಯ್ಯ ದೇಶ ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದ. ಅದರಂತೆ ರಾಂಪುರದಲ್ಲಿ ಬಿಎಸ್ ಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಆದರೆ ಕಳೆದ 3 ವರ್ಷಗಳ ಹಿಂದೆ ಪಾಲಯ್ಯ ಸಾವನ್ನಪ್ಪಿದ್ದ. ತಮ್ಮ ಮಗ ಹೇಗೆ ಹುತಾತ್ಮರಾದರು ಎಂಬುದು ಕೂಡ ಈ ಕೂಡಕ್ಕೆ ಗೊತ್ತಿಲ್ಲ. ಇನ್ನೂ ಯೋಧನ ಅಂತ್ಯಸಂಸ್ಕಾರದ ವೇಳೆ ಸರ್ಕಾರ ಜಮೀನು ಮನೆ ಕೆಲಸ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಯೋಧ ಮೃತ ಪಟ್ಟು 3 ವರ್ಷಗಳಾದರೂ ಸರ್ಕಾರದ ಭರವಸೆ ಮಾತ್ರ ಇನ್ನೂ ಹಾಗೆ ಇದೆ. ಪತ್ನಿ ಮಂಜುಮ್ಮ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡಿ ಬಂದ ಹಣದಲ್ಲಿ ಇಡೀ ಕುಟುಂಬವನ್ನು ಸಾಕಿ ಸಲಹುತ್ತಿದ್ದಾಳೆ. ಇತ್ತ ಪಾಲಯ್ಯ ನ ಒಬ್ಬ ಮಗ ಹುಟ್ಟುತ್ತಲೆ ವಿಕಲಚೇತನನಾಗಿದ್ದಾನೆ .ಇವನ ವೈದ್ಯಕೀಯ ಚಿಕಿತ್ಸೆಗೆ  ಲಕ್ಷಾಂತರ ಹಣ ಬೇಕು. ಆದರೆ ಈ ಬಡಕುಟುಂಬದಿಂದ ಅದು ಸಾಧ್ಯವಿಲ್ಲ.

ಚಿತ್ರದುರ್ಗ(ಅ.09): ದೇಶ ಕಾಯುತ್ತಿದ್ದ ಯೋಧನ ಹೆಂಡತಿ ಇಂದು ಕೂಲಿ ಕೆಲಸ ಮಾಡುತ್ತಿದ್ದಾಳೆ. ದಿವ್ಯಾಂಗ  ಮಗು ಒಂದು ಕಡೆಯಾದರೆ ಇನ್ನೊಂದು ಕಡೆ ಬಡತನ ಕಾಡುತ್ತಿದೆ. ಜಿಲ್ಲಾಡಳಿತ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ. ಇಂದೊಂದು ಚಿತ್ರದುರ್ಗದ ಯೋಧನ ಕುಟುಂಬದ ಕರುಣಾಜನಕ ಕಥೆ

ಚಿತ್ರದುರ್ಗದ ಬೊಮ್ಮೇನಹಳ್ಳಿ ಗ್ರಾಮದ ಹುತಾತ್ಮ ಯೋಧ ಪಾಲಯ್ಯನ ಕುಟುಂಬವೇ ಈ ಪಾಡನ್ನು ಅನುಭವಿಸುತ್ತಿದೆ. ಬಡತನವನ್ನು ನೀಗಿಸುವ ಸಲುವಾಗಿ ಪಾಲಯ್ಯ ದೇಶ ಸೇವೆಯನ್ನು ಆಯ್ಕೆ ಮಾಡಿಕೊಂಡಿದ್ದ. ಅದರಂತೆ ರಾಂಪುರದಲ್ಲಿ ಬಿಎಸ್ ಎಫ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಆದರೆ ಕಳೆದ 3 ವರ್ಷಗಳ ಹಿಂದೆ ಪಾಲಯ್ಯ ಸಾವನ್ನಪ್ಪಿದ್ದ. ತಮ್ಮ ಮಗ ಹೇಗೆ ಹುತಾತ್ಮರಾದರು ಎಂಬುದು ಕೂಡ ಈ ಕೂಡಕ್ಕೆ ಗೊತ್ತಿಲ್ಲ. ಇನ್ನೂ ಯೋಧನ ಅಂತ್ಯಸಂಸ್ಕಾರದ ವೇಳೆ ಸರ್ಕಾರ ಜಮೀನು ಮನೆ ಕೆಲಸ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ ಯೋಧ ಮೃತ ಪಟ್ಟು 3 ವರ್ಷಗಳಾದರೂ ಸರ್ಕಾರದ ಭರವಸೆ ಮಾತ್ರ ಇನ್ನೂ ಹಾಗೆ ಇದೆ.

ಪತ್ನಿ ಮಂಜುಮ್ಮ ಬೇರೆಯವರ ಜಮೀನಿನಲ್ಲಿ ಕೂಲಿ ಮಾಡಿ ಬಂದ ಹಣದಲ್ಲಿ ಇಡೀ ಕುಟುಂಬವನ್ನು ಸಾಕಿ ಸಲಹುತ್ತಿದ್ದಾಳೆ. ಇತ್ತ ಪಾಲಯ್ಯ ನ ಒಬ್ಬ ಮಗ ಹುಟ್ಟುತ್ತಲೆ ವಿಕಲಚೇತನನಾಗಿದ್ದಾನೆ .ಇವನ ವೈದ್ಯಕೀಯ ಚಿಕಿತ್ಸೆಗೆ ಲಕ್ಷಾಂತರ ಹಣ ಬೇಕು. ಆದರೆ ಈ ಬಡಕುಟುಂಬದಿಂದ ಅದು ಸಾಧ್ಯವಿಲ್ಲ. ಇನ್ನು ತನ್ನ ಮಗನ ಅಕಾಲಿಕ ಮರಣದಿಂದಾಗಿ ಬೇಸತ್ತಿದ್ದ ತಂದೆ,  ಮಗನ ನೆನೆಪಿನಲ್ಲೆ ಮನೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು ಎಂದು ಪಾಲಯ್ಯನ ಮಾವ ನೋವು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ  ದೇಶ ಕಾಯುವ ಯೋಧನ ಕುಟುಂಬವೊಂದು ಇಂದು ಬೀದಿಗೆ ಬಿದ್ದಿದೆ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ ಇವರ ಸಹಾಯಕ್ಕೆ ಧಾವಿಸಬೇಕಿದೆ.

click me!