ಅಂಬಿ ಅಂತ್ಯಸಂಸ್ಕಾರ ಕಂಠೀರವದಲ್ಲಿ ಬೇಡ್ವಂತೆ: ಕೇಳಿ ಈ ವಕೀಲಪ್ಪನ ಅಂತೆ ಕಂತೆ!

Published : Nov 25, 2018, 02:38 PM ISTUpdated : Nov 25, 2018, 02:57 PM IST
ಅಂಬಿ ಅಂತ್ಯಸಂಸ್ಕಾರ ಕಂಠೀರವದಲ್ಲಿ ಬೇಡ್ವಂತೆ: ಕೇಳಿ ಈ ವಕೀಲಪ್ಪನ ಅಂತೆ ಕಂತೆ!

ಸಾರಾಂಶ

ಈಗ ಬೇಕಿತ್ತಾ ಅಂಬಿ ಅಂತ್ಯಸಂಸ್ಕಾರ ವಿವಾದ?! ಅಂಬಿ ಅಂತ್ಯಸಂಸ್ಕಾರ ಕಂಠೀರವ ಸ್ಟುಡಿಯೋದಲ್ಲಿ ಮಾಡಲು ಅಪಸ್ವರ! ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ನಡೆಸಲು ವಕೀಲ ಆರ್‌ಎಲ್‌ಎನ್ ಮೂರ್ತಿ ಅಪಸ್ವರ! ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ನ್ಯಾಯಮೂರ್ತಿಗೆ ಪತ್ರ

ಬೆಂಗಳೂರು(ನ.25): ರೆಬಲ್ ಸ್ಟಾರ್, ಕಲಿಯುಗದ ಕರ್ಣ, ಮಂಡ್ಯದ ಗಂಡು ಅಂಬರೀಷ್ ಅಗಲಿಕೆಯ ನೋವಲ್ಲಿ ಇಡೀ ಕರ್ನಾಟಕ ಕಣ್ಣೀರಿಡುತ್ತಿದೆ. ಆದರೆ ಅಂಬರೀಷ್ ಅಂತ್ಯಸಂಸ್ಕಾರಕ್ಕೆ ಸಂಬಂಧಿಸಿದಂತೆ ಹೊಸದೊಂದು ವಿವಾದ ಸೃಷ್ಟಿಯಾಗಿರುವುದು ನಿಜಕ್ಕೂ ದುರದೃಷ್ಟಕರ.

"

ಹೌದು, ಕಂಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡಬಾರದು ಎಂದು ಆರ್‌ಎಲ್‌ಎನ್ ಮೂರ್ತಿ ಎಂಬ ವಕೀಲರು ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ.

"

ಕಠೀರವ ಸ್ಟುಡಿಯೋ ಇರುವುದು ಕನ್ನಡ ಚಿತ್ರರಂಗದ ಅಭಿವೃದ್ಧಿಗಾಗಿಯೇ ಹೊರತು ನಟ, ನಟಿಯರ ಅಂತ್ಯಸಂಸ್ಕಾರಕ್ಕೆ ಅಲ್ಲ ಎಂಬುದು ಆರ್‌ಎಲ್‌ಎನ್ ಮೂರ್ತಿ ಅವರ ವಾದವಾಗಿದೆ.

ಈ ಕುರಿತು ಸುವರ್ಣನ್ಯೂಸ್ ಜೊತೆ ಮಾತನಾಡಿರುವ ಆರ್‌ಎಲ್‌ಎನ್ ಮೂರ್ತಿ, ಯಾವುದೇ ಕಾರಣಕ್ಕೂ ಕಠೀರವ ಸ್ಟುಡಿಯೋದಲ್ಲಿ ಅಂಬರೀಷ್ ಅಂತ್ಯಸಂಸ್ಕಾರಕ್ಕೆ ಅವಕಾಶ ಮಾಡಕೊಡಬಾರದು ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ