ತ್ರಿವಳಿ ತಲಾಖ್ ನೀಡದಂತೆ ಕ್ವಾಜಿಗಳಿಂದ ವರನಿಗೆ ಸಲಹೆ

By Suvarna Web DeskFirst Published May 22, 2017, 5:42 PM IST
Highlights

ವಿವಾದಾತ್ಮಕ ತ್ರಿವಳಿ ತಲಾಖ್ ಬಿಕ್ಕಟ್ಟು ಇನ್ನೂ ಮುಂದುವರೆದಿದ್ದು, ತ್ರಿವಳಿ ತಲಾಖ್ ನೀಡಬಾರದೆಂದು ವರನಿಗೆ ಕ್ವಾಜಿಗಳು ಸಲಹೆ ನೀಡಲಿದ್ದಾರೆ ಎಂದು ಮುಸ್ಲೀಂ ವೈಯಕ್ತಿಕ ಮಂಡಳಿ ಸುಪ್ರೀಂಕೋರ್ಟ್ನಲ್ಲಿಂದು ಹೇಳಿದೆ.

ನವದೆಹಲಿ (ಮೇ.22): ವಿವಾದಾತ್ಮಕ ತ್ರಿವಳಿ ತಲಾಖ್ ಬಿಕ್ಕಟ್ಟು ಇನ್ನೂ ಮುಂದುವರೆದಿದ್ದು, ತ್ರಿವಳಿ ತಲಾಖ್ ನೀಡಬಾರದೆಂದು ವರನಿಗೆ ಕ್ವಾಜಿಗಳು ಸಲಹೆ ನೀಡಲಿದ್ದಾರೆ ಎಂದು ಮುಸ್ಲೀಂ ವೈಯಕ್ತಿಕ ಮಂಡಳಿ ಸುಪ್ರೀಂಕೋರ್ಟ್ನಲ್ಲಿಂದು ಹೇಳಿದೆ.

ಮದುವೆ ಮಾತುಕತೆ ಸಂದರ್ಭದಲ್ಲಿ ಕ್ವಾಜಿಗಳು ವರನಿಗೆ ಒಂದೇ ಸಲ 3 ಬಾರಿ ತಲಾಖ್ ಹೇಳಬಾರದೆಂದು ಸಲಹೆ ನೀಡಲಿದ್ದಾರೆ.  ಇದು ಶರಿಯತ್ ಕಾನೂನಿನ ಪ್ರಕಾರ ಅನಪೇಕ್ಷಿತ ವಿಚ್ಚೇದನ ಪದ್ಧತಿ ಎಂದು ಮುಸ್ಲೀಂ ವೈಯಕ್ತಿಕ ಮಂಡಳಿ ಸುಪ್ರೀಂಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿದೆ.

ತ್ರಿವಳಿ ತಲಾಖ್ ಗೆ ಸಾಂವಿಧಾನಿಕ ಮಹತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮೇ.18 ತೀರ್ಪನ್ನು ಕಾಯ್ದಿರಿಸಿತ್ತು.  

click me!