ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭದ್ರತೆ ಪರಿಶೀಲನೆ

By Suvarna Web DeskFirst Published Dec 22, 2017, 7:56 AM IST
Highlights

 ಹೊಸ ವರ್ಷ ಆಚರಣೆ ಹಿನ್ನಲೆಯಲ್ಲಿ ಪೂರ್ವ ಸಿದ್ಧತೆಯ ಭದ್ರತೆ ವೀಕ್ಷಿಸಲು  ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ,  ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆಗೆ ರಾತ್ರೋ ರಾತ್ರಿ  ಭೇಟಿ ನೀಡಿದರು.

ಬೆಂಗಳೂರು (ಡಿ.22):  ಹೊಸ ವರ್ಷ ಆಚರಣೆ ಹಿನ್ನಲೆಯಲ್ಲಿ ಪೂರ್ವ ಸಿದ್ಧತೆಯ ಭದ್ರತೆ ವೀಕ್ಷಿಸಲು  ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ,  ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆಗೆ ರಾತ್ರೋ ರಾತ್ರಿ  ಭೇಟಿ ನೀಡಿದರು.

ಕಳೆದ ವರ್ಷ ಯುವತಿಯರ ಮೇಲೆ ನಡೆದಂತಹ ಲೈಂಗಿಕ ದೌರ್ಜನ್ಯದಂತ ಘಟನೆಯನ್ನು ತಡೆಗಟ್ಟಲು ಮುಂಜಾಗ್ರತೆ ಕ್ರಮವಾಗಿ ಬಂದೋಬಸ್ತ್ ಮಾಡಲು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಎಲ್ಲೆಲ್ಲಿ ಸಿಸಿಟಿವಿ, ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು ಅನ್ನೋದರ ಬಗ್ಗೆ ಪರಿಶೀಲನೆ ನಡೆಸಿದರು.

Latest Videos

ಎಷ್ಟು ಪೊಲೀಸ್​​  ಸಿಬ್ಬಂದಿಗಳು ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ಭದ್ರತೆ ನಿಯೋಜನೆಗೆ ಸೂಕ್ತ.  ನಗರದಲ್ಲಿ ಹೊಸ ವರ್ಷ ಆಚರಣೆ ಮಾಡಲು ಹೆಚ್ಚಿನ ಜನರು  ಎಮ್.ಜಿ ರಸ್ತೆ, ಬ್ರಿಗೇಡ್ ರಸ್ತೆಗೆ ಆಗಮಿಸುತ್ತಾರೆ. ಕಳೆದ ಬಾರಿ ಸಾಮೂಹಿಕವಾಗಿ ಮಹಿಳೆಯರು,ಯುವತಿಯರು ಮೇಲೆ ಲೈಂಗಿಕ ದೌರ್ಜನ್ಯ ನಡೆದು ಬೆಂಗಳೂರು ಇಡೀ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಬಾರಿ ಹೆಚ್ಚಿನ ಭದ್ರತೆ ಒದಗಿಸುವಂತೆ ಸ್ವಂತವಾಗಿ ಹೈ ಕೋರ್ಟ್ ನಗರ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದೆ.

ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ನೇರವಾಗಿ ನಗರ ಪೊಲೀಸ್ ಆಯುಕ್ತರನ್ನು ಹೊಣೆಮಾಡಲಾಗುವುದು ಎಂದು ಎಚ್ಚರಿಕೆ ಕೊಟ್ಟಿತ್ತು. ಈ ಹಿನ್ನಲೆಯಲ್ಲಿ ಈ ಬಾರಿ ಓರ್ವ ADGP ನೇತೃತ್ವದಲ್ಲಿ ಒಟ್ಟು ಎಂಟು ಸಾವಿರ ಪೋಲೀಸರನ್ನು ನಿಯೋಜನೆಗೆ ಬಳಸಿಕೊಳ್ಳಲಾಗುವುದು ಎಂದು ಕೋರ್ಟ್ ಗೆ ಈಗಾಗಲೆ ಪ್ರಮಾಣ ಪತ್ರವನ್ನ ನಗರ ಪೊಲೀಸ್​​ ಆಯುಕ್ತರು ಸಲ್ಲಿಸಿದ್ದಾರೆ.

ಭದ್ರತೆಯಲ್ಲಿರುವ ಎಲ್ಲಾ ಪೊಲೀಸರಿಗೆ ಇದೆ ಮೊದಲ ಬಾರಿಗೆ ರಿಫ್ಲೆಕ್ಟ್ ಜಾಕೆಟ್ಸ್ ಒದಗಿಸಲಾಗಿದೆ. ಇನ್ನು ಎಂಜಿ ರೋಡ್​​ ಮತ್ತು ಬ್ರಿಗೇಡ್​​ ರಸ್ತೆಯಲ್ಲಿ  750 ಕ್ಕೂ ಹೆಚ್ಚು  ಹೈ ಡೆಫನೇಷನ್  cctv ಕ್ಯಾಮರಾ ಸೇರಿದಂತೆ ಅನಿಲ್ ಕುಂಬ್ಳೆ ವೃತ್ತ ಮತ್ತು ಕಾಮರಾಜ ರಸ್ತೆಯಲ್ಲಿ ಬ್ಯಾರಿಕೇಡ್'ಗಳ ನ್ನು ಅಳವಡಿಕೆ ಮಾಡಲಾಗುತ್ತದೆ.

click me!