ಭಾರತದ ಪೌರತ್ವ ಪಡೆದ 117 ಪಾಕ್ ಹಿಂದುಗಳು

First Published Jun 18, 2018, 1:50 PM IST
Highlights
  • 117 ಹಿಂದುಗಳಿಗೆ ಭಾರತೀಯ ಪೌರತ್ವ ನೀಡಿದ ಜೋದ್'ಪುರ ಜಿಲ್ಲಾಡಳಿತ
  • 20 ವರ್ಷಗಳಿಂದ ವಿಶೇಷ ಶಿಬಿರಗಳಲ್ಲಿ ನೆಲಸಿದ್ದ ನಿರಾಶ್ರಿತರು

ಜೋದ್'ಪುರ[ಜೂ.18]: ಪಾಕಿಸ್ತಾನದಿಂದ ವಲಸೆ ಬಂದು ರಾಜಸ್ಥಾನದ ಜೋದ್'ಪುರದಲ್ಲಿ ವಾಸಿಸುತ್ತಿರುವ  117 ಹಿಂದೂ ಸಮುದಾಯದವರಿಗೆ ಭಾರತೀಯ ಪೌರತ್ವ
ನೀಡಲಾಗಿದೆ.

ಪಾಕಿಸ್ತಾನದ ಪಾಸ್'ಪೋರ್ಟ್'ಅನ್ನು ಭಾರತೀಯ ಅಧಿಕಾರಿಗಳಿಗೆ ಮರಳಿಸಿದ ಅವರಿಗೆ ಭಾನುವಾರ ಪೌರತ್ವದ ಪ್ರಮಾಣಪತ್ರವನ್ನು ನೀಡಲಾಯಿತು. ಹಲವು ವರ್ಷಗಳ ಹಿಂದೆಯೇ ಜೋದ್'ಪುರಕ್ಕೆ ಬಂದಿದ್ದ ಅವರು ವಿಶೇಷ ಶಿಬಿರದಲ್ಲಿ ನೆಲಸಿದ್ದರು. 

ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳ ಹಾಗೂ ದೌರ್ಜನ್ಯಕ್ಕೆ ಒಳಗಾಗಿ ನೆಮ್ಮದಿಯ ನೆಲೆ ಕಂಡುಕೊಳ್ಳಲು ಜೋದ್'ಪುರದ  ವಿಶೇಷ ಶಿಬಿರಗಳಲ್ಲಿ ನೆಲಸಿದ್ದರು. 20 ವರ್ಷಗಳ
ಬಹುದಿನ ಕನಸು ಇಂದು ನನಸಾಗಿದೆ.  

ಸ್ಥಳೀಯ ಜಿಲ್ಲಾಡಳಿತ  ಪೌರತ್ವದ ಪ್ರಮಾಣಪತ್ರಗಳನ್ನು ವಿತರಿಸಿತು.ದೇಶದ ವಿವಿಧ ಭಾಗಗಳಲ್ಲಿ ಪಾಕಿಸ್ತಾನದ 2300 ಮಂದಿ ಹಿಂದುಗಳು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು. ಈ ಅರ್ಜಿಗಳು ವಿದೇಶಾಂಗ ಇಲಾಖೆಯಲ್ಲಿ ಬಾಕಿಯುಳಿದಿವೆ.

click me!