ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ: ಆರ್'ಬಿಐ

Published : Oct 22, 2017, 04:18 PM ISTUpdated : Apr 11, 2018, 01:03 PM IST
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಡ್ಡಾಯ: ಆರ್'ಬಿಐ

ಸಾರಾಂಶ

ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಡಿ.೩೧ರೊಳಗೆ ಜೋಡಣೆ ಮಾಡುವುದು ಕಡ್ಡಾಯವಲ್ಲ ಎಂದು ಆರ್‌'ಬಿಐ ಹೇಳಿದೆ ಎಂಬ ವರದಿಗಳನ್ನು ಸ್ವತಃ ಆರ್‌ಬಿಐ ನಿರಾಕರಿಸಿದೆ. ಅಕ್ರಮ ಹಣ ವರ್ಗಾವಣೆ ನಿಯಮಗಳಡಿ ಬ್ಯಾಂಕ್ ಖಾತೆ ಜತೆ ಆಧಾರ್ ಜೋಡಣೆ ಕಡ್ಡಾಯ ಎಂದು ಹೇಳಿದೆ.

ನವದೆಹಲಿ/ಮುಂಬೈ(ಅ.22): ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯನ್ನು ಡಿ.೩೧ರೊಳಗೆ ಜೋಡಣೆ ಮಾಡುವುದು ಕಡ್ಡಾಯವಲ್ಲ ಎಂದು ಆರ್‌'ಬಿಐ ಹೇಳಿದೆ ಎಂಬ ವರದಿಗಳನ್ನು ಸ್ವತಃ ಆರ್‌ಬಿಐ ನಿರಾಕರಿಸಿದೆ. ಅಕ್ರಮ ಹಣ ವರ್ಗಾವಣೆ ನಿಯಮಗಳಡಿ ಬ್ಯಾಂಕ್ ಖಾತೆ ಜತೆ ಆಧಾರ್ ಜೋಡಣೆ ಕಡ್ಡಾಯ ಎಂದು ಹೇಳಿದೆ.

 ಬ್ಯಾಂಕ್ ಖಾತೆ ಜತೆ ಆಧಾರ್ ಜೋಡಿಸುವ ಕುರಿತಂತೆ ಬ್ಯಾಂಕುಗಳಿಗೆ ತಾನು ಯಾವುದೇ ಸೂಚನೆ ನೀಡಿಲ್ಲ ಎಂದು ಆರ್‌ಟಿಐನಡಿ ಕೇಳಲಾದ ಪ್ರಶ್ನೆಗೆ ಆರ್‌ಬಿಐ ನೀಡಿದ್ದ ಉತ್ತರ ಭಾರಿ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ಶನಿವಾರ ಆರ್ ಬಿಐ ಸ್ಪಷ್ಟನೆ ನೀಡಿದೆ. ಆದಾಗ್ಯೂ ಒಂದು ಹಣಕಾಸು ವರ್ಷದಲ್ಲಿ 1 ಲಕ್ಷ ರು.ಗಿಂತ ಹೆಚ್ಚು ಹಣವನ್ನು ಖಾತೆಗೆ ಜಮೆ ಮಾಡದ, ತಿಂಗಳಿಗೆ 10 ಸಾವಿರ ರು.ಗಿಂತ ಹೆಚ್ಚು ಹಣ ಜಮೆ ಮಾಡದ ಹಾಗೂ ಹಿಂಪಡೆಯದ ಖಾತೆಗಳಿಗೆ ವಿನಾಯಿತಿ ಇದೆ ಎಂದು ವರದಿಗಳು ತಿಳಿಸಿವೆ.

ಈ ನಡುವೆ ಆಧಾರ್ ವಿಷಯ ಕೋರ್ಟ್‌ನಲ್ಲಿರುವುದರಿಂದ ತಕ್ಷಣಕ್ಕೆ ಈ ವಿಷಯದಲ್ಲಿ ಮುಂದುವರೆಯದಂತೆ ಬ್ಯಾಂಕಿಂಗ್ ನೌಕರರ ಸಂಘಟನೆ ಮನವಿ ಮಾಡಿದೆ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಸುಗಳಿಗೆ ಅಲಂಕಾರ ಮಾಡಿ ಕಿಚ್ಚು ಹಾಯಿಸಿದ ರೈತರು; ನಾಡಿನಾದ್ಯಂತ ಮಕರ ಸಂಕ್ರಾಂತಿಯ ಸಂಭ್ರಮ
ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಪ್ರಕರಣ: ರಾಜೀವ್‌ಗೌಡ ವಿರುದ್ಧ 2 ಕೇಸ್‌, ಬೆನ್ನಲ್ಲೇ ನಾಪತ್ತೆ; 3 ತಂಡ ರಚಿಸಿ ಪೊಲೀಸರ ಶೋಧ ಕಾರ್ಯ!