ದಲೈಲಾಮಾ ಭೇಟಿ ಮಾಡುವುದು ಅಪರಾಧ: ಚೀನಾ ಎಚ್ಚರಿಕೆ

By suvarna Web DeskFirst Published Oct 22, 2017, 4:10 PM IST
Highlights

ಬೌದ್ಧರ ಪರಮೋಚ್ಛ ಧರ್ಮಗುರು ದಲೈಲಾಮಾ ಅವರನ್ನು ಭೇಟಿ ಮಾಡುವುದು ಅಪರಾಧ ಎಂದು ಚೀನಾ ಎಚ್ಚರಿಕೆ ನೀಡಿದೆ. ಟಿಬೆಟ್ ಅನ್ನು ನಮ್ಮಿಂದ ವಿಭಜಿಸಲು ದಲೈಲಾಮಾ ಯತ್ನಿಸುತ್ತಿರುವ ಕಾರಣ ನಾವು ಅವರನ್ನು ಪ್ರತ್ಯೇಕತಾವಾದಿ ಎಂದು ಪರಿಗಣಿಸಿದ್ದೇವೆ. ಹೀಗಾಗಿ ಯಾವುದೇ ವ್ಯಕ್ತಿ ಅಥವಾ ದೇಶ ದಲೈಲಾಮಾ ಅವರನ್ನು ಭೇಟಿ ಮಾಡುವುದು ಅಪರಾಧ ಎಂದೆನ್ನಿಸಿಕೊಳ್ಳಲಿದೆ ಎಂದು ಚೀನಾ ಹೇಳಿದೆ.

ಬೀಜಿಂಗ್(ಅ.22): ಬೌದ್ಧರ ಪರಮೋಚ್ಛ ಧರ್ಮಗುರು ದಲೈಲಾಮಾ ಅವರನ್ನು ಭೇಟಿ ಮಾಡುವುದು ಅಪರಾಧ ಎಂದು ಚೀನಾ ಎಚ್ಚರಿಕೆ ನೀಡಿದೆ. ಟಿಬೆಟ್ ಅನ್ನು ನಮ್ಮಿಂದ ವಿಭಜಿಸಲು ದಲೈಲಾಮಾ ಯತ್ನಿಸುತ್ತಿರುವ ಕಾರಣ ನಾವು ಅವರನ್ನು ಪ್ರತ್ಯೇಕತಾವಾದಿ ಎಂದು ಪರಿಗಣಿಸಿದ್ದೇವೆ. ಹೀಗಾಗಿ ಯಾವುದೇ ವ್ಯಕ್ತಿ ಅಥವಾ ದೇಶ ದಲೈಲಾಮಾ ಅವರನ್ನು ಭೇಟಿ ಮಾಡುವುದು ಅಪರಾಧ ಎಂದೆನ್ನಿಸಿಕೊಳ್ಳಲಿದೆ ಎಂದು ಚೀನಾ ಹೇಳಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಚೀನಾದ ಕಮ್ಯುನಿಸ್ಟ್ ಪಕ್ಷದ ಅಂಗವಾದ ಯುನೈಟೆಡ್ ಫ್ರಂಟ್ ವರ್ಕ್ ಡಿಪಾರ್ಟ್‌'ಮೆಂಟ್‌'ನ ಕಾರ್ಯನಿರ್ವಾಹಕ ಉಪ ಸಚಿವ ಜಾಂಗ್ ಯಿಜಿಯೋಂಗ್, ಎಲ್ಲಾ ದೇಶಗಳು ಟಿಬೆಟ್ ಅನ್ನು ಚೀನಾದ ಅವಿಭಾಜ್ಯ ಅಂಗ ಎಂದು ಪರಿಗಣಿಸುವುದು ಕಡ್ಡಾಯ. ದಲೈಲಾಮಾ ಧರ್ಮದ ಮುಖವಾಡ ಧರಿಸಿರುವ ಓರ್ವ ರಾಜಕೀಯ ವ್ಯಕ್ತಿ. ಇಂಥ ವ್ಯಕ್ತಿಯನ್ನು ಯಾವುದೇ ದೇಶ ಅಥವಾ ವ್ಯಕ್ತಿ ಅವರೊಬ್ಬ ಧಾರ್ಮಿಕ ನಾಯಕ ಎಂಬ ಹೆಸರಲ್ಲಿ ಕೂಡಾ ಭೇಟಿ ಮಾಡುವುದು, ಚೀನಿಯರ ಭಾವನೆಗಳಿಗೆ ಧಕ್ಕೆ ಮಾಡುತ್ತದೆ. ಹೀಗಾಗಿ ಅದು ಅಪರಾಧ ಎನ್ನಿಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ. ಟಿಬೆಟಿಯನ್ ಬೌದ್ಧ ಧರ್ಮ ಹುಟ್ಟಿದ್ದು ಚೀನಾದಲ್ಲಿ. ನಂತರ ಅದು ಬೇರೆ ಬೇರೆ ಧರ್ಮಗಳಿಂದ ಪ್ರಭಾವಿತವಾಗಿದೆ ಎಂದು ಹೇಳಿದ್ದಾರೆ.

click me!