
ಬೆಂಗಳೂರು, [ನ.13]: ಗಂಡ-ಹೆಂಡತಿ ಚಿತ್ರದ ಜಗಳ ಒಂದು ಹಂತಕ್ಕೆ ಬಂದು ನಿಂತಿದೆ.
ಗಂಡ ಹೆಂಡತಿ ಸಿನಿಮಾದ ಚಿತ್ರೀಕರಣದ ವೇಳೆ ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡ್ರು, ಒತ್ತಾಯ ಮಾಡಿ ಕಿಸ್ಸಿಂಗ್ ಸೀನ್ ಮಾಡಿಸಿದ್ದರು ಎಂದು ಮಿಟೂ ಅಭಿಯಾನದಲ್ಲಿ ನಿರ್ದೇಶಕ ರವಿ ಶ್ರೀವತ್ಸಾ ಮೇಲೆ ಸಂಜನಾ ಗಲ್ರಾನಿ ಆರೋಪ ಮಾಡಿದ್ದರು.
ಸಂಜನಾ ಕ್ಷಮೆ ಕೇಳಲು ಸೂಚಿಸಿದ ನಿರ್ದೇಶಕರ ಸಂಘ
ಈ ಆರೋಪ ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿಯನ್ನು ಎಬ್ಬಿಸಿತ್ತು. ಆದ್ರೆ ಇದೀಗ ಈ ಆರೋಪ ಕೊಂಚ ಮಟ್ಟಿಗೆ ತಣ್ಣಗಾಗಿದೆ. ಯಾಕಂದ್ರೆ ಸ್ವತಃ ಸಂಜನಾ ಅವರೇ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.
ಹಿರಿಯ ನಟ ರೆಬಲ್ ಸ್ಟಾರ್ ಅಂಬರೀಶ್ ಮಧ್ಯಸ್ತಿಕೆಯಲ್ಲಿ ಇಂದು [ಮಂಗಳವಾರ] ಕನ್ನಡ ನಿರ್ದೇಶಕ ಸಂಘಕ್ಕೆ ಸಂಜನಾ ಕ್ಷಮೆ ಕೋರಿದ್ದಾರೆ. ನಾನು ಯಾರ ಮನಸ್ಸು ನೋಯಿಸುವ ಸಲುವಾಗಿ ಅರೋಪ ಮಾಡಿಲ್ಲ, ಸಿನಿಮಾದ ಚಿತ್ರೀಕರಣದ ವೇಳೆ ತಮಗಾದ ನೋವನ್ನ ಹೇಳಿಕೊಂಡಿದ್ದೇನೆ ಅಷ್ಟೇ ಎಂದಿದ್ದಾರೆ.
12 ವರ್ಷಗಳ ನಂತರ ಶುರುವಾಯ್ತು ಗಂಡ-ಹೆಂಡತಿ ಜಗಳ
ನವೆಂಬರ್ 8ರ ಒಳಗೆ ಬಂದು ನಿರ್ದೇಶಕರ ಸಂಘದಲ್ಲಿ, ಚಿತ್ರದ ನಿರ್ದೇಶಕ ರವಿ ಶ್ರೀ ವತ್ಸಾ ಅವ್ರ ಬಳಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಚಲನಚಿತ್ರ ನಿರ್ದೇಶಕರ ಸಂಘ ಗಡುವು ನೀಡಿತ್ತು.
ಅದರಂತೆ ಇಂದು ಕಲಾವಿದರ ಸಂಘದ ಅಧ್ಯಕ್ಷ ರೆಬೆಲ್ ಸ್ಟಾರ್ ಅಂಬರೀಶ್ ಸಮ್ಮುಖದಲ್ಲಿ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಟಿ ಸಂಜನಾ ಗಲ್ರಾನಿ ಕ್ಷಮೆ ಕೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.