ಚುನಾವಣೆಯಲ್ಲಿ ಗೆದ್ದ ಮೇಲೆ ಸಂಪರ್ಕಕ್ಕೆ ಸಿಗುತ್ತಿಲ್ಲ ಈ ನಟಿ!

By Web Desk  |  First Published Jun 11, 2019, 11:35 AM IST

ವೈಎಸ್ ಆರ್ ಕಾಂಗ್ರೆಸ್ ಫೈರ್ ಬ್ರಾಂಡ್ ರೋಜಾ | ಕ್ಯಾಬಿನೆಟ್ ನಲ್ಲಿ ಮಂತ್ರಿ ಸ್ಥಾನ ತಪ್ಪಿದ್ದಕ್ಕೆ ಬೇಸರ | ಜಗನ್ ಮೇಲೆ ಮುನಿಸಿಕೊಂಡ್ರಾ ರೋಜಾ? 


ಬೆಂಗಳೂರು (ಜೂ. 11): ವೈಎಸ್ ಆರ್ ಕಾಂಗ್ರೆಸ್ ಫೈರ್ ಬ್ರಾಂಡ್ ಎಂದೇ ಖ್ಯಾತರಾದ ರೋಜಾ ವೈ ಎಸ್ ಆರ್ ಪಕ್ಷದಿಂದ ಸ್ಪರ್ಧೆ ಮಾಡಿ ರೋಚಕ ಗೆಲುವು ಸಾಧಿಸಿದ್ದಾರೆ.  

ರೋಜಾ ಜಗನ್ ಮೋಹನ್ ರೆಡ್ಡಿ ಕ್ಯಾಬಿನೆಟ್ ನಲ್ಲಿ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರು. ಆದರೆ ಅದು ಕೈ ತಪ್ಪಿರುವ ಹಿನ್ನಲೆಯಲ್ಲಿ ಮುನಿಸಿಕೊಂಡು ಫೋನ್ ಸ್ವಿಚ್ ಆಫ್ ಮಾಡಿದ್ದಾರೆ ರೋಜಾ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.  ಆದರೆ ಪಕ್ಷದ ನಾಯಕರ ಪ್ರಕಾರ ಜಗನ್ ಕ್ಯಾಬಿನೆಟ್ ವಿಸ್ತರಣೆ ಮಾಡಿದಾಗ ರೋಜಾಗೆ ಮಂತ್ರಿ ಪದವಿ ನೀಡಲಾಗುತ್ತದೆ ಎಂದಿದ್ದಾರೆ. 

Tap to resize

Latest Videos

undefined

ವೈ ಎಸ್ ಆರ್ ಕಾಂಗ್ರೆಸ್ 10 ವರ್ಷಗಳ ಕಾಲ ಪ್ರತಿಪಕ್ಷದಲ್ಲಿದ್ದಾಗ ರೋಜಾ ಉತ್ತಮ ಕೆಲಸಗಳ ಮೂಲಕ ಗುರುತಿಸಿಕೊಂಡಿದ್ದರು. ಹಾಗಾಗಿ ಈ ಜಗನ್ ಸಂಪುಟದಲ್ಲಿ ಅವರ ಹೆಸರನ್ನು ನಿರೀಕ್ಷಿಸಲಾಗಿತ್ತು. ಆದರೆ ಹೆಸರನ್ನು ಕೈ ಬಿಟ್ಟಿದ್ದಕ್ಕೆ ರೋಜಾ ಮುನಿಸಿಕೊಂಡಿದ್ದಾರೆ. 

ಟಿಡಿಪಿ ಅಭ್ಯರ್ಥಿ ಪ್ರಕಾಶ್ ವಿರುದ್ಧ ರೋಜಾ 2630 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. 


 

click me!