1 ವಾರ ರಾಜ್ಯದಲ್ಲಿ 30 ರೈಲು ಸಂಚಾರ ರದ್ದು : ಯಾವ ರೈಲು ಇರಲ್ಲ?

Published : Jun 11, 2019, 11:24 AM IST
1 ವಾರ ರಾಜ್ಯದಲ್ಲಿ 30 ರೈಲು ಸಂಚಾರ ರದ್ದು : ಯಾವ ರೈಲು ಇರಲ್ಲ?

ಸಾರಾಂಶ

ರೈಲ್ವೆ ಹಳಿ ಇಂಟರ್ ಲಾಕಿಂಗ್ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜೂ. 16 ರಿಂದ 23 ರವರೆಗೆ ರಾಜ್ಯದಲ್ಲಿ ವಿವಿಧ ಮಾರ್ಗಗಳಲ್ಲಿ ಸಂಚರಿಸುವ 30  ರೈಲುಗಳ ಸಂಚಾರ ರದ್ದುಗೊಳಿಸಿದೆ. 

ಬೆಂಗಳೂರು :   ನೈಋತ್ಯ ರೈಲ್ವೆಯು ಮೈಸೂರು ವಿಭಾಗ ಸೇರಿದಂತೆ ಹಲವು ಕಡೆ ರೈಲ್ವೆ ಹಳಿ ಇಂಟರ್ ಲಾಕಿಂಗ್ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜೂ. 16 ರಿಂದ 23 ರವರೆಗೆ ಮೈಸೂರು, ಸೇಲಂ, ಚಾಮರಾಜನಗರ ಸೇರಿದಂತೆ ವಿವಿಧ ಮಾರ್ಗಗಳಲ್ಲಿ ಸಂಚರಿಸುವ 30  ರೈಲುಗಳ ಸಂಚಾರ ರದ್ದುಗೊಳಿಸಿದೆ. ಜೂ. 21 ರಂದು ಮೈಸೂರಿನಿಂದ ಹೊರಡುವ ಮೈಸೂರು- ರೇಣಿಗುಂಟ ಎಕ್ಸ್‌ಪ್ರೆಸ್ ರೈಲು, ಜೂ. 22 ರಂದು ರೇಣಿಗುಂಟದಿಂದ ಹೊರಡುವ ರೇಣಿಗುಂಟ-ಮೈಸೂರು ಎಕ್ಸ್ ಪ್ರೆಸ್ ರೈಲು, ಜೂ. 16 ರಿಂದ  23 ರ ವರೆಗೆ ರದ್ದಾಗಲಿವೆ. 

ಚಾಮರಾಜನಗರ- ಮೈಸೂರು ಪ್ಯಾಸೆಂಜರ್
ಮೈಸೂರು -ಯಶವಂತಪುರ ಪ್ಯಾಸೆಂಜರ್
ಯಶವಂತಪುರ-ಸೇಲಂ ಪ್ಯಾಸೆಂಜರ್
ಸೇಲಂ-ಯಶವಂತಪುರ ಪ್ಯಾಸೆಂಜರ್
ಯಶವಂತಪುರ- ಮೈಸೂರು ಪ್ಯಾಸೆಂಜರ್
ಮೈಸೂರು-ಚಾಮರಾಜನಗರ ಪ್ಯಾಸೆಂಜರ್
ಚಾಮರಾಜನಗರ-ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್
ಕೆಎಸ್‌ಆರ್ ಬೆಂಗಳೂರು-ಶಿವಮೊಗ್ಗ ಟೌನ್ ಪ್ಯಾಸೆಂಜರ್ 
ಶಿವಮೊಗ್ಗ ಟೌನ್-ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್
ಕೆಎಸ್‌ಆರ್ ಬೆಂಗಳೂರು- ಚಾಮರಾಜನಗರ ಪ್ಯಾಸೆಂಜರ್
ಮೈಸೂರು-ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್, ಕೆಎಸ್
ಆರ್ ಬೆಂಗಳೂರು- ಮೈಸೂರು ಪ್ಯಾಸೆಂಜರ್ 
ಮೈಸೂರು- ಚಾಮರಾಜನಗರ ಪ್ಯಾಸೆಂಜರ್ ರದ್ದುಗೊಳಿಸಲಾಗಿದೆ.

ಕೆಎಸ್‌ಆರ್ ಬೆಂಗಳೂರು-ಮೈಸೂರು ಪ್ಯಾಸೆಂಜರ್
ಮೈಸೂರು-ಚಾಮರಾಜನಗರ ಪ್ಯಾಸೆಂಜರ್
ಚಾಮರಾಜ ನಗರ-ಮೈಸೂರು ಪ್ಯಾಸೆಂಜರ್
ಮೈಸೂರು-ಕೆಎಸ್ ಆರ್ ಬೆಂಗಳೂರು ಪ್ಯಾಸೆಂಜರ್ 
ಕೆಎಸ್‌ಆರ್ ಬೆಂಗಳೂರು-ಅರಸಿಕೆರೆ ಪ್ಯಾಸೆಂಜರ್
ಅರಸಿಕೆರೆ-ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್
ಕೆಎಸ್‌ಆರ್ ಬೆಂಗಳೂರು-ಮೈಸೂರು ಪ್ಯಾಸೆಂಜರ್
ಮೈಸೂರು-ತಾಳಗುಪ್ಪ ಪ್ಯಾಸೆಂಜರ್
ತಾಳಗುಪ್ಪ -ಮೈಸೂರು ಪ್ಯಾಸೆಂಜರ್
ಮೈಸೂರು- ಚಾಮರಾಜನಗರ ಪ್ಯಾಸೆಂಜರ್
ಚಾಮರಾಜನಗರ-ಮೈಸೂರು ಪ್ಯಾಸೆಂಜರ್
ಮೈಸೂರು-ನಂಜನಗೂಡು ಟೌನ್ ಪ್ಯಾಸೆಂಜರ್
ನಂಜನಗೂಡು ಟೌನ್-ಮೈಸೂರು ಪ್ಯಾಸೆಂಜರ್
ಮೈಸೂರು - ಯಲಹಂಕ ಎಕ್ಸ್‌ಪ್ರೆಸ್
ಯಲಹಂಕ-ಮೈಸೂರು ಎಕ್ಸ್‌ಪ್ರೆಸ್
ಮೈಸೂರು-ಕೆಎಸ್‌ಆರ್ ಬೆಂಗಳೂರು ಹಾಗೂ ಕೆಎಸ್‌ಆರ್
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ರೈಲು ಸಂಚಾರವಿರುವುದಿಲ್ಲ.

ಭಾಗಶಃ ರದ್ದು: ಜೂ.15 ರಿಂದ ಜೂ.22 ರವರೆಗೆ ಕಾಚಿಗುಡ-ಮೈಸೂರು ಎಕ್ಸ್‌ಪ್ರೆಸ್ ರೈಲು ಪಾಂಡವಪುರದವರೆಗೆ ಮಾತ್ರ ಸಂಚರಿಸಲಿದೆ. ಇನ್ನು ಮೈಸೂರು-ಕಾಚಿಗುಡ ಎಕ್ಸ್ ಪ್ರೆಸ್ ರೈಲು ಜೂ. 16ರಿಂದ 23 ರ ವರೆಗೆ ಮೈಸೂರು ಬದಲು ಪಾಂಡವಪುರದಿಂದ ಸಂಚರಿಸಲಿದೆ. ಚೆನ್ನೈ ಸೆಂಟ್ರಲ್ -ಮೈಸೂರು ಎಕ್ಸ್‌ಪ್ರೆಸ್ ರೈಲು ಜೂ. 16ರಿಂದ 23 ರವರೆಗೆ ಪಾಂಡವಪುರದ ವರೆಗೆ ಸಂಚರಿಸಲಿದೆ. ಮೈಸೂರು-ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ಜೂ. 17 ರಿಂದ 24 ರ ವರೆಗೆ ಮೈಸೂರು ಬದಲು ಪಾಂಡವಪುರದಿಂದ ಹೊರಡಲಿದೆ. ಮೈಸೂರು-ಕೆಎಸ್ ಆರ್ ಬೆಂಗಳೂರು ಪ್ಯಾಸೆಂಜರ್ ಜೂ. 16 ರಿಂದ 22 ರ ವರೆಗೆ ಮೈಸೂರು ಬದಲು ನಾಗನಹಳ್ಳಿಯಿಂದ ಸಂಚರಿಸಲಿದೆ. ಕೆಎಸ್ ಆರ್ ಬೆಂಗಳೂರು- ಮೈಸೂರು ಪ್ಯಾಸೆಂಜರ್ ರೈಲು, ಜೂ. 15ರಿಂದ 22 ರ ವರೆಗೆ ನಾಗನಹಳ್ಳಿ ವರೆಗೆ ಮಾತ್ರ  ಸಂಚರಿಸಲಿದೆ. 

ಕೆಎಸ್‌ಆರ್ ಬೆಂಗಳೂರು-ಮೈಸೂರು ಮೆಮು ರೈಲು ಜೂ. 19ರಿಂದ 22ರ ವರೆಗೆ ರಾಮನಗರದ ವರೆಗೆ ಮಾತ್ರ ಸಂಚರಿಸಲಿದೆ. ಮೈಸೂರು- ಕೆಎಸ್‌ಆರ್ ಬೆಂಗಳೂರು ಮೆಮು ರೈಲು ರಾಮನಗರದವರೆಗೆ ಮಾತ್ರ ಸಂಚರಿಸಲಿದೆ. ಮೈಸೂರು- ಕೆಎಸ್‌ಆರ್ ಬೆಂಗಳೂರು ರೈಲು ಎಕ್ಸ್ ಪ್ರೆಸ್ ರೈಲು ಜೂ. 15  ಮತ್ತು 19 ರಂದು ಮಂಡ್ಯದಿಂದ ಸಂಚರಿಸಲಿದೆ.

ಮಾರ್ಗ ಬದಲಾವಣೆ: ಕೆಎಸ್‌ಆರ್ ಬೆಂಗಳೂರು- ಕಣ್ಣೂರು ಕಾರವಾರ ಎಕ್ಸ್‌ಪ್ರೆಸ್ ರೈಲು ಜೂ. 16, 17 ಮತ್ತು 18 ರಂದು ಮಂಡ್ಯ, ಮೈಸೂರು, ಹಾಸನ ಮಾರ್ಗದ ಬದಲು ಚಿಕ್ಕಬಾಣವಾರ, ನೆಲಮಂಗಲ, ಶ್ರವಣಬೆಳಗೊಳ, ಹಾಸನ ಮಾರ್ಗದಲ್ಲಿ ಸಂಚರಿಸಲಿದೆ. ಕಣ್ಣೂರು/ ಕಾರವಾರ - ಕೆಎಸ್ ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಜೂ. 15 , 20 , 21  ಮತ್ತು 22 ರಂದು ಇದೇ ಮಾರ್ಗದಲ್ಲಿ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು