
ತಾವು ಹೊಸ ಜೀವನಕ್ಕೆ ಕಾಲಿಡುತ್ತಿರುವ ಸಮಯ ಕೂಡ ಒಳ್ಳೆಯ ಕೆಲಸಕ್ಕೆ ಸಾಕ್ಷಿಯಾಗಬೇಕೆಂದು ನಂಬಿರುವ ಯಶ್, ಮಾಸ್ತಿಗುಡಿ ಚಿತ್ರೀಕರಣದ ವೇಳೆ ಸಂಭವಿಸಿದ ದುರಂತದಲ್ಲಿ ಸಾವನ್ನಪ್ಪಿದ ಉದಯ್ ಹಾಗೂ ಅನಿಲ್ ಕುಟುಂಬಗಳಿಗೆ ನೆರವಿ ಹಸ್ತ ಚಾಚಿದ್ದಾರೆ. ಇತ್ತೀಚೆಗಷ್ಟೆ ಮದುವೆಯಾದ ಯಶ್, ಅರಕ್ಷತೆಯ ದಿನ ಅನಿಲ್ ಮನೆಗೆ ತೆರಳಿ ಅವರ ಇಬ್ಬರು ಪುಟ್ಟ ಮಕ್ಕಳ ಹೆಸರಿನಲ್ಲಿ ತಲಾ 2.5 ಲಕ್ಷ ಎಫ್ಡಿ ಮಾಡಿರುವ ಬಾಂಡ್ ಪೇಪರ್ ನೀಡಿದ್ದಾರೆ. ಅನಿಲ್ ಮಕ್ಕಳಿಬ್ಬರ ಹೆಸರಿನಲ್ಲೂ 5 ಲಕ್ಷ ರುಪಾಯಿ ಎ್ಡಿ ಮಾಡಿದ್ದು, ಇದರಿಂದ ತಿಂಗಳಿಗೆ ಬರುವ ಹಣದಲ್ಲಿ ಅವರನ್ನು ಓದಿಸುವಂತೆ ಸೂಚಿಸಿದ್ದಾರೆ. ಅದೇ ರೀತಿ ಉದಯ್ ಮನೆಗೂ ತೆರಳಿ ಅವರ ಹೆತ್ತವರ ಹೆಸರಿನಲ್ಲಿ 2.5 ಲಕ್ಷ ರುಪಾಯಿ ಎಫ್ಡಿ ಮಾಡಿರುವ ಬ್ಯಾಂಕ್ ಪತ್ರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಒಟ್ಟಿಗೆ ಅವರಿಗೆ ನೇರವಾಗಿ ದುಡ್ಡು ಕೊಡುವ ಬದಲು ಪ್ರತಿ ತಿಂಗಳು ಜೀವನಕ್ಕೆ ಅನುಕೂಲವಾಗಲೆಂದೇ ಈ ರೀತಿ ಎಫ್ಡಿ ಮಾಡಿದ್ದು, ಈ ಕೆಲಸ ಮಾಡಿದ ನಂತರವೇ ಯಶ್ ಹಾಗೂ ರಾಕಾ ಪಂಡಿತ್ ಅರಕ್ಷತೆಯ ಸ್ಥಳಕ್ಕೆ ಆಗಮಿಸಿದ್ದು. ನಟ ಯಶ್ ಅವರ ಈ ಮದುವೆಯ ಕಾಣಿಕೆಗೆ ಖಳನಟರಾದ ಉದಯ್ ಹಾಗೂ ಅನಿಲ್ ಅವರನ್ನು ಕಳೆದುಕೊಂಡ ಕುಟುಂಬಗಳು ಕೃತಜ್ಞತೆ ಸಲ್ಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.