
ಬೆಂಗಳೂರು(ನ.08): ನಿನ್ನೆ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ದುರಂತ ನಡೆದುಹೋಗಿದೆ. ಬದುಕಿ ಬಾಳಬೇಕಿದ್ದ ಇಬ್ಬರ ಜೀವನ ಜಲಸಮಾಧಿಯಾಗಿ ಹೋಗಿದೆ. ಎಲ್ಲವೂ ನಿಯಮಬದ್ಧ ಮತ್ತು ಮುಂಜಾಗ್ರತೆಯಾಗಿ ನಡೆದಿದ್ದರೆ ಇಂಥ ದುರಂತ ನಡೆಯುತ್ತಿರಲಿಲ್ಲ.
ಆದರೆ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಫೈಟಿಂಗ್ ಚಿತ್ರೀಕರಣದಲ್ಲಿ ಆಗಬಾರದ್ದು ಆಗಿ ಹೋಗಿದೆ. ಹೀರೋಗೆ ಮಾತ್ರ ಲೈಫ್ ಜಾಕೆಟ್ ಆಗಿ ಕಿರಿಯ ಕಲಾವಿದರನ್ನು ನಿರ್ಲಕ್ಷಿಸಿದ್ದರಿಂದ ಅವರ ಜೀವವೇ ಜಲಸಮಾಧಿಯಾಗಿ ಹೋಗಿದೆ.
ಮಾಸ್ತಿಗುಡಿ ಸಿನಿಮಾದ ಈ ಚಿತ್ರೀಕರಣದಲ್ಲಿ ಹೀರೋ ದುನಿಯಾ ವಿಜಯ್ ಹೆಲಿಕಾಪ್ಟರ್ನಲ್ಲಿ ಕೂತು ವಿಲನ್ಗಳಾದ ಅನಿಲ್ ಮತ್ತು ಉದಯ್ನನ್ನು ತಳ್ಳೋ ದೃಶ್ಯವನ್ನು ಸೆರೆ ಹಿಡಿಯಲಾಗ್ತಿತ್ತು. ನೀವು ಗಮನಿಸಿರಬೇಕು... ಇಲ್ಲಿ ಉದಯ್ ಮತ್ತು ಅನಿಲ್ ಇಬ್ಬರಿಗೂ ಲೈಫ್ ಜಾಕೆಟ್ ಇಲ್ಲ.
ಅನಿಲ್ ಮತ್ತು ಉದಯ್ ಧುಮುಕಿದ ನಂತರ ಜಿಗಿಯೋದು ನಟ ದುನಿಯಾ ವಿಜಯ್, ಇಲ್ಲಿ ಗಮನಿಸಿ ದುನಿಯಾ ವಿಜಯ್ ಶರ್ಟ್ ಒಳಗೆ ಲೈಫ್ ಜಾಕೆಟ್ ಹಾಕಿದ್ದಾರೆ. ಯೆಸ್.... ಇದನ್ನೆಲ್ಲ ನೋಡಿದ್ರೆ ನಟ ವಿಜಯ್ಗೆ ಮಾತ್ರ ಏಕೆ ಲೈಫ್ ಜಾಕೆಟ್?... ಕಿರಿಯ ಕಲಾವಿದರ ಜೀವನಕ್ಕೆ ಬೆಲೆಯೇ ಇಲ್ಲವೆ?... ಉದಯ್-ಅನಿಲ್ ಸಾವಿಗೆ ಯಾರು ಹೊಣೆ? ಅನ್ನೋ ಪ್ರಶ್ನೆಗಳು ಹೇಳದೇ ಇರಲ್ಲ.
ಹೆಲಿಕಾಪ್ಟರ್ನಲ್ಲಿದ್ದ ಮೂವರು ತಿಪ್ಪಗೊಂಡನಹಳ್ಳಿ ಜಲಾಶಯಕ್ಕ ಬೀಳ್ತಿದ್ದಂತೆ ಉದಯ್ ಮತ್ತು ಅನಿಲ್ ಈಜುಲ ಬಾರದೆ ಮುಳುಗ್ತಿದ್ರೆ ದುನಿಯಾ ವಿಜಯ್ ಮಾತ್ರ ಲೈಫ್ ಜಾಕೆಟ್ ಇದ್ದಿದ್ದರಿಂದ ಸೇಫ್ ಆಗಿ ಈಜುತ್ತ ದಡ ಸೇರಿದರು.
ಇನ್ನೊಂದೆಡೆ ಲೈಫ್ ಜಾಕೆಟ್ ಇಲ್ಲದೆ ನೀರಿನಲ್ಲಿ ಮುಳುಗುತ್ತಿದ್ದ ಉದಯ್ ಮತ್ತು ಅನಿಲ್ ನನ್ನು ರಕ್ಷಿಸಲು ಬರಬೇಕಾದ ಬೋಟ್ ಕೂಡಾ ಕೆಟ್ಟು ನಿಂತಿತ್ತು.
ಇಲ್ಲಿ ಎದ್ದು ಕಾಣ್ತಿರೋದು ಭದ್ರತೆ ಬಗ್ಗೆ ಚಿತ್ರ ತಂಡ, ವಿಶೇಷವಾಗಿ ನಿರ್ದೇಶಕ, ನಿರ್ಮಾಪಕ ಮತ್ತು ಸಾಹಸ ನಿರ್ದೇಶಕನ ನಿರ್ಲಕ್ಷ್ಯ.
ಹೀರೋ ದುನಿಯಾ ವಿಜಯ್ಗೆ ಮಾತ್ರ ಲೈಫ್ ಜಾಕೆಟ್ ಹಾಕಿ.. ಜೂನಿಯರ್ ಕಲಾವಿದರಾದ ಉದಯ್ ಮತ್ತು ಅನಿಲ್ಗೆ ಲೈಫ್ ಜಾಕೆಟ್ ಹಾಕಲಾಗದೆ ನಿರ್ಲಕ್ಷಿಸಿದ್ದು ಎಷ್ಟು ಸರಿ.? ಇನ್ನೊಂದು ವಿಷ್ಯಾ ಅಂದ್ರೆ ಶೂಟಿಂಗ್ಗೂ ಮೊದಲೇ ಇಬ್ಬರೂ ಕಲಾವಿದರು ನಮಗೆ ನೀರಂದ್ರೆ ಭಯ, ಸರಿಯಾಗೇ ಈಜಕ್ಕೂ ಬರಲ್ಲ ಎಂದಿದ್ರು.
ಇಷ್ಟೆಲ್ಲಾ ಗೊತ್ತಿದ್ರೂ ಅದ್ಯಾವ ಭಂಡಧೈರ್ಯದ ಮೇಲೆ ಉದಯ್ ಮತ್ತು ಅನಿಲ್ರನ್ನು ಹೆಲಿಕಾಪ್ಟರ್ನಿಂದ ದುಮುಕಿಸುವ ದುಸ್ಸಾಹಸಕ್ಕೆ ಕೈಹಾಕಿದರೋ ಆ ದೇವರೇ ಬಲ್ಲ. ಇನ್ನು ತನ್ನ ಮಗನ ಸಾವಿನ ಆಘಾತದಿಂದ ಉದಯ್ ತಾಯಿ ಚಿತ್ರತಂಡ ಮತ್ತು ದುನಿಯಾ ವಿಜಯ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಚಿತ್ರತಂಡದ ನಿರ್ಲಕ್ಷ್ಯದಿಂದ ಬದುಕಿ ಬಾಳಬೇಕಿದ್ದ ಉದಯ್ ಮತ್ತು ಅನಿಲ್ ಇಹಲೋಕ ತ್ಯಜಿಸಿದ್ದಾರೆ. ಇವರಿಬ್ಬರ ಕುಟುಂಬದ ಆಗಿರುವ ನೋವನ್ನು ಯಾವ, ಎಷ್ಟು ಪರಿಹಾರ ಕೊಟ್ಟರೆ ತಾನೇ ತುಂಬಬಲ್ಲದು.. ಕಿರಿಯ ಕಲಾವಿದರ ಜೀವನಕ್ಕೆ ಬೆಲೆಯೇ ಇಲ್ಲವೇ...?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.