ರಾಜಕೀಯ ಆಹ್ವಾನ ನೀಡಿದ ಗೃಹ ಸಚಿವರಿಗೆ ನಟ ಶಿವಣ್ಣ ಏನೆಂದರು ಗೊತ್ತೆ ?

By Internet DeskFirst Published Sep 24, 2016, 9:01 PM IST
Highlights

ಚಾಮರಾಜನಗರ(ಸೆ.25): ಇಂದು ಚಾಮರಾಜನಗರದಲ್ಲಿ ನಡೆದ ವಿಶ್ವಕರ್ಮ ಜಯಂತೋತ್ಸವದಲ್ಲಿ ನಟ ಶಿವಣ್ಣನಿಗೆ ರಾಜಕೀಯ ಹ್ವಾನ ನೀಡಿದ ಇಬ್ಬರು ರಾಜಕೀಯ ಧುರೀಣರಿಗೆ ಶಿವಣ್ಣ ತಮ್ಮದೇ ಸ್ಟೈಲ್'ನಲ್ಲಿ ಉತ್ತರಿಸಿದ್ದಾರೆ.

ಆ ಇಬ್ಬರು ಧುರೀಣರಲ್ಲಿ ಒಬ್ಬರು ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಮತ್ತೊಬ್ಬರು ಹಿರಿಯ ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ. ಗೃಹ ಸಚಿವ ಜಿ. ಪರಮೇಶ್ವರ್ ಅವರು, ಜನ ಮನ್ನಣೆ ಗಳಿಸುವುದು ಸುಲಭವಲ್ಲ, ಜನಮನ್ನಣೆ ಗಳಿಸಿದ್ದೀರಾ 

Latest Videos

ಅದು ಸದುಪಯೋಗವಾಗಲು ರಾಜಕೀಯಕ್ಕೆ ಬರಬೇಕು ಎಂದು ಆಹ್ವಾನವಿತ್ತರು.

ಅದೇ ರೀತಿ ಸಿ.ಎಂ. ಇಬ್ರಾಹಿಂ ಸಹ ಶಿವಣ್ಣ ಅವರನ್ನು ನಟ ಶಿವರಾಜ್ ಕುಮಾರ್ ರಾಜಕೀಯಕ್ಕೆ ಬರಬೇಕು’. ಈ ಮೂಲಕ ಸಾರ್ವಜನಿಕರ ಸೇವೆಗೂ ಮುಂದಾಗಬೇಕು.‘ನಿಮ್ಮ ತಂದೆ ಮಾಡಿದ ತಪ್ಪನ್ನು ನೀವು ಮಾಡಬೇಡಿ’. ‘ರಾಜಕಾರಣಕ್ಕೆ ಆಗಮಿಸಿ, ಸಮಾಜಸೇವೆ ಮಾಡಿ ಎಂದರು.

ಇಬ್ಬರು ನಾಯಕರ ಮಾತನ್ನು ಕೇಳಿಸಿಕೊಂಡ ಶಿವಣ್ಣ ' ಜನಸೇವೆ ಮಾಡಲು ರಾಜಕೀಯಕ್ಕೆ ಬರಬೇಕಿಲ್ಲ. ನನಗೆ ಎಲ್ಲಾ ಪಕ್ಷಗಳಲ್ಲಿಯೂ ಅಭಿಮಾನಿಗಳಿದ್ದಾರೆ. ರಾಜಕೀಯಕ್ಕೆ ಬಂದು ಅಭಿಮಾನಿಗಳನ್ನು ಕಳೆದುಕೊಳ್ಳಲ್ಲ. ನೆಲ, ಜಲ, ಭಾಷೆ ವಿಷಯಕ್ಕೆ ಧಕ್ಕೆಯಾದರೆ ಜನರ ಜೊತೆ ಹೋರಾಟ ಮಾಡುತ್ತೇನೆ ಎಂದು ರಾಜಕೀಯ ಸೇರುವುದನ್ನು ನಯವಾಗಿ ತಿರಸ್ಕರಿಸಿದರು.

click me!